ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ. (ಅನುಕಂಪದ ಆಧಾರದ ಮೇಲೆ ನೇಮಕಾತಿ)
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ.
ಪ್ರಶ್ನೆ ಸರ್ಕಾರಿ ಪ್ರಥಮ ದರ್ಜೆ ಸಹಾಯಕರಾಗಿದ್ದ ನನ್ನ ತಂದೆ , ಇನ್ನೂ ನಾಲ್ಕು ವರ್ಷ ಸೇವಾವಧಿ ಇರುವಾಗಲೇ 2018 ರ ಡಿ .2 ರಂದು ನಿಧನರಾದರು . ನನ್ನ ತಂದೆ ಅವರ ನಿಧನಾಂತರ ಅನುಕಂಪದ ಆಧಾರದ ಮೇಲೆ ಕೆಲಸ ಪಡೆದಿದ್ದರು . ಈಗ ನಾನು ಅನುಕಂಪದ ಆಧಾರದ ಮೇಲೆ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹನಾಗಿದ್ದೇನೆಯೇ ? | ನವೀನ್ ಬಾಗಲಕೋಟೆ
ಕರ್ನಾಟಕ ಸರ್ಕಾರಿ ಸೇವಾ ( ಅನುಕಂಪದ ಮೇರೆಗೆ ನೇಮಕ ) ನಿಯಮಾವಳಿ 1996 ರ ನಿಯಮ 3 ರ ಪ್ರಕಾರ ಮೃತ ಸರ್ಕಾರಿ ನೌಕರನ ಅವಲಂಬಿತ ಪತ್ನಿ , ಮಗ ಅಥವಾ ಮಗಳು ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಅರ್ಹರಾಗಿರುತ್ತಾರೆ . ನಿಮ್ಮ ತಂದೆ ಅನುಕಂಪದ ಮೇರೆಗೆ ಹುದ್ದೆ ಪಡೆದಿದ್ದರೂ ನೀವು ಅವರಂತೆಯೇ ಅನುಕಂಪದ ಮೇರೆಗೆ ಸರ್ಕಾರಿ ಉದ್ಯೋಗ ಪಡೆಯಲು ಅರ್ಹರಾಗಿರುತ್ತೀರಿ . ಹಾಗಾಗಿ ನಿಮ್ಮ ತಂದೆ ನಿಧನ ದಿನಾಂಕದಿಂದ ಒಂದು ವರ್ಷದೊಳಗೆ ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಸಕ್ಷಮ ಪ್ರಾಧಿಕಾರಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.


Comments
Post a Comment