PWD, Water Resources ಹಾಗೂ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯಲ್ಲಿ ತಡೆಹಿಡಿಯಲಾಗಿದ್ದ ಮುಂಬಡ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಭೆ.
PWD, Water Resources ಹಾಗೂ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯಲ್ಲಿ ತಡೆಹಿಡಿಯಲಾಗಿದ್ದ ಮುಂಬಡ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಭೆ.
ಮೂರು ಇಲಾಖೆಗಳನ್ನು ಬೇರ್ಪಡಿಸಿಸುವ ಕಾರ್ಯ ಪೂರ್ಣಗೊಳ್ಳುವವರೆಗೆ DPAR ACS ನೇತೃತ್ವದ ಸಮಿತಿಯು ಮುಂಬಡ್ತಿ ನೀಡದಂತೆ ತಾತ್ಕಾಲಿಕವಾಗಿ ತಡೆಹಿಡಿದಿತ್ತು.
ಇದರಿಂದಾಗಿ ಬಹಳ ವರ್ಷಗಳಿಂದ PWD, Water Resources ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ-ನೌಕರರು ಮುಂಬಡ್ತಿಯಿಂದ ವಂಚಿತರಾಗುತ್ತಿದ್ದು ಈ ಬಗ್ಗೆ ರಾಜ್ಯಾಧ್ಯಕ್ಷರು DPAR ACS ಶ್ರೀಯುತ ರವಿಕುಮಾರ್ ಅವರನ್ನು ಭೇಟಿ ಮಾಡಿ ಮುಂಬಡ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು.
ಗ್ರೂಪ್ ಸಿ ನೌಕರರಿಗೆ ಮುಂಬಡ್ತಿಗೆ ಅಡ್ಡಿಯಾಗದಂತೆ ನಿರ್ಣಯ ಕೈಗೊಳ್ಳಲು ಇದೇ ತಿಂಗಳ 30 ರಂದು ಸಂಜೆ 4:00 ಗಂಟೆಗೆ ಸಭೆಯನ್ನು ಏರ್ಪಡಿಸಲಾಗಿದ್ದು, ಸಮಸ್ಯೆ ಇತ್ಯರ್ಥವಾಗಲಿದೆಯೆಂದು ತಿಳಿಸಲು ಸಂಘವು ಹರ್ಷಿಸುತ್ತದೆ.
Comments
Post a Comment