1. ನೌಕರರ ಮೇಲಿನ ಹಲ್ಲೆಗೆ ಕಡಿವಾಣ.
2.ಜಿಲ್ಲಾ ಹಂತದಲ್ಲಿನ ಸಕ್ಷಮ ಪ್ರಾಧಿಕಾರಿಗಳು ಬಾಕಿ ಇರುವ ಪದೋನ್ನತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಜ್ಯೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸುವುದು ಹಾಗೂ ಪ್ರತಿ 6 ತಿಂಗಳಿಗೊಮ್ಮೆ ಅರ್ಹ ನೌಕರರಿಗೆ ಪದೋನ್ನತಿ ನೀಡಲು ಕ್ರಮ.
3.ಕಾಲಮಿತಿ ವೇತನ ಬಡ್ತಿ, 15 ವರ್ಷಗಳ ಸ್ವಯಂಚಾಲಿತ ವೇತನ ಬಡ್ತಿ, 20,25 ಹಾಗೂ 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗಳನ್ನು ವಿಳಂಬವಿಲ್ಲದೆ ಶೀಘ್ರ ಇತ್ಯರ್ಥಪಡಿಸಲು ಆಯಾ ಇಲಾಖಾ ಮುಖ್ಯಸ್ಥರಿಗೆ ಸೂಚನೆ.
4.ಅನುಕಂಪ ನೇಮಕಾತಿ,ಸಾಮಾನ್ಯ ಭವಿಷ್ಯ ನಿಧಿ ಮುಂಗಡಗಳು,ವೇತನ ಬಡ್ತಿ, ವೇತನ ಪಾವತಿಯಲ್ಲಿನ ವಿಳಂಬ ಹಾಗೂ ಇತ್ಯಾದಿ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಮಂಜೂರು ಮಾಡಲು ಕ್ರಮಕೈಗೊಳ್ಳುವುದು.
5.ಜಿಲ್ಲಾ ಮಟ್ಟದ ಅಧಿಕಾರಿಗಳು ಅವರ ಅಧೀನದಲ್ಲಿ ಬರುವ ತಾಲ್ಲೂಕು ಮಟ್ಟದ ಕಚೇರಿಗಳಿಗೆ ಭೇಟಿ ನೀಡಿ ಸ್ಥಳೀಯವಾಗಿ ಉದ್ಭವಿಸಬಹುದಾದ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಸಭೆ ಆಯೋಜಿಸುವುದು.
6.ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನದಂತೆ ಕೋವಿಡ್-19 ನಿರ್ವಹಣೆಗೆ ಶ್ರಮವಹಿಸಿ ಕರ್ತವ್ಯದಲ್ಲಿ ತೊಡಗಿರುವ ಎಲ್ಲಾ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ರಕ್ಷಣೆ ಕೊಡುವುದರ ಜೊತೆಗೆ ಗೌರವದಿಂದ ನಡೆಸಿಕೊಳ್ಳುವುದು.
7.ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಸ್ಥಾನದಲ್ಲಿರುವ ವಸತಿಗೃಹಗಳು ಶಿಥಿಲಗೊಂಡಿದ್ದು, ಅವುಗಳನ್ನು ದುರಸ್ಥಿಪಡಿಸಬೇಕಾಗಿರುತ್ತದೆ. ಹಾಗಾಗಿ ದುರಸ್ಥಿ ಕಾರ್ಯಕ್ಕೆ ತಗಲುವ ಕ್ರೂಢೀಕೃತ ಅನುದಾನ ಕೋರಿಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದು.
8.ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ವಸತಿಗೃಹಗಳ ಕೊರತೆಯಿದ್ದು, ಸರ್ಕಾರಿ ನೌಕರರು ದುಬಾರಿ ಬಾಡಿಗೆ ಪಾವತಿಸಲು ಕಷ್ಟವಾಗುವುದರಿಂದ ಈಗಿರುವ ವಸತಿಗೃಹಗಳನ್ನು ದುರಸ್ಥಿಪಡಿಸುವುದರ ಜೊತೆಗೆ ಹೊಸ ವಸತಿಗೃಹಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಕೋರಿಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದು.
9.ಶಿಕ್ಷಕರ ವಿವಿಧ ಚಟುವಟಿಕೆಗಳಿಗೆ ಯೋಗ್ಯವಾದ ಗುರುಭವನ ಇಲ್ಲದ ಕಾರಣ ಸಂಘದ ಮನವಿ ಮೇರೆಗೆ ಹೊಸ ಗುರುಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ರೂ. 2.00 ಕೋಟಿ ಅನುದಾನ ಮಂಜೂರಾಗಿದ್ದು, ಸೆಪ್ಟಂಬರ್ 5 ರಂದು ಭೂಮಿಪೂಜೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಡಿ.ಡಿ.ಪಿ.ಐ ರವರಿಗೆ ಸೂಚಿಸಲಾಯಿತು.
10.ಜಿಲ್ಲೆಯಲ್ಲಿರುವ ಬಹುತೇಕ ಪ್ರೌಢ/ಪ್ರಾಥಮಿಕ ಶಾಲೆ ಹಾಗೂ ಎಲ್ಲಾ ಆರೋಗ್ಯ ಸಮುದಾಯ/ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಬಂಧಿಸಿದ ಕಟ್ಟಡ/ನಿವೇಶನಗಳ ಖಾತೆಗಳು ಕ್ರಮಬಧ್ಧವಾಗಿರುವುದಿಲ್ಲ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಇವುಗಳ ಇತ್ಯರ್ಥಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲು ತೀರ್ಮಾನಿಸಲಾಯಿತು.
11.ಕಟ್ಟಡದಲ್ಲಿ ಬಾಡಿಗೆ ಇರುವ ಕಚೇರಿಗಳನ್ನು ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸುವುದು ಹಾಗೂ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಬರುವ ಕೆಲವು ಕಚೇರಿಗಳು ಒಂದೆಡೆ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬೇಡಿಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
12.ಅಧಿಕಾರಿ/ನೌಕರರ ಹಾಗೂ ಶಿಕ್ಷಕರ ಕೆಲಸವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಗುಣಮಟ್ಟದ ತರಬೇತಿಗಳನ್ನು ಆಯೋಜಿಸಲು ಡಯೆಟ್/ಡಿ.ಟಿ.ಐ ಅಧಿಕಾರಿಗಳ ಸಭೆ ಆಯೋಜನೆ.
13.ಸರ್ಕಾರಿ ಕಟ್ಟಡದ ಮೇಲೆ ಗಿಡಗಂಟೆಗಳು ಬೆಳೆದು ಶಿಥಿಲಗೊಂಡಿರುವ ಬಗ್ಗೆ ಅಧ್ಯಕ್ಷರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇವುಗಳ ಸ್ವಚ್ಛತೆಗೆ ಕ್ರಮವಹಿಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಯಿತು.
14.ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ಏರ್ಪಡಿಸುವುದರ ಜೊತೆಗೆ ಸಭೆಯಲ್ಲಿ ಚರ್ಚಿಸಲಾದ ಅಂಶಗಳಿಗೆ ಎಲ್ಲ ಇಲಾಖಾ ಮುಖ್ಯಸ್ಥರು ಕಡ್ಡಾಯವಾಗಿ ಅನುಸರಣಾ ವರದಿಯನ್ನು ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Comments
Post a Comment