"ರಾಜ್ಯ ಸರ್ಕಾರಿ ನೌಕರರ ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ - ನೌಕರರ ಸ್ನೇಹಿ ಆರೋಗ್ಯ ಯೋಜನೆ" ಶೀಘ್ರದಲ್ಲೇ ಜಾರಿ.
ರಾಜ್ಯ ಸರ್ಕಾರಿ ನೌಕರರ ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ - ನೌಕರರ ಸ್ನೇಹಿ ಆರೋಗ್ಯ ಯೋಜನೆ" ಶೀಘ್ರದಲ್ಲೇ ಜಾರಿ."
ಪ್ರಸ್ತುತ ಜಾರಿಯಲ್ಲಿರುವ "ಆರೋಗ್ಯ ಸಂಜೀವಿನಿ" ಆರೋಗ್ಯ ಯೋಜನೆಯು ರಾಜ್ಯದ ಸರ್ಕಾರಿ ನೌಕರರಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಇರುವುದಿಲ್ಲ. ಇದನ್ನು ಮನಗಂಡ ಸಂಘವು ಈ ಆರೋಗ್ಯ ಯೋಜನಯಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿ ಒಂದು ಹೊಸ ಪ್ರಯೋಜನಕಾರಿ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು.
ಮನವಿಗೆ ಸ್ಪಂದಿಸಿರುವ ಸರ್ಕಾರವು ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ ನೀಡುವ ಉದ್ದೇಶದಿಂದ ನೂತನ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಕಳೆದ ಬಜೆಟ್ ನಲ್ಲಿ ರೂ. 50.00 ಕೋಟಿ ಹಣವನ್ನು ಮೀಸಲಿರಿತ್ತು.
ಈ ಯೋಜನೆಯ ಅನುಷ್ಠಾನಗೊಳಿಸಲು ತಜ್ಞರೊಂದಿಗೆ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಸುಧೀರ್ಘವಾದ ಸಮಾಲೋಚನೆ ನಡೆಸಿದರು.
ಸರ್, ksgea ಕೈ ಗೊಳ್ಳುತ್ತಿರುವ ಪ್ರತಿಯೊಂದು ಕೆಲಸಕ್ಕೆ... ಘನ ಸರಕಾರ ಪಾಸಿಟಿವ್ ಅಟ್ಟಿಟ್ಯೂಡ್ ನಲ್ಲಿ ಸಾಗುವಂತೆ ಮಾಡುತ್ತಿರೋ..... ನಮ್ಮ ಹೆಮ್ಮೆಯ ರಾಜ್ಯಾಧ್ಯಕ್ಷ ರಾದ.... ಶ್ರೀ C.S. ಷಡಕ್ಷರಿ ಸರ್ & ತಂಡಕ್ಕೆ........
ReplyDeleteಅಭಿನಂದನೆಗಳು.
ಇನ್ನೊಂದು ಚಿಕ್ಕ ಬೇಡಿಕೆ ತಮ್ಮ ಆದ್ಯ ಗಮನಕ್ಕೆ ಸರ್......
ಪ್ರಾಥಮಿಕ ಶಾಲಾ B.Ed spl -2015-17 ರ ಬ್ಯಾಚ್ ನ ಎಲ್ಲಾ 250 ಶಿಕ್ಷಕರು....
2-ಸಾಮಾನ್ಯ ಮೆಥಡ್ & ಒಂದು ಸ್ಪೆಷಲ್ ಮೆಥಡ್ ನಲ್ಲಿ ನಮ್ಮದೊಂದೇ ಬ್ಯಾಚ್ ಈ ರೀತಿ B.Ed ಕಂಪ್ಲೀಟ್ ಮಾಡಿದ್ದು....(ಹಿಂದಿನ 2009 ರಿಂದ2014 ರ ವರೆಗೂ ಕೇವಲ ಸಿಂಗಲ್ ಮೆಥಡ್ ಇತ್ತು ಸರ್)
ನಮ್ಮ ಟೀಮ್ ಗೆ... ಹೈ ಸ್ಕೂಲ್ ಗೆ ಭಡ್ತಿ ಗೆ ಸಾಮಾನ್ಯ b. Ed ನವರ ಜೊತೆಗೆ ಪರಿಗಣಿಸುವಂತೆ, ಇಲ್ಲವೇ.....
ರಾಜ್ಯದ BRC ಗಳಲ್ಲಿ ಖಾಲಿ ಇರುವ IERT ಪ್ರೌಢ ಹುದ್ದೆಗೆ ನೇರವಾಗಿ ಪದೋನ್ನತಿ ನೀಡುವಂತೆ... ಮಾನ್ಯ ಆಯುಕ್ತರು ಸಾ. ಶಿ. ಇ. ರವರಿಗೆ ಶಿಫಾರಸ್ಸು ಮಾಡಿ ನಮ್ಮ ತಂಡಕ್ಕೆ ಆಶೀರ್ವಾದ ಮಾಡುವಿರೆಂದು ಕೋರುವೆ.
ಅಭಿಮಾನದೊಂದಿಗೆ....
ತಮ್ಮ ನಂಬಿಗೆಯ,
N. N.ಅಣ್ಣೇರ್, HM.
GovtHP ಸ್ಕೂಲ್, ರಾಣೇಬೆನ್ನೂರ್