Skip to main content

Posts

Showing posts from September, 2020

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಸಂಘದ ಸಂಘಟನೆ ಹಾಗೂ ಆಡಳಿತ್ಮಾಕ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರುಗಳ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆ ಬಗ್ಗೆ.

ಸಂಘದ ಸಂಘಟನೆ ಹಾಗೂ ಆಡಳಿತ್ಮಾಕ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ  ತಾಲ್ಲೂಕು ಅಧ್ಯಕ್ಷರುಗಳ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆ ಬಗ್ಗೆ ಕಳುಹಿಸಲಾದ ಸುತ್ತೋಲೆ ಹಾಗೂ ಜಿಲ್ಲೆ / ತಾಲ್ಲೂಕುಗಳ ಸಂಘದ‌ ಸಂಘಟನೆ-ಆಡಳಿತ್ಮಾತಕ-ಲೆಕ್ಕಪತ್ರಗಳ ವಾರ್ಷಿಕ ವರದಿಯ ಎಕ್ಸೆಲ್‌ ಶೀಟ್ ನ ಕಡತಗಳನ್ನು‌ ಇಲ್ಲಿ ತಾವು ಪಡೆಯಬಹುದು. ➡ ಜಿಲ್ಲಾ ಸಂಘದ‌ ವರದಿಯ Excel Sheet ಗಾಗಿ ಇಲ್ಲಿ ಕ್ಲಿಕ್ ಮಾಡಿ.✔   ➡ ತಾಲ್ಲೂಕು ಸಂಘದ‌ ವರದಿಯ Excel Sheet ಗಾಗಿ ಇಲ್ಲಿ ಕ್ಲಿಕ್ ಮಾಡಿ.✔  ಈ ಕಡತಗಳನ್ನು ನುಡಿ 4.0 font ರಲ್ಲಿ ರಚನೆ ಮಾಡಲಾಗಿದೆ. ಹೆಚ್ಚಿನ   ಮಾಹಿತಿಗಾಗಿ ಸಂಪರ್ಕಿಸಿ: Facebook           Telegram,       Blogspot .      Website .     WhatsApp         Youtube   @syedKSGEA

PWD, Water Resources ಹಾಗೂ ಪಂಚಾಯತ್ ಇಂಜಿನಿಯರಿಂಗ್ ‌ಇಲಾಖೆಯ‌‌ಲ್ಲಿ ತಡೆಹಿಡಿಯಲಾಗಿದ್ದ‌ ಮುಂಬಡ್ತಿ ಪ್ರಕ್ರಿಯೆಗಳನ್ನು ‌ಪ್ರಾರಂಭಿಸಲು‌ ಸಭೆ.

PWD, Water Resources ಹಾಗೂ ಪಂಚಾಯತ್ ಇಂಜಿನಿಯರಿಂಗ್ ‌ಇಲಾಖೆಯ‌‌ಲ್ಲಿ ತಡೆಹಿಡಿಯಲಾಗಿದ್ದ‌ ಮುಂಬಡ್ತಿ ಪ್ರಕ್ರಿಯೆಗಳನ್ನು ‌ಪ್ರಾರಂಭಿಸಲು‌ ಸಭೆ. ಮೂರು ಇಲಾಖೆಗಳನ್ನು ಬೇರ್ಪಡಿಸಿಸುವ ಕಾರ್ಯ ಪೂರ್ಣಗೊಳ್ಳುವವರೆಗೆ DPAR ACS ನೇತೃತ್ವದ ಸಮಿತಿಯು ಮುಂಬಡ್ತಿ ನೀಡದಂತೆ ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಇದರಿಂದಾಗಿ ಬಹಳ ವರ್ಷಗಳಿಂದ‌ PWD, Water Resources ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ-ನೌಕರರು ಮುಂಬಡ್ತಿಯಿಂದ ವಂಚಿತರಾಗುತ್ತಿದ್ದು ಈ ಬಗ್ಗೆ ರಾಜ್ಯಾಧ್ಯಕ್ಷರು DPAR ACS ಶ್ರೀಯುತ ರವಿಕುಮಾರ್ ಅವರನ್ನು ಭೇಟಿ ಮಾಡಿ ಮುಂಬಡ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ‌ ನೀಡುವಂತೆ ಮನವಿ ಮಾಡಿದ್ದರು. ಗ್ರೂಪ್ ಸಿ‌  ನೌಕರರಿಗೆ ಮುಂಬಡ್ತಿಗೆ ಅಡ್ಡಿಯಾಗದಂತೆ ನಿರ್ಣಯ ಕೈಗೊಳ್ಳಲು ಇದೇ ತಿಂಗಳ 30 ರಂದು ಸಂಜೆ 4:00 ಗಂಟೆಗೆ ಸಭೆಯನ್ನು ಏರ್ಪಡಿಸಲಾಗಿದ್ದು, ಸಮಸ್ಯೆ ಇತ್ಯರ್ಥವಾಗಲಿದೆಯೆಂದು ತಿಳಿಸಲು ಸಂಘವು ಹರ್ಷಿಸುತ್ತದೆ. ಹೆಚ್ಚಿನ   ಮಾಹಿತಿಗಾಗಿ ಸಂಪರ್ಕಿಸಿ: Facebook           Telegram,       Blogspot .      Website .     WhatsApp    ...

"ಸಾರ್ವಜನಿಕ ಶಿಕ್ಷಣ ಇಲಾಖೆಯ C & R ಸಮಗ್ರ‌ ತಿದ್ದುಪಡಿಗೆ ಸೂಚನೆ"

ಸಾರ್ವಜನಿಕ ಶಿಕ್ಷಣ ಇಲಾಖೆಯ  C & R ಸಮಗ್ರ‌ ತಿದ್ದುಪಡಿಗೆ ಸೂಚನೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಸ್ತ ಅಧಿಕಾರಿ, ಭೋದಕ ಹಾಗೂ‌‌ ಭೋಧಕೇತರ‌ ಸಿಬ್ಬಂದಿ‌ ವರ್ಗದವರ‌ ಗಮನಕ್ಕೆ. ಸಂಘದ ಮನವಿ‌ ಮೇರೆಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ‌ ಪ್ರಾಥಮಿಕ‌ ಮತ್ತು ಪ್ರೌಢ ಶಿಕ್ಷಣ ಸಚಿವರು ವೃಂದ ಮತ್ತು ನೇಮಕಾತಿ‌ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರುವಂತೆ ಸೂಚಿಸಿರುತ್ತಾರೆ. ಈ ಸಂಬಂಧ ಇ-ಆಡಳಿತ ಹಾಗೂ ಆರ್ಥಿಕ ಇಲಾಖೆಯ ಸಹಮತಿ ನಂತರ ಕರಡು ನಿಯಮಗಳನ್ನು ಪ್ರಕಟಿಸಿ ಸಲಹೆ-ಆಕ್ಷೇಪಣೆಗಳಿಗೆ ಆಹ್ವಾನಿಸಲಾಗುವುದು. ಹೆಚ್ಚಿನ   ಸಂಪರ್ಕಿಸಿ: Facebook           Telegram,       Blogspot .      Website .     WhatsApp         Youtube   @syedKSGEA

"ಸರ್ಕಾರಿ ‌ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವತ್ತಿರುವ ಉಪನ್ಯಾಸಕರ ವೃಂದದವರಿಗೆ ಪ್ರಾಂಶುಪಾಲರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿರುವ ಆದೇಶ."

ಪದವಿಪೂರ್ವ ಶಿಕ್ಷಣ ಇಲಾಖೆಯ, ಸರ್ಕಾರಿ ‌ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವತ್ತಿರುವ ಉಪನ್ಯಾಸಕರ ವೃಂದದವರಿಗೆ ಪ್ರಾಂಶುಪಾಲರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿರುವ ಆದೇಶ. 👇 ಆದೇಶದ ಪಿಡಿಎಫ್ ಫೈಲ್ ಪ್ರತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ ಹೆಚ್ಚಿನ ಮಾ ಹಿತಿಗಾಗಿ ಸಂಪರ್ಕಿಸಿ: Facebook           Telegram,       Blogspot .      Website .     WhatsApp         Youtube   @syedKSGEA

"ಸಾರ್ವಜನಿಕ ಶಿಕ್ಷಣ ಇಲಾಖೆಯ ಭೋಧಕೇತರ ಸಿಬ್ಬಂದಿ 164 ಪ್ರಥಮ ದರ್ಜೆ ಸಹಾಯಕರಿಗೆ ಅಧೀಕ್ಷಕ ಹುದ್ದೆಗೆ ಪದೋನ್ನತಿ."

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರಂತರ ಪ್ರಯತ್ನದ ಫಲವಾಗಿ  ಸಾರ್ವಜನಿಕ ಶಿಕ್ಷಣ ಇಲಾಖೆಯ  ಭೋಧಕೇತರ ಸಿಬ್ಬಂದಿ 164 ಪ್ರಥಮ ದರ್ಜೆ ಸಹಾಯಕರಿಗೆ ಅಧೀಕ್ಷಕ ಹುದ್ದೆಗೆ ಪದೋನ್ನತಿ ದೊರೆತಿದೆ. ಇವರಿಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಸೆಪ್ಟೆಂಬರ್ 28-29ರಂದು, ಆಯುಕ್ತರ ಕಚೇರಿ, ನೃಪತುಂಗ ರಸ್ತೆ,  ಬೆಂಗಳೂರು ಇಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. 👇 ಆದೇಶದ ಪಿಡಿಎಫ್ ಫೈಲ್ ಪ್ರತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ ಹೆಚ್ಚಿನ ಮಾ ಹಿತಿಗಾಗಿ ಸಂಪರ್ಕಿಸಿ: Facebook           Telegram,       Blogspot .      Website .     WhatsApp         Youtube   @syedKSGEA

"PWD, Water Resources ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರ ಪದೋನ್ನತಿ"

  PWD, Water Resources ಹಾಗೂ ಪಂಚಾಯತ್ ಇಂಜಿನಿಯರಿಂಗ್ ‌ಇಲಾಖೆಯ‌‌ ದ್ವಿತೀಯ ದರ್ಜೆ ಸಹಾಯಕರ ಆದ್ಯ‌‌ ಗಮನಕ್ಕೆ. Add caption PWD, Water Resources ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಒಂದೇ ಹುದ್ದೆಯಲ್ಲಿ ಪದೋನ್ನತಿ  ಇಲ್ಲದೇ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಗ್ಗೆ ರಾಜ್ಯಾಧ್ಯಕ್ಷರಾದ ಗಮನಕ್ಕೆ ತರಲಾಗಿತ್ತು. ಪದೋನ್ನತಿ ವಂಚಿತ ದ್ವಿತೀಯ ದರ್ಜೆ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪದೋನ್ನತಿ ನೀಡಲು ಅನುಕೂಲವಾಗುವಂತೆ DPC ಸಭೆಯ ದಿನಾಂಕ‌ ನಿಗದಿಗೊಳಿಸಲು ಹಾಗೂ ಪ್ರಥಮ ದರ್ಜೆ ಸಹಾಯಕರ ಖಾಲಿ‌ ಹುದ್ದೆಗಳ‌ ವಿವರಗಳನ್ನು ನೀಡುವಂತೆ ಸನ್ಮಾನ್ಯ ಜಲ ಸಂಪನ್ಮೂಲ‌ ಸಚಿವರೊಂದಿಗೆ ರಾಜ್ಯಾಧ್ಯಕ್ಷರು ಚರ್ಚಿಸಿದ ನಂತರ ಕಡತವು ಅನುಮೋದನೆಗೊಂಡಿದ್ದು, ಇದಕ್ಕಾಗಿ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಗೌರವಾಧ್ಯಕ್ಷರು, ಹಾಗೂ ಖಜಾಂಚಿಗಳು‌ ಮತ್ತು ಕೇಂದ್ರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ. ವಿ. ರುದ್ರಪ್ಪ, ಶ್ರೀ ಟಿ. ಶ್ರೀನಿವಾಸ್ ರವರಿಗೆ ಧನ್ಯವಾದಗಳು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Facebook           Telegram,       Blogspot .      Website .     WhatsApp         Youtube ...

''ರಾಜ್ಯ ಸರ್ಕಾರಿ ನೌಕರರ ದಿನಾಚರಣೆ - ರಾಜ್ಯದ ವಿವಿಧ ಜಿಲ್ಲೆಗಳ ದಿನಪತ್ರಿಕೆಗಳ ವರದಿ.''

 ''ರಾಜ್ಯ ಸರ್ಕಾರಿ ನೌಕರರ ದಿನಾಚರಣೆ - ರಾಜ್ಯದ ವಿವಿಧ ಜಿಲ್ಲೆಗಳ ದಿನಪತ್ರಿಕೆಗಳ ವರದಿ.'' ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Facebook           Telegram,       Blogspot .      Website .     WhatsApp         Youtube   @syedKSGEA

"ರಾಜ್ಯ ಸರ್ಕಾರಿ‌ ನೌಕರರ ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ - ನೌಕರರ ಸ್ನೇಹಿ ಆರೋಗ್ಯ ಯೋಜನೆ" ಶೀಘ್ರದಲ್ಲೇ ಜಾರಿ.

ರಾಜ್ಯ ಸರ್ಕಾರಿ‌ ನೌಕರರ ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ - ನೌಕರರ ಸ್ನೇಹಿ ಆರೋಗ್ಯ ಯೋಜನೆ" ಶೀಘ್ರದಲ್ಲೇ ಜಾರಿ." ಪ್ರಸ್ತುತ ಜಾರಿಯಲ್ಲಿರುವ "ಆರೋಗ್ಯ ಸಂಜೀವಿನಿ"  ಆರೋಗ್ಯ ಯೋಜನೆಯು ರಾಜ್ಯದ ಸರ್ಕಾರಿ ನೌಕರರಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಇರುವುದಿಲ್ಲ. ಇದನ್ನು ಮನಗಂಡ ಸಂಘವು ಈ ಆರೋಗ್ಯ ಯೋಜನಯಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿ ಒಂದು ಹೊಸ ಪ್ರಯೋಜನಕಾರಿ ಯೋಜನೆಯನ್ನು‌ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು. ಮನವಿಗೆ ಸ್ಪಂದಿಸಿರುವ‌ ಸರ್ಕಾರವು ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ  ನೀಡುವ ಉದ್ದೇಶದಿಂದ ನೂತನ ‌ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಕಳೆದ ಬಜೆಟ್ ನಲ್ಲಿ ರೂ. 50.00 ಕೋಟಿ ಹಣವನ್ನು ಮೀಸಲಿರಿತ್ತು. ಈ ಯೋಜನೆಯ ಅನುಷ್ಠಾನಗೊಳಿಸಲು ತಜ್ಞರೊಂದಿಗೆ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಸುಧೀರ್ಘವಾದ ಸಮಾಲೋಚನೆ ನಡೆಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Facebook           Telegram,        Blogspot .      Website .     WhatsApp         Youtube   @syedKSGEA

"ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನೊಂದಣಿ ಆರಂಭ"

"ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನೊಂದಣಿ ಆರಂಭ" ಸರ್ಕಾರಿ ಅಧಿಕಾರಿ-ನೌಕರರ ವಿಶೇಷ ಸೂಚನೆ ಕೋವಿಡ್-19 ಪ್ರಯುಕ್ತ ಸ್ಥಗಿತಗೊಂಡ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಆರಂಭವಾಗಿದ್ದು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಸರ್ಕಾರದ ಆದೇಶದಂತೆ ನೋಂದಣಿಯಾಗಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ನೊಂದಣಿಯಾಗಲು   https://clt.karnataka.gov.in/ ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Facebook           Telegram,        Blogspot .      Website .     WhatsApp         Youtube   @syedKSGEA

"ಸರ್ಕಾರಿ ನೌಕರರ ಸೇವಾ ಸೌಲಭ್ಯ, ಇಲಾಖಾ ಪರೀಕ್ಷೆಗಳ ಅಧ್ಯಯನ ಸಾಮಗ್ರಿಗಳು ಈಗ‌‌ ನೇರವಾಗಿ ಅಂಚೆ‌ ಮೂಲಕ ಲಭ್ಯ"

""ಸರ್ಕಾರಿ ನೌಕರರ ಸೇವಾ ಸೌಲಭ್ಯ, ಇಲಾಖಾ ಪರೀಕ್ಷೆಗಳ ಅಧ್ಯಯನ ಸಾಮಗ್ರಿಗಳು ಈಗ‌‌ ನೇರವಾಗಿ ಅಂಚೆ‌ ಮೂಲಕ ಲಭ್ಯ" ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ‌ನಡೆಸುವ ಎಲ್ಲಾ ಇಲಾಖಾ ಪರೀಕ್ಷೆಗಳ ಅಧ್ಯಯನ ಸಾಮಗ್ರಿಗಳು ಈಗ‌‌ ತಮಗೆ ನೇರವಾಗಿ ಭಾರತೀಯ ಅಂಚೆ‌ ಮೂಲಕ‌ ಲಭ್ಯವಿರುತ್ತವೆ. ಇಲಾಖಾ ಪರೀಕ್ಷೆಗಳಿಗಾಗಿಯೇ ವಿಶೇಷವಾಗಿ ಪರಿಣಿತಿ ಹಾಗೂ ಅನುಭವ ಹೊಂದಿದ ವಿಷಯ ತಜ್ಞರ ಮೂಲಕ ‌ತಯಾರಿಸಲಾಗಿರುವ‌ ಅಧ್ಯಯನ ‌ಸಾಮಗ್ರಿಗಳನ್ನು‌ ತಾವು ಈಗ ನಮ್ಮ‌ ಮೂಲಕ‌ ಖರೀದಿಸಬಹುದು.  ವಿಶೇಷವಾಗಿ ಈ ಅಧ್ಯಯನ ಸಾಮಗ್ರಿಗಳು ತಮ್ಮ ವಿಷಯ ಗ್ರಹಿಕೆಯ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ‌ಹಿಗ್ಗಿಸಿ‌ ವಿಷಯಗಳ ಮೇಲೆ‌ ತಮ್ಮ ‌ಹಿಡಿತವನ್ನು ಸಾಧಿಸಲು ಸಹಾಯ ಮಾಡುತ್ತದೆ. ‌ಅಷ್ಟೇ‌ ಅಲ್ಲದೇ ತಮಗೆ‌ ಅಧ್ಯಯನ ಸಮಯದಲ್ಲಿ ತಮಗೆ‌ ಯಾವುದೇ ರೀತಿಯ ಸಮಸ್ಯೆಗಳು‌‌ ಎದುರಾದ ಸಮಯದಲ್ಲಿ ‌ತಾವುಗಳು ನೇರವಾಗಿ ವಿಷಯ ತಜ್ಞರಿಂದ ‌ಸಲಹೆ-ಸೂಚನೆಗಳನ್ನು‌ ಪಡೆಯಲು ನಾವು ಅನುವು ಮಾಡಿಕೊಡುತ್ತೇವೆ. ತಮಗೆ‌ ಬೇಕಾದ ಅಧ್ಯಯನ ‌ಸಾಮಗ್ರಿಗಳನ್ನು‌ ಆಯ್ಕೆ ಮಾಡಿ, ಕೇವಲ ಪೋನ್ ಮೂಲಕ‌‌ ತಮ್ಮ ಪೂರ್ಣ ಹೆಸರು ಹಾಗೂ ಅಂಚೆಯ ವಿಳಾಸವನ್ನು ಕಳುಹಿಸಿ ಕೊಟ್ಟ 4-6 ದಿನಗಳಲ್ಲಿ ‌ತಮಗೆ‌ ಭಾರತೀಯ ಅಂಚೆ ಮೂಲಕ‌ ಅಧ್ಯಯನ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗುತ್ತದೆ. -:: ಅಧ್ಯಯನ ಸಾಮಗ್ರಿಗಳು ::- ...

"ಕೆ.ಜಿ.ಐ.ಡಿ ಸಮಸ್ಯೆ ಶೀಘ್ರ ಇತ್ಯರ್ಥ" -ಸಿ ಎಸ್ ಷಡಾಕ್ಷರಿ.

  "ಕೆ.ಜಿ.ಐ.ಡಿ ಸಮಸ್ಯೆ ಶೀಘ್ರ ಇತ್ಯರ್ಥ"  - ಸಿ.ಎಸ್ ಷಡಾಕ್ಷರಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆ.ಜಿ.ಐ.ಡಿ ಇಲಾಖೆಯ ಗಣಕೀಕರಣ ಕಾರ್ಯದ ಪ್ರಗತಿ ಹಾಗೂ ಇಲಾಖೆಯನ್ನು ಸಬಲೀಕರಣಗೊಳಿಸುವ ಮೂಲಕ ಕೆ.ಜಿ.ಐ.ಡಿ ಇಲಾಖೆಯಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಶೀಘ್ರವೇ ಸರಿಪಡಿಸಲಾಗುವುದೆಂದು ರಾಜ್ಯಾಧ್ಯಕ್ಷರಾದ ಷಡಾಕ್ಷರಿರವರು ತಿಳಿಸಿದರು.  ಸಂಘದ ಮನವಿ ಮೇರೆಗೆ ಕೆ.ಜಿ.ಐ.ಡಿ  ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯ ನಂತರ ಅವರು ಮಾತನಾಡಿದರು. ಹೊಸ ಪಾಲಿಸಿಗಳ ವಿತರಣೆ,ಪಾಲಿಸಿಗಳ ಮೇಲಿನ ಸಾಲ,ಮೆಚುರಿಟಿ ಕ್ಲೈಮು ಹಾಗೂ ಬೋನಸ್ ವಿತರಣೆಯಲ್ಲಿ ಉಂಟಾಗುತ್ತಿರುವ ಅನಗತ್ಯ ವಿಳಂಬದಿಂದಾಗಿ ನೌಕರರು ಅನುಭವಿಸುತ್ತಿರುವ ತೊಂದರೆಗಳನ್ನು ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದರು. ಇಲಾಖೆಯ ಗಣಕೀಕರಣ ಸಂಪೂರ್ಣಗೊಂಡ ನಂತರ ಸಾಲ, ಫಲಪ್ರದಗೊಂಡ ಪಾಲಿಸಿಗಳ ಅಂತಿಮ ಇತ್ಯರ್ಥ, ಹೊಸ ಪಾಲಿಸಿ, ಬೋನಸ್-ಮುಂತಾದ ಸೌಲಭ್ಯಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಲದ ಅರ್ಜಿ ಒಳಗೊಂಡಂತೆ ಇತ್ಯಾದಿ ಸೌಲಭ್ಯ ಕೋರಿ ಸಲ್ಲಿಸುವ ಮನವಿಗಳನ್ನು ಸಣ್ಣಪುಟ್ಟ ಕಾರಣಗಳಿಗಾಗಿ ಆಕ್ಷೇಪಣೆಯೊಂದಿಗೆ ಹಿಂದಿರುಗಿಸದೆ ಅರ್ಜಿದಾರರ ಮನವಿಯಲ್ಲಿ ನಮೂದಾಗಿರುವ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆದು ಇತ್ಯರ್ಥಪಡಿಸುವಂತೆ ಮನವಿ ಮಾಡಲಾಗಿದೆ.  ಈಗಾಗಲೇ ಶೇಕ...

ಸರ್ಕಾರದ ವತಿಯಿಂದ ಆಚರಿಸಲಾಗುವ ದಿನಾಚರಣೆ, ಜಯಂತಿ ಕಾರ್ಯಕ್ರಮಗಳಲ್ಲಿ ಸಂಘದ ಜಿಲ್ಲೆ ಮತ್ತು ತಾಲ್ಲೂಕು ಶಾಖೆಗಳ ಅಧ್ಯಕ್ಷರುಗಳು ಭಾಗವಹಿಸಲು ಮಾರ್ಗಸೂಚಿಯನ್ನು ಹೊರಡಿಸುವಂತೆ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ

   ಸರ್ಕಾರದ ವತಿಯಿಂದ ಆಚರಿಸಲಾಗುವ ದಿನಾಚರಣೆ, ಜಯಂತಿ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ ಮತ್ತು ತಾಲ್ಲೂಕು ಶಾಖೆಗಳ ಅಧ್ಯಕ್ಷರುಗಳು ಭಾಗವಹಿಸಲು ಮಾರ್ಗಸೂಚಿಯನ್ನು ಹೊರಡಿಸುವಂತೆ ಮಾಡುವಂತೆ ಸಂಘವು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ. ಸರ್ಕಾರದ ವತಿಯಿಂದ ಆಚರಿಸಲಾಗುವ ದಿನಾಚರಣೆ, ಜಯಂತಿ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ ಮತ್ತು ತಾಲ್ಲೂಕು ಶಾಖೆಗಳ ಅಧ್ಯಕ್ಷರುಗಳು ಸಕ್ರಿಯವಾಗಿ  ಭಾಗವಹಿಸಲು ಹಾಗೂ ಸ್ಥಳೀಯ ಆಡಳಿತಕ್ಕೆ ಸಹಕಾರವನ್ನು ನೀಡುವ ಸಂಬಂಧ ಸೂಕ್ತ ಮಾರ್ಗಸೂಚಿಯನ್ನು ಹೊರಡಿಸುವಂತೆ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.  ಈ ಮನವಿಗೆ ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಕಾರತ್ಮಕವಾಗಿ ಸ್ಪಂದಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Facebook           Telegram,        Blogspot .      Website .     WhatsApp         Youtube  

“ರಾಜ್ಯ ಸರ್ಕಾರಿ ನೌಕರರ ದಿನಾಚರಣೆ” -ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ

“ರಾಜ್ಯ ಸರ್ಕಾರಿ ನೌಕರರ ದಿನಾಚರಣೆ” -ಸನ್ಮಾನ್ಯ ಮುಖ್ಯಮಂತ್ರಿಗಳಿಗೆ  ಮನವಿ ರಾಜ್ಯ ಸರ್ಕಾರದ ವತಿಯಿಂದ “ರಾಜ್ಯ ಸರ್ಕಾ ರಿ ನೌಕರರ ದಿನಾಚರಣೆ”ಯನ್ನು ಆಚರಿಸುವ ಸಂಬಂಧ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಗೆ ಮಾನ್ಯ ಮುಖ್ಯಮಂತ್ರಿಗಳು ಸಕಾರತ್ಮಕವಾಗಿ ಸ್ಪಂದಿಸಿ, ಪ್ರತಿ ವರ್ಷ ಸರ್ಕಾರದ ವತಿಯಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರನ್ನು ಒಳಗೊಂಡಂತೆ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಆಚರಿಸುವ ಸಂಬಂಧ ವಿವರವಾದ ಪ್ರಸ್ತವಾನೆಯನ್ನು ಕೂಡಲೇ ಸಿದ್ದಪಡಿಸಿ ಮಂಡಿಸಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿರುತ್ತಾರೆ.   ಮನವಿಗೆ ಸ್ಪಂದಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Facebook           Telegram,        Blogspot .      Website .     WhatsApp         Youtube   @syedKSGEA

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers