2020ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಾಗಿರುವ ಸರ್ಕಾರಿ ಅಧಿಕಾರಿ/ನೌಕರರ ಆದ್ಯ ಗಮನಕ್ಕೆ
2020ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಾಗಿರುವ ಸರ್ಕಾರಿ ಅಧಿಕಾರಿ/ನೌಕರರ ಆದ್ಯ ಗಮನಕ್ಕೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಗಳು 2021ನೇ ಅಕ್ಟೋಬರ್ 21-23ರವರೆಗೆ ದಾವಣಗೆರೆ ನಗರದಲ್ಲಿ ನಡೆಯಲಿದ್ದು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು Online ಮೂಲಕ ನೋಂದಣಿಯಾಗದೆ ಇರುವವರು (ಈಗಾಗಲೇ ನೋಂದಾಯಿಸಿರುವವರನ್ನು ಹೊರತುಪಡಿಸಿ) ದಿನಾಂಕ: 04-10-2021 ರೊಳಗಾಗಿ ಕಡ್ಡಾಯವಾಗಿ ಈ ಕೆಳಕಂಡ ಲಿಂಕ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ತಿಳಿಸಿದೆ.
ಆನ್‌ಲೈನ್ ನೊಂದಣಿ ಪ್ರಾರಂಭ ದಿನಾಂಕ 01-10-2021
ಆನ್‌ಲೈನ್ ನೊಂದಣಿ ಕೊನೆಯ ದಿನಾಂಕ: 04-10-2021
Online ಮೂಲಕ ನೊಂದಣಿಯಾಗಲು ಈ ಲಿಂಕ್ ಉಪಯೋಗಿಸಿ
-:: ಷರತ್ತು ಮತ್ತು ನಿಯಮಗಳು ::-
1. ಈಗಾಗಲೇ ಮಾರ್ಚ್ 2021ರಲ್ಲಿ Online ಮೂಲಕ ನೋಂದಣಿ ಮಾಡಿರುವವರು ಮತ್ತೊಮ್ಮೆ ನೋಂದಣಿ ಮಾಡುವ ಅವಶ್ಯಕತೆ ಇರುವುದಿಲ್ಲ.
2. Online ನಲ್ಲಿ ನೋಂದಣಿ ಮಾಡಿದ ಕ್ರೀಡಾಪಟುಗಳಿಗೆ ಕೇಂದ್ರ ಸಂಘ ಹಾಗೂ ಇಲಾಖಾ ವತಿಯಿಂದ ನೋಂದಣಿ ಕಾರ್ಡ್ನ್ನು ಕ್ರೀಡಾಕೂಟದ ಸ್ಥಳದಲ್ಲಿಯೇ ವಿತರಿಸಲಾಗುವುದು.
3. ನೋಂದಣಿ ಕಾರ್ಡ್ ಹಾಗೂ ಟ್ರಾಕ್‌ಸೂಟ್–ಕ್ಯಾಪ್ ಪಡೆಯುವ ಸಂದರ್ಭದಲ್ಲಿ ಕ್ರೀಡಾಪಟುಗಳು ಕಡ್ಡಾಯವಾಗಿ ತಮ್ಮ ಕಛೇರಿಯ/ ಇಲಾಖೆಯ ಗುರುತಿನ ಚೀಟಿಯನ್ನು ಪರಿಶೀಲನೆಗಾಗಿ ಹಾಜರುಪಡಿಸತಕ್ಕದ್ದು.
4. ನೋಂದಣಿ ಕಾರ್ಡ್ನ್ನು ಸ್ಫರ್ಧೆಗಳಲ್ಲಿ ಭಾವಹಿಸಲು ಹಾಗೂ ಊಟ/ ವಸತಿ/ ಟ್ರಾಕ್ ಸೂಟ್/ ಕ್ಯಾಪ್ ಪಡೆಯುವ ಸಂದರ್ಭದಲ್ಲಿ ತೋರಿಸತಕ್ಕದ್ದು.
5. ಯಾವ ರಾಜ್ಯ ಸರ್ಕಾರಿ ನೌಕರರು ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುತ್ತಾರೋ ಅವರೇ ಭಾಗವಹಿಸಿ ಮೇಲ್ಕಂಡ ಸೌಲಭ್ಯಗಳನ್ನು ಪಡೆಯುವುದು. ಬೇರೊಬ್ಬರಿಗೆ ಸೌಲಭ್ಯಗಳನ್ನು ನೀಡಲಾಗುವುದಿಲ್ಲ.
6. Onlineಮೂಲಕ ನೊಂದಣಿಯಾಗದೇ ನೇರವಾಗಿ ಸರ್ಕಾರಿ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ ಹಾಗೂ ಕ್ರೀಡಾಕೂಟದ ಸ್ಥಳದಲ್ಲಿ ಅನಗತ್ಯ ಗೊಂದಲವನ್ನು ಉಂಟುಮಾಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸಲಾಗುವುದು.
7. ಸುಳ್ಳು ಮಾಹಿತಿ ನೀಡಿ ನೋಂದಣಿ ಮಾಡಿಕೊಂಡು ಈ ಮೇಲ್ಕಂಡ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಕಂಡುಬoದಲ್ಲಿ ಸದರಿ ನೌಕರರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲಿದೆ.
8. ಸರ್ಕಾರಿ ನೌಕರರುಗಳು ಈ ಕ್ರೀಡಾಕೂಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಸಂಯಮದಿoದ ವರ್ತಿಸಿ ಕ್ರೀಡಾಕೂಟಗಳ ಯಶಸ್ವಿಗೆ ಸಹಕರಿಸಲು ಕೋರಿದೆ.
Conform my registration myname
ReplyDelete