ಸ್ಥಗಿತವೇತನ ಬಡ್ತಿ? - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ನಾನು ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದು , ದಿನಾಂಕ 31-7-2021 ರಂದು ನಿವೃತ್ತಳಾಗಿರುತ್ತೇನೆ . ನನ್ನ 2021 ರ ಜೂನ್ ತಿಂಗಳ ವೇತನ ರೂ . 58200 + 5800 ( ರೂ . 30350-58250 ) ಆಗಿರುತ್ತದೆ . ನನ್ನ ವಾರ್ಷಿಕ ಬಡ್ತಿ ಆಗಸ್ಟ್ ನಲ್ಲಿದ್ದು ಪ್ರಸ್ತುತ ಜನವರಿ - ಜುಲೈ ತಿಂಗಳಿನಲ್ಲಿ ಮಂಜೂರಾಗುತ್ತಿರುವುದರಿಂದ ನನಗೆ 8 ನೇ ಸ್ಥಗಿತವೇತನ ಬಡ್ತಿ ಪಡೆಯಲು ಅವಕಾಶವಿದೆಯೇ ? ಸ್ಥಗಿತವೇತನ ಬಡ್ತಿ ಮೊಬಲಗು ತಿಳಿಸಿ . | ಎಂ.ಎಸ್ . ನಾಗರತ್ನ ಹಾಸನ
ದಿನಾಂಕ 4-5-2019ರ ಸರ್ಕಾರದ ಅಧಿಕೃತ ಜ್ಞಾಪನ ಪತ್ರದ ( ಸಂಖ್ಯೆ ಎಫ್‌ಡಿ 1 ಎಸ್‌ಆರ್‌ಎಸ್ 2019 ) ಕಂಡಿಕೆ 2 ( 7 ) ರಲ್ಲಿ ವಾರ್ಷಿಕ ವೇತನ ಬಡ್ತಿಯಂತೆಯೇ ಸ್ಥಗಿತವೇತನ ಬಡ್ತಿಗಳನ್ನು 1 ನೇ ಜನವರಿ ಅಥವಾ 1 ನೇ ಜುಲೈ ತಿಂಗಳಿನಲ್ಲಿಯೇ ಮಂಜೂರಾಡಬೇಕೆಂದು ಸೃಷ್ಟಿಕರಣದ ಸೂಚನೆಯನ್ನು ನೀಡಿದೆ . ಆದ್ದರಿಂದ ನಿಮಗೆ 1 ನೇ ಜುಲೈ 2021 ರಂದು 8 ನೇ ಸ್ಥಗಿತ ವೇತನ ಬಡ್ತಿಯನ್ನು ರೂ . 1450 ಮಂಜೂರು ಮಾಡಿದಾಗ ನಿಮ್ಮ ವೇತನ ರೂ . 58250 + 7250 ಆಗುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಕೈಪಿಡಿ ಕೃತಿಯನ್ನು ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment