ನೇಮಕಾತಿ ನಿಯಮಾವಳಿ ರೀತ್ಯಾ ಸರ್ಕಾರಿ ನೌಕರರಿಗೆ ಅರ್ಜಿ ಸಲ್ಲಿಸಲು ಎಷ್ಟು ವರ್ಷಗಳ ವಯೋಮಿತಿ ಸಡಿಲಿಕೆ ಇದೆ ? - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ಪ್ರಶ್ನೆ ಪ್ರಸ್ತುತ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯಕರ ಪ್ರಾದ್ಯಾಪಕರ ನೇಮಕಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಈ ಅಧಿಸೂಚನೆ ಯಲ್ಲಿ ಸರ್ಕಾರಿ ನೌಕರರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ . ನೇಮಕಾತಿ ನಿಯಮಾವಳಿ ರೀತ್ಯಾ ಸರ್ಕಾರಿ ನೌಕರರಿಗೆ ಅರ್ಜಿ ಸಲ್ಲಿಸಲು ಎಷ್ಟು ವರ್ಷಗಳ ವಯೋಮಿತಿ ಸಡಿಲಿಕೆ ಇದೆ ? ಪ್ರಸ್ತುತ ಐದು ವರ್ಷ ಸಡಿಲಿಕೆ ಈ ನಿಯಮಕ್ಕೆ ಅನುಸಾರವಾಗಿ ಇದೆಯೇ ? ಯತೀಶ , ಎಂ . ಎನ್ ಹಾಸನ ಜಿಲ್ಲೆ
1977 ರ ಕರ್ನಾಟಕ ಸಿವಿಲ್ ಸೇವಾ ( ಸಾಮಾನ್ಯ ನೇಮಕಾತಿ ) ನಿಯಮಾವಳಿಯ ನಿಯಮ ( 9 ) ರಂತೆ ಸರ್ಕಾರಿ ನೌಕರರಿಗೆ ಅವರು ಸಲ್ಲಿಸಿದ ಸೇವೆಗಳಿಗೆ ಅನುಕೂಲವಾಗಿ ಗರಿಷ್ಠ 10 ವರ್ಷಗಳ ಸಡಿಲಿಕೆ ನೀಡಲಾಗುತ್ತದೆ . ಆದರೆ , ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸರ್ಕಾರವು ವಿಶೇಷ ನಿಯಮಾವಳಿಯನ್ನು ರದ್ದುಗೊಳಿಸಿ , ಐದು ವರ್ಷಗಳ ಕಾಲ ಸರ್ಕಾರಿ ನೌಕರರಿಗೆ ಸಡಿಲಿಕೆ ನೀಡಿದೆ . ಈಗಾಗಲೇ ಈ ಹುದ್ದೆಗೆ ಸಾಮಾನ್ಯ ವರ್ಗಕ್ಕೆ 30 ವರ್ಷ , ಹಿಂದುಳಿದ ವರ್ಗಕ್ಕೆ 40 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ 45 ವರ್ಷಗಳನ್ನು ಈ ವಿಶೇಷ ನಿಯಮಾವಳಿಯಂತೆ ಅವಕಾಶ ಕಲ್ಪಿಸಿರುವುದರಿಂದ ಐದು ವರ್ಷ ಸಡಿಲಿಕೆ ನೀಡಿರುವುದು ಕ್ರಮಬದ್ಧವಾಗಿದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಬಹುದು . ಜಿಲ್ಲೆ ಸಾಮಾನ್ಯ ಪ್ರಶ್ನೆ ಕೇಳಿ ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ . ವಿಳಾಸ : ಪರಿಹಾರ ಪಡೆಯಿರಿ ವಿಜಯವಾಣಿ ನಂ . 24 , ಶ್ರೀ ಸಾಯಿರಾಂ ಟವರ್ಸ್ , ಮೊದಲ ಮಹಡಿ , 5 ನೇ ಮುಖ್ಯರಸ್ತೆ , ಚಾಮರಾಜಪೇಟೆ , ಬೆಂಗಳೂರು -18 , ave : sarakaricorner@gmail.com
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment