ಕೋವಿಡ್ -19 ಸಾಂಕ್ರಾಮಿಕದಿಂದ ಲಾಕ್‌ಡೌನ್ ಘೋಷಣೆಯಾಗಿ ಫಲಿತಾಂಶ ವಿಳಂಬವಾಗಿ ಪ್ರಕಟವಾಯಿತು . ಇದರಿಂದಾಗಿ ನನಗೆ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ಕೈತಪ್ಪಿತು - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ಕೋವಿಡ್ -19 ಸಾಂಕ್ರಾಮಿಕದಿಂದ ಲಾಕ್‌ಡೌನ್ ಘೋಷಣೆಯಾಗಿ ಫಲಿತಾಂಶ ವಿಳಂಬವಾಗಿ ಪ್ರಕಟವಾಯಿತು . ಇದರಿಂದಾಗಿ ನನಗೆ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ಕೈತಪ್ಪಿತು - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ನನ್ನ ತಂದೆಯವರು ಸರ್ಕಾರಿ ನೌಕರರಾಗಿದ್ದು , 2019 ರ ಜೂನ್ ತಿಂಗಳಿನಲ್ಲಿ ನಿಧನ ಹೊಂದಿದರು . ನಾನು ಎಸ್ ಎಸ್‌ಎಲ್‌ಸಿ ಪಾಸಾಗಿದ್ದು 2020 ರಲ್ಲಿ ಪಿಯುಸಿ ಪರೀಕ್ಷೆ ಯನ್ನು ಬರೆದಿದ್ದು ಕೋವಿಡ್ -19 ಸಾಂಕ್ರಾಮಿಕದಿಂದ ಲಾಕ್‌ಡೌನ್ ಘೋಷಣೆಯಾಗಿ ಫಲಿತಾಂಶ ವಿಳಂಬವಾಗಿ ಪ್ರಕಟವಾಯಿತು . ಇದರಿಂದಾಗಿ ನನಗೆ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ಕೈತಪ್ಪಿತು . ಡಿ ಗುಂಪಿನ ಹುದ್ದೆ ನೀಡುತ್ತೇವೆಂದು ತಿಳಿಸುತ್ತಿದ್ದಾರೆ . ಇದಕ್ಕೆ ಸೂಕ್ತ ಪರಿಹಾರವೇನು ? ಪ್ರಶಾಂತ್ ಎನ್ . ಭಟ್ ಕಾರವಾರ
1996 ರ ಕರ್ನಾಟಕ ಸರ್ಕಾರಿ ಸೇವಾ ( ಅನುಕಂಪದ ಮೇರೆಗೆ ನೇಮಕಾತಿ ) ನಿಯಮಾವಳಿಯ ನಿಯಮ 4 ರ ಮೇರೆಗೆ ಸಿ ಗುಂಪಿನ ಹುದ್ದೆಯಾದ ದ್ವಿತೀಯ ದರ್ಜೆ
ಸಹಾಯಕರ ಪಿ.ಯು.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ವರ್ಷದೊಳಗೆ ಹೊಂದಿರಬೇಕು ಹಾಗೂ ನಿಯಮ 5 ರಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು , ಆದರೆ 2019-20ನೇ ಸಾಲಿನಲ್ಲಿ ಕೋವಿಡ್ -19 ಸಾಂಕ್ರಾ ಮಿಕದ ಪ್ರಯುಕ್ತ ದೇಶಾದ್ಯಂತ ಲಾಕ್ಡೌನ್ ಘೋಷಣೆ ಯಾದ್ದರಿಂದ ಪಿಯುಸಿ ಪರೀಕ್ಷಾ ಫಲಿತಾಂಶ ವಿಳಂಬ ವಾಗಿ ಪ್ರಕಟವಾದುದನ್ನು ಗಮನಿಸಿ , ಇಂತಹ ಪ್ರಕರಣ ಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಬೇಕೆಂದು ದಿನಾಂಕ : 17-9-2021ರ ಸರ್ಕಾರದ ಸುತ್ತೋಲೆಯಲ್ಲಿ ( ಸಂಖ್ಯೆ : ಸಿಆಸುಇ 76 ಸೇಸಿಐ 2020 ) ಎಲ್ಲಾ ನೇಮ ಕಾತಿ ಪ್ರಾಧಿಕಾರಿಗಳಿಗೆ ಸೂಚಿಸಲಾಗಿದೆ . ಅದರಂತೆ ನೀವು ಸಕ್ಷಮ ಪ್ರಾಧಿಕಾರಕ್ಕೆ ಪುನರ್ ಪರಿಶೀಲಿಸಲು ಮನವಿ ಸಲ್ಲಿಸಿ , ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment