ರಾಜ್ಯ ಸರ್ಕಾರಿ ನೌಕರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ- KASS” ಜಾರಿಗೆ ಆದೇಶ
ರಾಜ್ಯ ಸರ್ಕಾರಿ ನೌಕರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ- KASS” ಜಾರಿಗೆ ಆದೇಶ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಮುಖ ಬೇಡಿಕೆಯಾದ ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬದ ಸದಸ್ಯರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೆ ತರಲು ನಿರ್ಣಯ ಕೈಗೊಂಡ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪರವರಿಗೆ ಹಾಗೂ ಆದೇಶ ಹೊರಡಿಸಿದ
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಅಭಿನಂದನೆಗಳು.
ಬೇಡಿಕೆ ಈಡೇರಿಕೆಗೆ ಸಹಕರಿಸಿದ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬವರ್ಗದವರ ಪರವಾಗಿ ಸಂಘವು ತುಂಬು ಹೃದಯದ ಧನ್ಯವಾದಗಳು
ರಾಜ್ಯ ಸರ್ಕಾರದ ೦೬ ಲಕ್ಷ ನೌಕರರು ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಸುಮಾರು ೨೫ ಲಕ್ಷ ಅವಲಂಬಿತರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ರಾಜ್ಯದ ಸರ್ಕಾರಿ ನೌಕರರು &ಅವರ ಕುಟುಂಬದ ಸದಸ್ಯರು ಎಲ್ಲರೂ ಮಾನ್ಯ ಮಾಜಿ ಮುಖ್ಯಮಂತ್ರಿಯಾದ
ReplyDeleteಶ್ರೀ.ಯಡಿಯೂರಪ್ಪ ರವರು ಹಾಗೂ ರಾಜ್ಯದ ಮುಖ್ಯಮಂತ್ರಿಯಾದ
ಶ್ರೀ. ಬಸವರಾಜ ಬೊಮ್ಮಾಯಿ ರವರಿಗೂ
ಹಾಗೂ ರಾಜ್ಯದ ಸರ್ಕಾರಿ ನೌಕರರ ಅಧ್ಯಕ್ಷರಾದ ಮಾನ್ಯ ಶ್ರೀ. ಷಡಕ್ಷರಿ ಸರ್ ರವರಿಗೆ ತುಂಬು ಹೃದಯದಿಂದ ಅಭಿನಂದನೆಗಳು ಹಾಗೂ ಈ ಅತ್ಯಮೂಲ್ಯ *ನಗದು ರಹಿತ ಆರೋಗ್ಯ ಸೇವೆಗೆ* ನಾವುಗಳು ಎಂದೆಂದಿಗೂ ಚಿರ ಋಣಿಗಳಾಗಿರುತ್ತೇವೆ..
Tq so sir
ReplyDeleteReally its a great news if it implemented properly because i suffered alot in my family for not having this facilities before
ReplyDeleteಇದೊಂದು ಅಮೋಘ ಕಾರ್ಯ, ಇದು ಅಷ್ಟೊಂದು ಸುಲಭವಿರಲಿಲ್ಲ.ಈ ಅಮೋಘ ಕಾರ್ಯದ ರುವಾರಿಗಳಾದ ನಮ್ಮೆಲ್ಲರ ನೆಚ್ಚಿನ ಅಧ್ಯಕ್ಷರಿಗೆ , ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು.
ReplyDeleteಅನೇಕ ವರ್ಷಗಳಿಂದ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ತಂದೆತಾಯಿಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಭೇಟಿ ಮಾಡಲು ಸಾಧ್ಯವಾಗದೆ ನರಕಯಾತನೆ ಅನುಭವಿಸುತ್ತಿರುವ ಹಾಗೂ ಯಾವುದೇ ವಿಶೇಷ ಪ್ರಕರಣಗಳು ಇಲ್ಲದ ನಮ್ಮಂತಹ ಸಾಮಾನ್ಯ ಶಿಕ್ಷಕರ ಬಗ್ಗೆ ಪ್ರೀತಿ ಕಾಳಜಿ ತೋರಿಸುತ್ತಿರುವ ಷಡಕ್ಷರಿ ಸರ್ ರವರಿಗೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಈ ಮಹತ್ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿರುವ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ಮಾನ್ಯ ಶಿಕ್ಷಣ ಸಚಿವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು .
ReplyDelete