ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ನಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ . ನನ್ನ ಹೆಂಡತಿ 12 ವರ್ಷಗಳ ಹಿಂದೆ ಮರಣ ಹೊಂದಿದಳು . ನನಗೀಗ 59 ವರ್ಷಗಳು . ಮಗ ಮತ್ತು ಮಗಳು ವೃತ್ತಿಯ ಸಲುವಾಗಿ ನನ್ನಿಂದ ದೂರವಾಗಿ ಬೇರೆ ಊರಿನಲ್ಲಿದ್ದಾರೆ . ನನಗೆ ರಕ್ಷಣೆ ಮತ್ತು ಉಟೋಪಚಾರ ಹಾಗೂ ಪಾಲನೆಯ ಸಲುವಾಗಿ ನಾನು 52 ವರ್ಷದ ವಿಧವೆಯನ್ನು ಮರು ವಿವಾಹ ಮಾಡಿಕೊಳ್ಳಲು ಬಯಸಿದ್ದೇನೆ . ಆ ಕಾರಣ ನಿವೃತ್ತಿಯ ಅಂಚಿನಲ್ಲಿರುವ ನನ್ನ ನಿವೃತ್ತಿಯ ನಂತರ ಸರ್ಕಾರಿ ನಿಯಮದ ಪ್ರಕಾರ ನಮ್ಮಿಬ್ಬರ ಜೀವಿತಾವಧಿಯವರೆಗೆ ಅಥವಾ ನನ್ನ ಮರಣಾನಂತರ ಮರು ಮದುವೆಯಾಗುವ ಹೆಂಡತಿಗೆಕುಟುಂಬ ನಿವೃತ್ತಿ ವೇತನ ಸೌಲಭ್ಯ ಸಿಗುವುದೇ ? | ಎ.ಬಿ. ಪಾಟೀಲ ಬೆಳಗಾವಿ
ನಿಮ್ಮ ಮೊದಲ ಪತ್ನಿ ನಿಧನವಾಗಿರುವುದರಿಂದ ನೀವು 2021 ರ ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ ) ನಿಯಮಾವಳಿ ರೀತ್ಯಾ ನಿಯಮಿಸಿದ ಪ್ರಾಧಿಕಾರಕ್ಕೆ ಮಾಹಿತಿ ನೀಡಿ , ಎರಡನೇ ವಿವಾಹವಾಗಬಹುದು . ಈ ವಿವಾಹದ ನಂತರ ನೋಂದಣಿ ಪತ್ರ ಸಲ್ಲಿಸಿ ಕ.ಸಿ.ಸೇ.ನಿ. ನಿಯಮ 302 ರಂತೆ ನಾಮ ನಿರ್ದೇಶನವನ್ನು ತಿದ್ದುಪಡಿ ಮಾಡಿಸಬೇಕು . ಆಗ ನಿಮ್ಮ ನಿವೃತ್ತಿ ವೇತನ ಸೌಲಭ್ಯ ಹಾಗೂ ನಿಮ್ಮ ನಿಧನದ ನಂತರ ಪುನರ್ ವಿವಾಹಿತ ಪತ್ನಿಗೆ ಕುಟುಂಬ ಪಿಂಚಣಿ ಲಭ್ಯವಾಗುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕವನ್ನು ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment