ಬಸ್ ಸಂಚಾರ ಆರಂಭದವರೆಗೆ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ : ನಾಳೆ ಸಿಎಂ ಜೊತೆ ಚರ್ಚೆ, ಶಿಕ್ಷಕರ ನೆರವಿಗೆ ನಿಂತ ಶ್ರೀ ಸಿ.ಎಸ್. ಷಡಾಕ್ಷರಿ.
ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರನ್ನು ಜೂನ್ 15ರಿಂದ ಶಾಲೆಗೆ ಬರುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿರುವುದು ಸರಿಯಲ್ಲ. ಬಸ್ ಸಂಚಾರವಿಲ್ಲದೇ ಶಿಕ್ಷಕರು ಶಾಲೆಗೆ ತೆರಳಲು ಸಾಧ್ಯವೇ ಇಲ್ಲ. ಹೀಗಾಗಿ ಬಸ್ ಆರಂಭವಾಗುವವರೆಗೆ ವರ್ಕ್ ಫ್ರಂ ಹೋಮ್ ಗೆ ಆದೇಶ ಹೊರಡಿಸಬೇಕು. ಈ ಕುರಿತು ನಾಳೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಶಿಕ್ಷಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ತಿಳಿಸಿದ್ದಾರೆ.
ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿ ಮಾಡಿದ್ದರೂ ಕೂಡ ಬಸ್ ಸೌಕರ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಶಿಕ್ಷಕರು ಶಾಲೆಗೆ ತೆರಳಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಿದೆ. ಇನ್ನು ಹಲವು ಶಿಕ್ಷಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇಂತಹ ಶಿಕ್ಷಕರು ಬಸ್ ಸೌಕರ್ಯವಿಲ್ಲದೇ ಶಾಲೆಗೆ ಹಾಜರಾಗಲು ಸಾಧ್ಯವಿಲ್ಲ. ಸಮಸ್ಯೆಯ ಅರಿವಿದ್ದರೂ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುವುದು ಸರಿಯಲ್ಲ.
ಶಿಕ್ಷಕರ ಸಮಸ್ಯೆಯ ಕುರಿತು ಸಚಿವ ಸುರೇಶ್ ಕುಮಾರ್ ಅವರ ಜೊತೆಗೆ ಚರ್ಚಿಸಿದ್ದು, ಆಯುಕ್ತರ ಜೊತೆಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು. ಆದ್ರೀಗ ಆಯುಕ್ತರು ಆತುರಾತುರವಾಗಿ ಶಿಕ್ಷಕರು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದಾರೆ. ಸಂಕಷ್ಟದಲ್ಲಿರುವ ಶಿಕ್ಷಕರು ಆತಂಕಕ್ಕೆ ಒಳಗಾಗುವುದು ಬೇಡ. ನಾಳೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶಿಕ್ಷಕರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇವೆ. ಸಿಎಂ ಯಡಿಯೂರಪ್ಪ ಅವರು ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡುವ ವಿಶ್ವಾಸವಿದೆ ಎಂದಿದ್ದಾರೆ
ಇನ್ನೊಂದೆಡೆ ಕೊರೊನಾ ಮೂರನೇ ಅಲೆ ಮಕ್ಕಳಿಗೆ ಅಪಾಯ ಎನ್ನುವ ಕುರಿತು ತಜ್ಞರು ಎಚ್ಚರಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಹುತೇಕ ಶಿಕ್ಷಕರಿಗೆ ಕೊರೊನಾ ಲಸಿಕೆ ನೀಡಿಲ್ಲ. ಲಸಿಕೆ ನೀಡದೆ ಶಿಕ್ಷಕರನ್ನು ಶಾಲೆಗೆ ಕರೆಯಿಸುವುದು ಸರಿಯಲ್ಲ. ಕೊರೊನಾ ಸಂಪೂರ್ಣ ಹತೋಟಿಗೆ ಬರುವವರೆಗೂ ಮಕ್ಕಳಿಗೆ ಭೌತಿಕ ತರಗತಿಗಳ ಬದಲು ಆನ್ ಲೈನ್ ಶಿಕ್ಷಣವನ್ನು ನೀಡುವ ವ್ಯವಸ್ಥೆಯನ್ನು ಮಾಡಲಿ ಎಂದಿದ್ದಾರೆ.
ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆಸಲು ಮುಖ್ಯಶಿಕ್ಷಕರು ಮಾತ್ರವೇ ಸಾಕು. ಹೀಗಾಗಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ಮನೆಯಿಂದಲೇ ಆನ್ ಲೈನ್ ಶಿಕ್ಷಣವನ್ನು ಬೋಧನೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿಯೇ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು. ಶಿಕ್ಷಕರ ಸಮಸ್ಯೆಯ ಪರಿಹಾರದ ಕುರಿತು ಹೋರಾಟ ನಡೆಸುತ್ತಿದ್ದೇನೆ. ಶಿಕ್ಷಕರ ಸಮಸ್ಯೆಯ ಬಗ್ಗೆ ಸಚಿವರಿಗೂ ಅರಿವಿದೆ. ಸಿಎಂ ಯಡಿಯೂರಪ್ಪ ಅವರು ಪರಿಹಾರ ಮಾಡುತ್ತಾರೆನ್ನುವ ವಿಶ್ವಾಸವಿದೆ ಎಂದಿದ್ದಾರೆ
This comment has been removed by the author.
ReplyDeleteಸರ್ ಸರ್ಕಾರಿ ಶಾಲೆ ಯವರಿಗೆ ಕಷ್ಟ ಆಗಬಹುದು ಅದಕ್ಕೆ ಅಂತ ಪರ್ಯಾಯ ವ್ಯವಸ್ಥೆ ಮಾಡಕೊಂಡು ನೈಕರಿ ಮಾಡಬೇಕಾಗುತ್ತದೆ. ಸಂಬಳ ಪಡಿತಾ ಇದ್ದಿವಿ ತಾನೆ. ಆದರೆ ಬೇರೆ ಇಲಾಖೆಯವರು ಆರೋಗ್ಯ, ಕಂದಾಯ, ಪೋಲೀಸ್, ತುರ್ತುಸೇವೆಗಳು ಹಿಗೆ ಹಲವಾರು ಇಲಾಖೆಯವರು ಕೊರೊನಾ ಸಮಯದಲ್ಲಿ ಹಗಲು ರಾತ್ರಿ ಎನ್ನದೆ ಜೀವದ ಪರಿವೆ ಇಲ್ಲದೆ ಸರ್ಕಾರದ ಮೂಲಭೂತ ಸೌಕರ್ಯ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ತಾವೇನಾದ್ರು ಕ್ರಮಕ್ಕಾಗಿ ಸರ್ಕಾರದ ಮೊರೆ ಹೀಗಿದ್ದಿರಾ? ಹೆಚ್ಚುವರಿ ವೇತನಕ್ಕಾಗಿ ಅಥವಾ ಕೆಲ ಮೂಲಭೂತ ಸೌಕರ್ಯಗಳಿಗಾಗಿ ಮಾತಾಡಿದ್ದಿರಾ.? ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಯಾವ ನ್ಯಾಯ ಸರ್ ನೌಕರರುಅಂದ ಮೇಲೆ ಎಲ್ಲರೂ ಒಂದೇ ತಾನೆ..
ReplyDeleteThey are working in local places
Deleteಸ್ವಾಮಿ ತಾವು ಕಂದಾಯ ಇಲಾಖೆ, ಅರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳಂತಹ ದೊಡ್ಡ ದೊಡ್ಡ ಇಲಾಖೆಗಳಿಗೆ ಶಿಕ್ಷಕರನ್ನು ಏಕೆ ಹೋಲಿಕೆ ಮಾಡತ್ತಿರಾ? ಶಿಕ್ಷಕರು ಕೇಳಿಕೊಳ್ಳುತ್ತಿರುವುದು ಬಸ್ ವ್ಯವಸ್ಥೆಗಾಗಿ ಮಾತ್ರ, ಬಹುತೇಕ ಶಿಕ್ಷಕರು ದ್ವಿಚಕ್ರ ವಾಹನಗಳನ್ನಾಗಲೀ, ಕಾರುಗಳನ್ನಾಗಲಿ, ಹೊಂದಿರುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ, ಒಬ್ಬ ಶಿಕ್ಷಕನ ಕುಟುಂಬದಲ್ಲಿ ಯಾರಾದರೊಬ್ಬರಿಗೆ ಯಾವುದಾದ್ರೂ ಒಂದು ದೊಡ್ಡ ಅನಾರೋಗ್ಯದ ಸಮಸ್ಯೆ ಉಂಟಾಗಿ ಗುಣಮುಖರಾದರೆ ಆ ಒಂದು ಆರ್ಥಿಕ ಹೊಡೆತವನ್ನು ಸೇವೆಯ ಕೊನೆಯ ತನಕ ಅನುಭವಿಸಬೇಕಾಗುತ್ತದೆ. ಹೀಗಾಗಿ ಶಿಕ್ಷಕರು ಸೋಮಾರಿಗಳೇನಲ್ಲ, ಕನಿಷ್ಠ ಬಸ್ ಸೌಲಭ್ಯಕ್ಕಾಗಿ ಮಾತ್ರ ಎದುರುನೋಡುತ್ತಿದ್ದಾರೆ ಅಷ್ಟೆ.
Deleteಶಿಕ್ಷಣ ಇಲಾಖೆಯವರು ಮಾತ್ರ ಮನುಷ್ಯರಾ?
ReplyDeleteಉಳಿದ ಇಲಾಖೆಯವರು ದೇವ ಮಾನವರಾ? ಶಿಕ್ಷಣ ಇಲಾಖೆ ಹೊರತು ಪಡಿಸಿ ಎಲ್ಲಾ ಇಲಾಖೆಯವರಿಗೆ ಸರ್ಕಾರ ಏನಾದ್ರು ಹೆಚ್ಚುವರಿ ಸಂಬಳ ಕೊಡ್ತಾ ಇದ್ದಾರಾ. ಎಲ್ಲಾ ಇಲಾಖೆಯವರಿಗೂ ಕುಟುಂಬ ಇದೆ ಜವಬ್ದಾರಿ ಇದೆ. ಎಲ್ಲಾ ಕುಟುಂಬಗಳಲ್ಲಿಯೂ ಹಿರಿಯರೂ ಇದ್ದಾರೆ ರೋಗಿಗಳು ಇದ್ದಾರೆ. ಹಾಗಂತ ನೌಕರಿ ಬಿಟ್ಟು ಮನೆಯಲ್ಲಿ ಕುಳಿತ್ತಿದ್ದಾರಾ? ಶಿಕ್ಷಕರು ಸೋಮಾರಿಗಳಲ್ಲ ಅನ್ನುವುದು ಎಲ್ಲಾರಿಗೂ ಗೊತ್ತು.... ಬಸ್ಸಿನ ನೆಪ ಹೇಳೋದು ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಸರ್ಕಾರಿ ಆದೇಶ ಪಾಲಿಸಿ ಸರ್ಕಾರಿ ಶಾಲೆ ಮಕ್ಕಳು ಎರಡು ವರ್ಷದಿಂದ ದನ ಮೇಯಿಸುತ್ತಿದ್ದಾರೆ. ಎರಡು ವರ್ಷನೂ ಸಾಕಾಗಿಲ್ಲ ತಮಗೆ ... ಮುಂದೆ ಮತ್ತೆ ಮೂರನೆ ಅಲೆ ಬರುತ್ತೆ ಅಂತ ಹೇಳಿದ್ದಾರೆ ಮತ್ತೊಂದು ವರ್ಷ ರಜೆ ಸಿಗುತ್ತೆ... ನಾವೆಲ್ಲಾ ಮಜಾ ಮಾಡೋಣ ಸರ್ಕಾರಿ ಶಾಲೆ ಬಡ ರೈತರ ಮಕ್ಕಳು ಶಾಲೆ ಮರೆತು ಮಂಗಗಳಾಗಲಿ....
ರೀ ಕಂದಾಯ,ಆರೋಗ್ಯ..
Deleteತಹಶಿಲ್ದಾರರ ಕಚೇರಿಲಿ ನ್ಯಾಯಯುತವಾಗಿ ಸಂಬಳ ಪಡೆದು ಮಾಡೋ ಕೆಲಸಕ್ಕೆ ಲಂಚ ತಗೋತಿರಾ,ಶಿಕ್ಷಕರಿಗೆ ಬರೋದು ಸಂಬಳ ಅಷ್ಟೇ... ಅಷ್ಟಕ್ಕೂ ಕೋವಿಡ್ duty ಸಮಯದಲ್ಲಿ ರೋಗಿಗಳ ಜತೆ ನೀವು ನಡಕೊಂಡ ರೀತಿ, ಕಂದಾಯದವರು ರೈತರು, ಇತ್ಯಾದಿ ಜನರ ಜತೆ ನಡಕೊಂಡ ಪರಿ ನಿಮಗಿಂತ ಚೆನ್ನಾಗಿ ಇನ್ನ್ಯಾರಿಗೊತ್ತು!!!
ಸೋಮಾರಿಗಳಲ್ಲ ಬಿಡಿ
ReplyDelete