ಕೇಂದ್ರ ಸರ್ಕಾರದ ಮಾದರಿಯಲ್ಲಿ ಕೋವಿಡ್ -19 ಸೋಂಕಿಗೆ ಸಿಲುಕಿ ಹೋಂ ಐಸೋಲೇಷನ್ / ಕ್ವಾರಂಟೈನ್ / ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಗಳನ್ನು ಮಂಜೂರು ಮಾಡುವ ಬಗ್ಗೆ ಮಾನ್ಯ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ - ಶ್ರೀ ಸಿ.ಎಸ್.ಷಡಾಕ್ಷರಿ.

ಕೇಂದ್ರ ಸರ್ಕಾರವು ತನ್ನ ನೌಕರರಿಂದ ಸ್ವೀಕರಿಸಲ್ಪಟ್ಟ ಮನವಿಗಳನ್ನು ಪರಿಗಣಿಸಿ ಉಲ್ಲೇಖಿತ ಆದೇಶದನ್ವಯ ಕೋವಿಡ್ -19 ಸೋಂಕಿಗೆ ಸಿಲುಕಿ ಹೋಂ ಐಸೋಲೇಷನ್ / ಕ್ವಾರಂಟೈನ್ / ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಗಳನ್ನು ಮಂಜೂರು ಮಾಡಿರುತ್ತದೆ . ( ಪ್ರತಿ ಲಗತ್ತಿಸಿದೆ ) ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿ ಮತ್ತು ನೌಕರರು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು , ಪ್ರಸ್ತುತ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಸೋಂಕಿಗೆ ಒಳಗಾಗುತ್ತಿದ್ದು , ಇದೇ ಪರಿಸ್ಥಿತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೂ ಸಹ ಉದ್ಭವಿಸಿರುವುದನ್ನು ಗಮನಿಸಲಾಗಿದೆ . ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಹ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವುದು ಸಾಮಾಜಿಕ ತತ್ವದ ಅಡಿಯಲ್ಲಿ ಅವಶ್ಯವಾಗಿರುತ್ತದೆ . ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ , ರಾಜ್ಯದಲ್ಲಿನ ಸರ್ಕಾರಿ ನೌಕರರು ಕೋವಿಡ್ -19 ಸೋಂಕಿಗೆ ಒಳಗಾದಾಗ ಅಥವಾ ಒಳಗಾಗುವ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ರಜಾ - ಇತರೆ ಸೌಲಭ್ಯಗಳ ಮಾದರಿಯಲ್ಲಿ ಈ ಕೆಳಕಂಡ ವಿಶಿಷ್ಟ ಪ್ರಕರಣಗಳಲ್ಲಿ ವಿಶೇಷ ರಜೆ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಮಂಜೂರು ಮಾಡಲು ತಮ್ಮಲ್ಲಿ ಕೋರಿದೆ .

Comments
Post a Comment