ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ದಿನದ ಪ್ರಶ್ನೆ ನಾನು 2005 ರಲ್ಲಿ ಕೆಪಿಎಸ್‌ಸಿ ಮೂಲಕ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಯಾಗಿದ್ದೆ . ಈ ಮಧ್ಯೆ ಕೌಟುಂಬಿಕ ಜಗಳದಿಂದ ನನ್ನ ಮೇಲೆ ಎಫ್‌ಐಆರ್ ಆಗಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು . 2007 ರಲ್ಲಿ ತೀರ್ಪು ಬಂದಿದ್ದು ಅದರಲ್ಲಿ ಖುಲಾಸೆಗೊಂಡಿದ್ದೇನೆ . ಆಯ್ಕೆ ಪಟ್ಟಿಯಲ್ಲಿ 20 ಅಭ್ಯರ್ಥಿಗಳಲ್ಲಿ 10 ನೆಯವನಾದ ನನ್ನನ್ನು ಕೈಬಿಟ್ಟು 2006 ರ ಫೆಬ್ರವರಿಯಲ್ಲಿ ನೇಮಕ ಪ್ರಾಧಿಕಾರಿಯವರು ನೇಮಕಾದೇಶವನ್ನು ನೀಡಿದರು . 2007 ರಲ್ಲಿ ನೇಮಕಾತಿ ಆದೇಶ ನೀಡಿದ್ದಾರೆ . ನೂತನ ಪಿಂಚಣಿ ಯೋಜನೆಗೆ ನನ್ನನ್ನುಸೇರಿಸಿದ್ದಾರೆ . ನನ್ನ ಆಯ್ಕೆ ಪಟ್ಟಿಯಲ್ಲಿ ಕಿರಿಯರು ಹಳೆ ಪಿಂಚಣಿ ನಿಯಮದಡಿಯಲ್ಲಿರುವುದರಿಂದ ನಾನು ಅದಕ್ಕೆ ಅರ್ಹನಲ್ಲವೇ ? | ವಿಜಯಕುಮಾರ ವಿಜಯಪುರ
ದಿನಾಂಕ 17.2.2021 ರ ಸರ್ಕಾರಿ ಆದೇಶ ಸಂಖ್ಯೆ ಆಇ 39 ಪಿಇಎನ್ 2020 ರ ಮೇರೆಗೆ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕಿರಿಯರಾಗಿರುವವರು ನೇಮಕವಾಗಿ , ಅದೇ ನೇಮಕಾತಿಯಲ್ಲಿ ಹಿರಿಯನಾದ ಅಭ್ಯರ್ಥಿಯು ಈ ದಿನಾಂಕದ ನಂತರ ನೇಮಕವಾದರೆ . ಅವನನ್ನು ಹಳೆ ಪಿಂಚಣಿ ಯೋಜನೆಗೆ ಒಳಪಡಿಸಲು ಸೂಚಿಸಿದೆ . ಆದ್ದರಿಂದ ನೀವು ಈ ಆದೇಶದಂತೆ ಮನವಿ ಸಲ್ಲಿಸಬೇಕು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment