ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ / ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯ ಮಂಜೂರು ಮಾಡಿದ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ / ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯ ಮಂಜೂರು ಮಾಡಿದ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು.
ರಾಜ್ಯದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಕೆಲವು ಸರ್ಕಾರಿ ನೌಕರರು ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರ ಸಲಹೆಯ ಮೇರೆಗೆ ಕಿಮೋ / ರೇಡಿಯೋ ಥೆರಪಿಯಂತಹ ಚಿಕಿತ್ಸೆಗೆ ಒಳಪಡಬೇಕಿದ್ದು , ಆ ನಿಮಿತ್ತವಾಗಿ ಕಡ್ಡಾಯವಾಗಿ ವಿಶ್ರಾಂತಿಯನ್ನು ಪಡೆಯಬೇಕಿರುವ ಅವಶ್ಯಕತೆಯಿರುವುದರ ಮೇರೆಗೆ , ಈ ನಿಮಿತ್ತವಾಗಿ ಪಡೆಯುವ ಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯತೆಯಿಂದಾಗಿ ಕಛೇರಿಗೆ ಹಾಜರಾಗಲು ಕಷ್ಟ ಸಾಧ್ಯವಾದ್ದರಿಂದ , ಈ ನಿಮಿತ್ತದ ಅವಧಿಯನ್ನು ಸಕ್ಷಮ ವೈದ್ಯಕೀಯ ಪ್ರಾಧಿಕಾರವು ನೀಡುವ ಪ್ರಮಾಣಪತ್ರವನ್ನು ಹಾಜರು ಪಡಿಸುವ ಷರತ್ತಿಗೊಳಪಟ್ಟ ವಿಶೇಷ ಸಾಂದರ್ಭಿಕ ರಜೆಯನ್ನಾಗಿ ಪರಿಗಣಿಸುವಂತೆ , ಉಲ್ಲೇಖದಲ್ಲಿ ಓದಲಾಗಿರುವ ಪತ್ರದಲ್ಲಿ ಅಧ್ಯಕ್ಷರು , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಕಬ್ಬನ್ ಪಾರ್ಕ್ , ಬೆಂಗಳೂರು ಇವರು ಕೋರಿರುವುದಾಗಿದೆ . ವಿಷಯವನ್ನು ಸರ್ಕಾರವು ಪರಿಶೀಲಿಸಿದ್ದು , ಅದರಂತೆ ಈ ಕೆಳಕಂಡ ಆದೇಶವನ್ನು ಹೊರಡಿಸಿದೆ . ಸರ್ಕಾರದ ಆದೇಶ ಸಂಖ್ಯೆ : ಆಇ 8 ( ಇ ) ಸೇನಿಸೇ 2020 ಬೆಂಗಳೂರು , ದಿನಾಂಕ : 22.06.2021 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನಬಂಧ - ಬಿ ರಲ್ಲಿನ ನಿಯಮ ll ( ಐ ) ರ ನಂತರದಲ್ಲಿ , ಈ ಆದೇಶವನ್ನು ಹೊರಡಿಸಿದ ದಿನಾಂಕದಿಂದ ಜಾರಿಗೊಳ್ಳುವಂತೆ ನಿಯಮ 11 ( ಜೆ ) ಎಂಬ ಹೊಸ ನಿಯಮವನ್ನು ಸೇರ್ಪಡೆಗೊಳಿಸಿದೆ : " ಜೆ ) ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸಾ ತಜ್ಞರು ರೂಪಿಸುವ ಯೋಜನೆಯನುಸಾರ ಪಡೆಯುವ ಕಿಮೋ / ರೇಡಿಯೋ ಥೆರಪಿ ಚಿಕಿತ್ಸೆ ಮತ್ತು ಸಂಬಂಧದಲ್ಲಿ ಅಗತ್ಯವಾಗುವ ವಿಶ್ರಾಂತಿಯ ಅವಧಿಯ ದಿನಗಳಿಗೆ , ಸಕ್ಷಮ ವೈದ್ಯಕೀಯ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಪಡೆದು ಒದಗಿಸುವ ಷರತ್ತಿಗೊಳಪಟ್ಟು , ಈ ಚಿಕಿತ್ಸೆಯ ಅವಧಿಯಲ್ಲಿ ಮಾತ್ರ ಗರಿಷ್ಠ ಆರು ತಿಂಗಳುಗಳ ಮಿತಿಗೊಳಪಟ್ಟು ವಿಶೇಷ ಸಾಂದರ್ಭಿಕ ರಜೆಯನ್ನು ಅನುಮತಿಸತಕ್ಕದ್ದು ಎಂದು ಆದೇಶಿಸಿದೆ.

Comments
Post a Comment