ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ (ಜನ್ಮದಿನಾಂಕ ಜನ್ಮದಾಖಲೆಯ ಪ್ರಕಾರವೇ ಸೇವಾಪುಸ್ತಕದಲ್ಲಿ ನಮೂದಿಸಬಹುದೆ ?)
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ. ಪ್ರಶ್ನೆ ನನ್ನ ಶಾಲಾ ದಾಖಲಾತಿಯಲ್ಲಿ ಜನ್ಮದಿನಾಂಕ 01 ಜೂನ್ 1963 ಎಂದಿದೆ . ಆದರೆ ನನ್ನ ಜನ್ಮದಾಖಲೆ ಪಡೆದು ನೋಡಿದಾಗ ನಿಜವಾದ ದಿನಾಂಕ 29 ಆಗಸ್ಟ್ 1963 ಎಂದಿದೆ . ನನ್ನ ಸೇವಾಪುಸ್ತಕದಲ್ಲಿ ಶಾಲಾ ದಾಖಲಾತಿಯಲ್ಲಿನ ಜನ್ಮದಿನಾಂಕವೇ ಇರುವುದರಿಂದ ಮೂರು ತಿಂಗಳ ಮೊದಲೇ ನಿವೃತ್ತನಾಗುತ್ತೇನೆ . ಜನ್ಮದಿನಾಂಕವನ್ನು ಜನ್ಮದಾಖಲೆಯ ಪ್ರಕಾರವೇ ಸೇವಾಪುಸ್ತಕದಲ್ಲಿ ನಮೂದಿಸಬಹುದೆ ? | ಎನ್.ಐ. ಗೌಡ ಸಿದ್ದಾಪುರ , ಉ . ಕ . ಕರ್ನಾಟಕ ರಾಜ್ಯ ಸೇವಕರ ನೌಕರರ ( ವಯೋನಿರ್ಧಾರ ) ಅಧಿನಿಯಮ 1974 ರ ಮೇರೆಗೆ ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಕಲಂ 3 ರ ಪರಂತುಕದ ಮೇರೆಗೆ ಸರ್ಕಾರಿ ನೌಕರ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಆ ಪ್ರಮಾಣಪತ್ರದಲ್ಲಿ ನಮೂದಿಸಿರುವ ಜನ್ಮದಿನಾಂಕವನ್ನೇ ಪರಿಗಣಿಸಬೇಕಾಗುತ್ತದೆ . ಈ ಜನ್ಮದಿನಾಂಕವನ್ನು ಪ್ರಕರಣ 5 ರ ಮೇರೆಗೆ ನ್ಯಾಯಾಲಯದ ಡಿಕ್ರಿ ಮೂಲಕ ಸೇವೆಗೆ ಸೇರಿದ ಮೂರು ವರ್ಷದೊಳಗೆ ಬದಲಾಯಿಸಬಹುದು . ಆದರೆ ನಿಮ್ಮ ವಿಚಾರದಲ್ಲಿ ಕಾಲಮಿತಿ ಮೀರಿರುವುದರಿಂದ ಪ್ರಸ್ತುತ ಬದಲಾವಣೆ ಸಾಧ್ಯವಿಲ್ಲ . . ಹೆಚ್ಚಿನ ವಿವರಗಳಿಗೆ ಇದೇ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು 'ಪುಸ್ತಕ ನೋಡಬಹುದು . KCSR Book ...