ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ:
ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ.
ದಿನದ ಪ್ರಶ್ನೆ ನನ್ನ ಪತಿ ಸರ್ಕಾರಿ ನೌಕರರಾಗಿದ್ದು ಲೋಕಾಯುಕ್ತ ಕೇಸಿನಲ್ಲಿ ಸಿಲುಕಿ ಅಮಾನತ್ತಿನಲ್ಲಿದ್ದರು . ದಿನಾಂಕ 5-1-2016 ರಂದು ಹೃದಯಾಘಾತವಾಗಿ ನಿಧನಹೊಂದಿರುತ್ತಾರೆ . ನಾನು ನೇಮಕಾತಿ ಪ್ರಾಧಿಕಾರಕ್ಕೆ ಅನುಕಂಪದ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಿದಾಗ ಅವರು ನಿಮ್ಮ ಪತಿಯವರು ಅಮಾನತ್ತಿನಲ್ಲಿರುವುದರಿಂದ ಸರ್ಕಾರಿ ನೌಕರಿ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ತಿರಸ್ಕರಿಸಿದ್ದಾರೆ . ಇದಕ್ಕೆ ಸೂಕ್ತಪರಿಹಾರ ಸೂಚಿಸಿ . | ವಸಂತಕುಮಾರಿ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯಾ ನಿಮ್ಮ ಪತಿಯವರು ಅಮಾನತ್ತಿನಲ್ಲಿದ್ದರೂ ನಿಯಮ 100 ರಡಿಯಲ್ಲಿ ಜೀವನಾಧಾರ ಭತ್ಯೆ ಪಡೆಯುತ್ತಿರುವುದರಿಂದ ಸರ್ಕಾರಿ ನೌಕರರ ಎಲ್ಲ ಹಕ್ಕು ಬಾಧ್ಯತೆಗಳನ್ನು ಹೊಂದಿರುತ್ತಾರೆ . ಹೀಗಿರುವಲ್ಲಿ ನೇಮಕಾತಿ ಪ್ರಾಧಿಕಾರದವರು 1996 ರ ( ಅನುಕಂಪದ ಆಧಾರದ ಮೇಲೆ ನೇಮಕಾತಿ ) ನಿಯಮಗಳ ರೀತ್ಯಾ ಅನುಕಂಪದ ಆಧಾರದ ಮೇಲೆ ನಿಮಗೆ ನೇಮಕಾತಿ ನೀಡಬೇಕಾಗುತ್ತದೆ . ನೇಮಕಾತಿ ಪ್ರಾಧಿಕಾರಿ ನಿಮ್ಮ ಅರ್ಜಿ ತಿರಸ್ಕಾರ ಮಾಡಿದರೆ ನಿಯಮಾವಳಿಯ ಉಲ್ಲಂಘನೆ ಆಗುತ್ತದೆ . ( ಹೆಚ್ಚಿನ ವಿವರಗಳಿಗೆ ಕರ್ನಾಟಕ ಸರ್ಕಾರಿ ಸೇವಾ ( ಅನುಕಂಪದ ಆಧಾರದ ಮೇಲೆ ನೇಮಕಾತಿ ) ನಿಯಮಗಳು 1996 ' ಪುಸ್ತಕವನ್ನು ನೋಡಬಹುದು . )
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.
Hi sir
ReplyDelete