ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ ರವರಿಂದ.(ಅನುಕಂಪದ ಆಧಾರದ ಮೇಲೆ ನೇಮಕಾತಿ)
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ.
ಪ್ರಶ್ನೆ ನಮ್ಮ ತಂದೆಯವರು ಸರ್ಕಾರಿ ನೌಕರಿಯಲ್ಲಿರುವಾಗಲೇ ದಿನಾಂಕ : 15-1-2016 ರಂದು ನಿಧನ ಹೊಂದಿದರು . ಅವರಿಗೆ ಗಂಡುಮಕ್ಕಳಿಲ್ಲದ ಕಾರಣ ವಿವಾಹಿತೆಯಾದ ನಾನೊಬ್ಬಳೇ ಹೆಣ್ಣು ಮಗಳು . ನಾನು ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಸಾಧ್ಯವಿದೆಯೇ ? ( ಗಿರಿಜಾ ಎಂ.ಎಸ್ . ಕಡೂರು , ಚಿಕ್ಕಮಗಳೂರು ಜಿಲ್ಲೆ
ಕರ್ನಾಟಕ ಸಿವಿಲ್ ಸೇವೆಗಳ ( ಅನುಕಂಪದ ಆಧಾರದ ಮೇಲೆ ನೇಮಕಾತಿ ) ನಿಯಮಗಳು 1996 ರ ನಿಯಮ 3 ( ಸಿ ) ಅಡಿಯಲ್ಲಿ ಅವಿವಾಹಿತ ಮಗಳು ಮಾತ್ರ ಅನುಕಂಪದ ಮೇಲೆ ಸರ್ಕಾರಿ ನೌಕರಿ ಪಡೆಯಲು ಅರ್ಹಳಾಗುತ್ತಾಳೆ . ನೀವು ವಿವಾಹಿತರಾಗಿರುವುದರಿಂದ ನಿಮಗೆ ಈ ಅನುಕಂಪದ ನೇಮಕಾತಿ ಲಭ್ಯವಾಗುವುದಿಲ್ಲ . ( ಹೆಚ್ಚಿನ ವಿವರಗಳಿಗೆ ' ಕರ್ನಾಟಕ ಸರ್ಕಾರಿ ಸೇವಾ ( ಅನುಕಂಪದ ಆಧಾರದ ಮೇಲೆ ನೇಮಕಾತಿ ) ನಿಯಮಗಳು 1996 ' ಪುಸ್ತಕವನ್ನು ನೋಡಬಹುದು )
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.
Comments
Post a Comment