"ಹೊಸ ರೂಪದಲ್ಲಿ HRMS-2 ತಂತ್ರಾಂಶ. ಸರ್ಕಾರಿ ನೌಕರರ ಸೇವಾ ಸೌಲಭ್ಯಗಳನ್ನು ಇನ್ನೂ ತ್ವರಿತಗತಿ ಅನ್ ಲೈನ್ ಮೂಲಕವೇ ದೊರೆಯುತ್ತವೆ."
ಸರ್ಕಾರಿ ನೌಕರರಿಗೆ ದೊರೆಯಬೇಕಾದ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಹೆಚ್.ಆರ್.ಎಂ.ಎಸ್. - 2 ತಂತ್ರಾಂಶದಲ್ಲಿ ಅಳವಡಿಸುವಂತೆ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದೆ.
ಹೆಚ್.ಆರ್.ಎಂ.ಎಸ್.-2 ತಂತ್ರಾಂಶದಲ್ಲಿ ಸೇರ್ಪಡೆಗೊಳ್ಳಲಿರುವ ಸೇವೆಗಳು.
ಸೇವಾ ಜೇಷ್ಠಾತೆ ಹಾಗೂ ಮುಂಬಡ್ತಿಗಳು, ಪರೀಕ್ಷಾತ್ಹ ಅವಧಿ ಫೋಷಣೆ / ಕಾಲಮಿತಿ / ಸ್ವಯಂ ಚಾಲಿತ ಬಡ್ತಿ ಮತ್ತು ಸ್ಥಗಿತ ವೇತನ ಬಡ್ತಿ.
ಕೆ.ಜಿ.ಐ.ಡಿ.ಸಾಲ,
ಜಿ.ಪಿ.ಎಫ್. ಮುಂಗಡ ಹಾಗೂ ಭಾಗಶಃ ವಾಪಾಸಾತಿ,
ಸಾಮಾಜಿಕ ವಿಮಾ ಯೋಜನೆ,
ಪತ್ರಾಂಕಿತ ಅಧಿಕಾರಿಗಳಿಗೆ ಎನ್.ಓ.ಸಿ.,
ವೈದ್ಯಕೀಯ ವೆಚ್ಚ ಮರುಪಾವತಿಗಳು,
ನಿವೃತ್ತಿ ವೇತನ, ಕುಟುಂಬ ಪಿಂಚಣಿ,
ನಿಯಮ 247-ಎ ಮತ್ತು 252-ಬಿ ಅಡಿಯಲ್ಲಿ ಅರ್ಹತಾದಾಯಕ ಸೇವೆ,
ಅಂತಿಮ ವೇತನ ಪ್ರಮಾಣ ಪತ್ರ,
ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎನ್.ಓ.ಸಿ.,
ಪಾಸ್ ಪೋರ್ಟ್ ನವೀಕರಣಕ್ಕೆ ಅನುಮತಿ,
ಎಲ್ಲಾ ರೀತಿಯ ರಜೆ ಮಂಜೂರಾತಿ,
ಹಬ್ಬದ ಮುಂಗಡ, ಇತ್ಯಾದಿ....
ಮೇಲ್ಕಂಡ ಸೇವಾ ಸೌಲಭ್ಯ ಮಾಹಿತಿಗಳನ್ನು ಹೆಚ್.ಆರ್.ಎಂ.ಎಸ್.-2 ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಇದರಿಂದಾಗಿ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ವಿಳಂಬವಿಲ್ಲದೆ ನಿಗದಿತ ಅವಧಿಯೊಳಗೆ ಪಡೆಯಲು ಅನುಕೂಲವಾಗಲಿದೆ.
Comments
Post a Comment