ನಗದುರಹಿತ ಚಿಕಿತ್ಸೆ - ನೌಕರರ ಸ್ನೇಹಿ ಆರೋಗ್ಯ ಯೋಜನೆ ರಾಜ್ಯ ಸರ್ಕಾರಿ ನೌಕರರ ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ಶೀಘ್ರದಲ್ಲೇ ಜಾರಿ.
ನಗದುರಹಿತ ಚಿಕಿತ್ಸೆ - ನೌಕರರ ಸ್ನೇಹಿ ಆರೋಗ್ಯ ಯೋಜನೆ ರಾಜ್ಯ ಸರ್ಕಾರಿ ನೌಕರರ ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ಶೀಘ್ರದಲ್ಲೇ ಜಾರಿ. ಪ್ರಸ್ತುತ ಜಾರಿಯಲ್ಲಿರುವ "ಆರೋಗ್ಯ ಸಂಜೀವಿನಿ" ಆರೋಗ್ಯ ಯೋಜನೆಯು ರಾಜ್ಯದ ಸರ್ಕಾರಿ ನೌಕರರಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಇರುವುದಿಲ್ಲ. ಇದನ್ನು ಮನಗಂಡ ಸಂಘವು ಈ ಆರೋಗ್ಯ ಯೋಜನಯಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿ ಒಂದು ಹೊಸ ಪ್ರಯೋಜನಕಾರಿ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು. ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯ ಮುಖ್ಯಾಂಶಗಳು ಒಳರೋಗಿ - ಹೊರರೋಗಿ ಚಿಕಿತ್ಸಾ ವೆಚ್ಚ ಸಂಪೂರ್ಣ ನಗದುರಹಿತ. ಎಲ್ಲಾ ವಿಧದ ಮೆಡಿಕಲ್ ಇಮೇಜಿಂಗ್ (ಸ್ಕ್ಯಾನಿಂಗ್), ಲ್ಯಾಬೋರೇಟರಿ ಪರೀಕ್ಷೆಗಳು ಒಳಗೊಂಡಂತೆ ಔಷಧಿಗಳು ಸಹ ಈ ಯೋಜನೆ ಅಡಿ ಉಚಿತವಾಗಿ ಲಭ್ಯವಾಗಲಿದೆ. ಈ ಯೋಜನೆಯಡಿಯಲ್ಲಿ Organ Transplantation ಗೂ ಸಹ ಅವಕಾಶ ಕಲ್ಪಿಸಲಾಗಿದೆ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಸೇವೆಗೂ ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆ ಜಾರಿಯಿಂದಾಗಿ ನಮ್ಮ ರಾಜ್ಯವು ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರಿ ನೌಕರರಿಗೆ ಇಂತಹ ವಿಶಿಷ್ಟವಾದ ನಗದುರಹಿತ ಆರೋಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮನವಿಗೆ ಸ್ಪಂದಿಸಿರುವ ಸರ್ಕಾರವು ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ನಗದುರಹ...