Skip to main content

Posts

Showing posts from 2022

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

7ನೇ ವೇತನ ಆಯೋಗದ ಅಧ್ಯಕ್ಷರ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ ಸರ್ಕಾರ.

7ನೇ ವೇತನ ಆಯೋಗದ ಅಧ್ಯಕ್ಷರ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ ಸರ್ಕಾರ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ   7ನೇ ವೇತನ ಆಯೋಗದ ಅಧ್ಯಕ್ಷರ  ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿ  ನುಡಿದಂತೆ ನಡೆದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ   ರಾಜ್ಯದ ಸಮಸ್ತ ಸರ್ಕಾರಿ ನೌಕರರು ಹಾಗೂ ಕುಟುಂಬದವರ ಪರವಾಗಿ   ತುಂಬು ಹೃದಯದ ಧನ್ಯವಾದಗಳು ರಾಜ್ಯ ಸರ್ಕಾರದ ಸಹೃದಯಿ ಸಚಿವರುಗಳಿಗೆ, ಉನ್ನತ ಅಧಿಕಾರಿಗಳಿಗೆ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳಿಗೆ  ಈ ಹೃದಯಸ್ಪರ್ಶಿ ಕೃತಜ್ಞತೆಗಳು. ಸಿ. ಎಸ್. ಷಡಾಕ್ಷರಿ,ರಾಜ್ಯಾಧ್ಯಕ್ಷರು

ರಾಜ್ಯ ಸರ್ಕಾರಿ ನೌಕರರ ಪತ್ರಿಕೆ- ಗೋವಿಂದರಾಜ್ ಎಸ್ ಸಂಪಾದಕರು ರಾಜ್ಯ ಸರ್ಕಾರಿ ನೌಕರರ ಪತ್ರಿಕೆ

ಕಳೆದೆರಡು ದಶಕಗಳಿಂದ ರಾಜ್ಯ ಸರ್ಕಾರಿ ನೌಕರರ ಪತ್ರಿಕೆ , ರಾಜ್ಯ ಸಮಗ್ರ ಸರ್ಕಾರಿ ನೌಕರರ ಮುಖವಾಣಿಯಾಗಿ ಪ್ರಕಟಗೊಳ್ಳುತ್ತಿದೆ . ಈ ಪತ್ರಿಕೆಯು ನಿಯಮಾನುಸಾರ ನೋಂದಾಯಿತ ಹಾಗೂ ಅಧಿಕೃತವಾಗಿ ಮನ್ನಣೆ ಪಡೆದ ಮಾಸಪತ್ರಿಕೆ ಆಗಿದೆ . ಸರ್ಕಾರದ ಯೋಜನೆಗಳ ಬಗ್ಗೆ ಜನತಾ ಜನಾರ್ದನನಿಗೆ ಮಾಹಿತಿ ನೀಡುವುದರ ಜೊತೆಜೊತೆಗೆ , ರಾಜ್ಯದ ಮೂಲೆಮೂಲೆಯಲ್ಲಿರುವ ನೌಕರರಿಗೂ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾಗಿರುತ್ತದೆ . ಸರ್ಕಾರದ ಸುತ್ತೋಲೆಗಳು , ಆದೇಶಗಳು , ಅಧಿಸೂಚನೆಗಳ ಜೊತೆಗೆ ನೌಕರರಿಗೆ ಅನುಕೂಲ ಆಗುವಂತೆ ವಿಷಯ ತಜ್ಞರಿಂದ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ . ಅಲ್ಲದೇ ನೌಕರರ ವಲಯದ ಕಾರ್ಯಕ್ರಮಗಳು , ಬೇಡಿಕೆಗಳು , ಹೋರಾಟಗಳ ಬಗ್ಗೆ ನಿರಂತರವಾಗಿ ಸುದ್ದಿ ಪ್ರಕಟ ಮಾಡುವ ಮೂಲಕ ಅವರ ಧ್ವನಿಯಾಗಿಯೂ ಕೆಲಸ ಮಾಡುತ್ತಿದೆ . ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಪಶುಪಾಲನೆ ಮತ್ತು ಪಶುಸಂಗೋಪನಾ , ತಾಂತ್ರಿಕ ಶಿಕ್ಷಣ , ಕಾಲೇಜು ಶಿಕ್ಷಣ , ಉದ್ಯೋಗ ಮತ್ತು ತರಬೇತಿ , ಸಾರ್ವಜನಿಕ ಶಿಕ್ಷಣ , ಸಾರ್ವಜನಿಕ ಗ್ರಂಥಾಲಯ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಿಗೂ ಈ ಪತ್ರಿಕೆಯ ಚಂದಾದಾರರಾಗಲು ಸೂಚನೆ ನೀಡಿದ್ದು , ಅದರನ್ವಯ ಕಳೆದ ಹತ್ತು ವರ್ಷಗಳಿಂದ ಚಂದಾದಾರರಾಗಿದ್ದು , ಪತ್ರಿಕೆಯ ಸಾಕ್ಷಿ ಪ್ರಜ್ಞೆಗೆ ಹೆಗ್ಗುರುತಾಗಿದೆ   ಚಂದಾದಾರ ರಾಗಲು ಪೂರ್ಣ ಹೆಸರು, ಹುದ್ದೆ, ಇಲಾಖೆ ಅಂಚೆ ವಿಳಾಸವನ್ನ...

“ಒಂದೇ ರಾಷ್ಟ್ರ – ಒಂದೇ ಪಿಂಚಣಿ” : ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ NOPRUF (National Old Pension Restoration United Front) ಸಂಘಟನೆಯ ನಿಯೋಗದ ಪದಾಧಿಕಾರಿಗಳ ಭೇಟಿ.

 “ಒಂದೇ ರಾಷ್ಟ್ರ – ಒಂದೇ ಪಿಂಚಣಿ” : ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಂಬAಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ  NOPRUF (National Old Pension Restoration United Front)  ಸಂಘಟನೆಯ ನಿಯೋಗದ ಪದಾಧಿಕಾರಿಗಳ ಭೇಟಿ. ನಮ್ಮ ಭಾರತ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ  ಸುಮಾರು 75 ಲಕ್ಷ ಓPS ಯೋಜನೆಗೆ ಒಳಪಡುವ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಸಂದ್ಯಾಕಾಲದ ಬದುಕು ಅನಿಶ್ಚಿತತೆಯಿಂದ ಕೂಡಿದ್ದು, ಜೀವನ ಭದ್ರತೆ ಇರುವುದಿಲ್ಲ.     ಈ ಯೋಜನೆಯು ಕೇಂದ್ರ ಸರ್ಕಾರದ PFRDA ( The Pension Fund Regulatory & Development Authority )  ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತದೆ.  ಈಗಾಗಲೇ ದೇಶದ 3 ರಾಜ್ಯಗಳಲ್ಲಿ NPS ಯೋಜನೆಯನ್ನು ರದ್ದುಪಡಿಸುವ ತೀರ್ಮಾನವನ್ನು ಅಲ್ಲಿನ ಸರ್ಕಾರಗಳು ಕೈಗೊಂಡಿರುತ್ತವೆ. NPS ಯೋಜನೆಯನ್ನು ರದ್ದುಪಡಿಸಲು ತೀರ್ಮಾನಿಸಿರುವ ರಾಜ್ಯಗಳಲ್ಲಿ ಅಲ್ಲಿನ ನೌಕರರಿಂದ ಕಟಾವಣೆಯಾಗಿರುವ NPS ವಂತಿಕೆ ಹಣವನ್ನು ನೌಕರರಿಗೆ ಮರುಪಾವತಿಸಲು ಹಾಗೂ NPS ರದ್ದುಪಡಿಸಲು PFRDA ಕಾಯ್ದೆಯ ನಿಯಮಗಳು ಅಡ್ಡಿಯಾಗಿರುತ್ತವೆ.    ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳಲ್ಲಿ NPS ಯೋಜನೆಯನ್ನು ರದ್ದುಪಡಿಸಿದರೂ ಸಹ ವಂತಿಕೆ ಹಣವನ...

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿರವರಿಂದ ಅಕ್ಟೋಬರ್-2022ರ ಮಾಹೆಯಲ್ಲಿಯೇ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ವೇತನ ಸಮಿತಿ/ಆಯೋಗ ರಚಿಸಲು ಅಧಿಕಾರಿಗಳಿಗೆ ಸೂಚನೆ-ಅಭಿನಂದನೆಗಳು

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿರವರಿಂದ ಅಕ್ಟೋಬರ್-2022ರ ಮಾಹೆಯಲ್ಲಿಯೇ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ವೇತನ ಸಮಿತಿ/ಆಯೋಗ ರಚಿಸಲು ಅಧಿಕಾರಿಗಳಿಗೆ ಸೂಚನೆ-ಅಭಿನಂದನೆಗಳು ದಿನಾಂಕ:14-10-2022ರಂದು ಮಾನ್ಯ ಮುಖ್ಯಮಂತ್ರಿಗಳ ಗೃಹ ಕಛೇರಿ “ಕೃಷ್ಣ”ದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ “ಪುಣ್ಯಕೋಟಿ ದತ್ತು ಯೋಜನೆ'ಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಇತರೆ ಸಂಸ್ಥೆಗಳ ನೌಕರರ ದೇಣಿಗೆ ನೀಡುವ ಒಪ್ಪಿಗೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಈ ಚರ್ಚೆ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಇದೇ ತಿಂಗಳಲ್ಲಿ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ವೇತನ ಸಮಿತಿ/ಆಯೋಗ ರಚಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು ಹಾಗೂ ವೇತನ ಸಮಿತಿ/ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ವೇತನ ಭತ್ಯೆಗಳ ಜೊತೆ ನೌಕರರಿಗೆ ಇನ್ಸೆಂಟೀವ್ ಸೌಲಭ್ಯಗಳನ್ನು ನೀಡುವ ಉದ್ದೇಶವನ್ನು ಹೊಂದಲಾಗಿದ್ದು, ಆ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಎನ್.ಪಿ.ಎಸ್. ರದ್ದುಪಡಿಸುವ ಬೇಡಿಕೆಗೆ ಸ್ಪಂದಿಸಿದ ಸನ್ಮಾನ್ಯ ಮುಖ್ಯ ಮಂತ್ರಿಗಳು ಈ ಸಂಬಂಧ ಅನ್ಯ ರಾಜ್ಯಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸ...

ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಇತ್ಯರ್ಥ ಪಡಿಸುವ ಬಗ್ಗೆ .

ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಇತ್ಯರ್ಥ ಪಡಿಸುವ ಬಗ್ಗೆ  ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸಂಪೂರ್ಣ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರುನಗರ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಮಂಡ್ಯ, ಮೈಸೂರು, ಕೊಡಗು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾಗೊಳಿಸಲಾಗಿದೆ. ಸದರಿ ತಂತ್ರಾಂಶವನ್ನು ಉಳಿದ 22 ಜಿಲ್ಲೆಗಳಲ್ಲಿ ಅನುಷ್ಕಾನಗೊಳಿಸಲು ತೀರ್ಮಾನಿಸಲಾಗಿದೆ, ಆದ್ದರಿಂದ ಇನ್ನು ಮುಂದೆ ರಾಜ್ಯದ 31 ಜಿಲ್ಲೆಗಳಲ್ಲಿ ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಇತ್ಯರ್ಥಪಡಿಸಲು ಸೂಚಿಸಿದೆ. ಇನ್ನುಮುಂದೆ ಸಾಲ ಮಂಜೂರಾತಿ ಹಾಗೂ ಅವಧಿಪೂರೈಕೆ ಬೇಕಿರಣಗಳನ್ನು ಆಫ್‌ಲೈನ್ ಮೂಲಕ ಇತ್ಯರ್ಥಪಡಿಸುವಂತಿಲ್ಲ ಹಾಗೂ ಭೌತಿಕವಾಗಿ ಕಡತದಲ್ಲಿ ನಿರ್ವಹಿಸುತ್ತಿದ್ದ ಪ್ರಕ್ರಿಯೆಗಳನ್ನು ನಿಲ್ಲಿಸತಕ್ಕದ್ದು. ಆನ್‌ಲೈನ್ ನಲ್ಲಿ ಅನುಮೋದಿಸುವ ಮುನ್ನ ಲೆಕ್ಕಾಚಾರದ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ಹಣ ಪಾವತಿಗೆ ತಂತ್ರಾಂಶದಲ್ಲಿ ಅನುಮೋದಿಸುವುದು. ಹೆಚ್ಚುವರಿಯಾಗಿ ಹಣ ಪಾವತಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಯು ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಉಪ ನಿರ್ದೇಶಕರ ಮತ್ತು ನಿರ್ದೇಶಕರ ...

ತುಟ್ಟಿಭತ್ಯೆ ಶೇ. 3.75% ಹೆಚ್ಚಳ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ತುಟ್ಟಿಭತ್ಯೆ ಶೇ. 3.75% ಹೆಚ್ಚಳ ರಾಜ್ಯ ಸರ್ಕಾರಿ ನೌಕರರಿಗೆ ಶೇ.27.25 ರಿಂದ ಶೇ.31% ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ರವರಿಗೆ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಅಭಿನಂದನೆಗಳು

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ  ಕನ್ನಡ ರಾಜ್ಯೋತ್ಸವದ ಅಂಗವಾಗಿ ದಿನಾಂಕ: 28.10.2022 ರಂದು ಬೆಳಗ್ಗೆ 11.00 ಗಂಟೆಗೆ ರಾಜ್ಯಾದ್ಯಾಂತ ಐತಿಹಾಸಿಕ ಕೋಟಿ ಕಂಠ ಗಾಯನ ಕಾರ್ಯಕ್ರಮ ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಾಂತ ಇರುವ ರಾಜ್ಯ ಸರ್ಕಾರಿ ಅಧಿಕಾರಿಗಳು /ಸಿಬ್ಬಂದಿ ವರ್ಗದವರು ಪಾಲ್ಗೊಳ್ಳುಗೊಂಡು  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೋರುತ್ತವೆ.

ರಾಜ್ಯ ಸರ್ಕಾರಿ ನೌಕರರ ಕೆ.ಜಿ.ಐ.ಡಿ. ಬೋನಸ್ ಘೋಷಣೆ - ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ

ರಾಜ್ಯ ಸರ್ಕಾರಿ ನೌಕರರ ಕೆ.ಜಿ.ಐ.ಡಿ. ಬೋನಸ್ ಘೋಷಣೆ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಯತ್ನದಿಂದ ದಿನಾಂಕ : 01-04-2016 ರಿಂದ 31-03-2018 ರವರೆಗೆ ಬಾಕಿ ಇದ್ದ 2 ವರ್ಷಗಳ ಕೆಜಿಐಡಿ ಬೋನಸ್‌ನ್ನು ಪ್ರತಿ ವರ್ಷಕ್ಕೆ ರೂ . 1000 ಕ್ಕೆ 85 ರೂಪಾಯಿಗಳ ಲಾಭಾಂಶ ಅನ್ನು ಸರ್ಕಾರ ಒಪ್ಪಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದೆ . ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್ . ಬೊಮ್ಮಾಯಿ ರವರಿಗೆ ಹಾಗೂ ಸಚಿವ ಸಂಪುಟದ ಸಚಿವರುಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಅಭಿನಂದನೆಗಳು

ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಅಕ್ಟೋಬರ್‌ನಲ್ಲಿ ಪರಿಷ್ಕರಣೆ - ಸಿ.ಎಂ. ಬಸವರಾಜ ಎಸ್. ಬೊಮ್ಮಾಯಿರವರಿಂದ ಘೋಷಣೆ

ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಅಕ್ಟೋಬರ್‌ನಲ್ಲಿ ಆಯೋಗ / ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ರಾಜ್ಯ ಸರ್ಕಾರಿ ನೌಕರರ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು. ‘ಸರ್ಕಾರಿ ನೌಕರರ ಬೇಡಿಕೆ ಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ನೌಕರರಿಗೆ ಆರೋಗ್ಯ ವಿಮೆ ಒದಗಿಸುವ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಆದೇಶ ಹೊರಡಿಸಲಾಗಿದೆ’ ಎಂದರು.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ KASS - ಸರ್ಕಾರದ ಆದೇಶ ಲೋಕಾರ್ಪಣೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ KASS -  :: ಸರ್ಕಾರದ ಆದೇಶ ಲೋಕಾರ್ಪಣೆ :: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು ,  ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ KASS - :: ಸರ್ಕಾರದ ಆದೇಶ ಲೋಕಾರ್ಪಣೆ ::  ಶ್ರೀ ಬಸವರಾಜ ಎಸ್ . ಬೊಮ್ಮಾಯಿರವರು, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ Cashless GO PDF

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ಕಡೆಯ ದಿನಾಂಕ 31-07-2022 ವರೆಗೆ ವಿಸ್ತರಣೆ ....

ಕರ್ನಾಟಕ  ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ಕಡೆಯ ದಿನಾಂಕ 31-07-2022 ವರೆಗೆ ವಿಸ್ತರಣೆ ....  ಆತ್ಮೀಯ ನೌಕರ ಬಾಂಧವರೇ ...... 2022 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ . 90 % ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಸಲ್ಲಿಸಲು ದಿನಾಂಕ : 15-07-2022ರವರೆಗೆ ನಿಗದಿಪಡಿಸಲಾಗಿತ್ತು .  CBSE & ICSE ವಿದ್ಯಾರ್ಥಿಗಳಿಗೂ ಸಹ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸುವ ಹಿನ್ನಲೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸುವ ದಿನಾಂಕವನ್ನು 31-07-2022ರವರೆಗೆ ವಿಸ್ತರಿಸಲಾಗಿದೆ .  ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು .   https://bit.ly/ksgeaprathibapuraskara2022  ಅಥವಾ 9902135813 ಗೆ “ ksgeapp2022 ” ಎಂದು ವ್ಯಾಟ್ಸ್‌ಆಪ್ ಮೇಸೆಜ್ ಕಳುಹಿಸಿ ಲಿಂಕ್ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-07-2022 .  ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು . ವಿದ್ಯಾರ್ಥಿಯ ತಂದೆ / ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು . ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತ...

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ / ವಿಡಿಯೋ ಮಾಡದಂತೆ ನಿಷೇಧಿಸಿ ಆದೇಶಿಸಿದೆ.

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ / ವಿಡಿಯೋ ಮಾಡದಂತೆ ನಿಷೇಧಿಸಿ ಆದೇಶಿಸಿದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ / ವಿಡಿಯೋ ಮಾಡದಂತೆ ನಿಷೇಧಿಸಿರುವ ಕುರಿತು .ರಾಜ್ಯಾಧ್ಯಕ್ಷರು , ಕರ್ನಾಟಕ ರಾಜ್ಯ ನೌಕರರ ಸಂಘ , ಕಬ್ಬನ್ ಉದ್ಯಾನವನ , ಬೆಂಗಳೂರು ಇವರ ಮನವಿ ಸಂಖ್ಯೆ ಜಿ.ಇ.ಎ / 847 / 2022 ದಿನಾಂಕ : 25-02-2022 ರಲ್ಲಿ ಕೋರಿದ್ದು.  ಅದರಂತೆಯೇ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ / ವಿಡಿಯೋ ಮಾಡದಂತೆ ನಿಷೇಧಿಸಿ ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ ( ಆಸು ) 40 ಕತವ 2022 ಬೆಂಗಳೂರು , ದಿನಾಂಕ : 15-07-2022ರಂತೆ ಆದೇಶಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದು , ಎಲ್ಲ ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ಶೇ 2.75 ರಷ್ಟು ತುಟ್ಟಿಭತ್ಯೆ ( Dearness Allowance ) ಹೆಚ್ಚಿಸಿ‌ ಆದೇಶಿಸಲಾಗಿದೆ.  “ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು . " ಸಮಾನ ಕೆಲಸಕ್ಕೆ ಸಮಾನ ವೇತನ - ಕೇಂದ್ರ ಮಾದರಿ ವೇತನ ಭತ್ಯೆಗಳು ರಾಜ್ಯ  ಸರ್ಕಾರಿ ನೌಕರರಿಗೆ ಸಹ ಜಾರಿ‌" ⤵ ಈ ಎಲ್ಲ ಪರೀಕ್ಷೆಗಳಿಗೆ ಇತ್ತೀಚಿನ ತಿದ್ದುಪಡಿಗಳನ್ನು ಅಳವಡಿಸಿದ ...

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ (Lungs Transplantation) ವೈದ್ಯಕೀಯ ವೆಚ್ಚ ಮರುಪಾವತಿಗಳ ದರ ನಿಗದಿಪಡಿಸಿ ಸರ್ಕಾರದ ಆದೇಶ

  ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ (Lungs Transplantation) ವೈದ್ಯಕೀಯ ವೆಚ್ಚ ಮರುಪಾವತಿಗಳ ದರ ನಿಗದಿಪಡಿಸಿ ಸರ್ಕಾರದ ಆದೇಶ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬಹುದಿನಗಳ ಬೇಡಿಕೆಗಳ ಸ್ಪಂದಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆಗೆ  ( Lungs Transplantation ) ವೈದ್ಯಕೀಯ ವೆಚ್ಚ ಮರುಪಾವತಿಗಳ ದರ ನಿಗದಿಪಡಿಸಲು ನೀಡಿದ ನಿರ್ದೇಶನದಂತೆ ಸರ್ಕಾರವು ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.       ಇದಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜು ಬೊಮ್ಮಾಯಿರವರಿಗೆ ಮತ್ತು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಸಂಘವು ಅಭಿನಂದೆಗಳನ್ನು ಸಲ್ಲಿಸುತ್ತದೆ. ಶ್ವಾ ಸಕೋಶದ ಕಸಿ ಶಸ್ತ್ರ ಚಿಕಿತ್ಸೆ ( For exclusive Lungs Transplantation Through deceased donor ) - ರೂ. 15.00  ಲಕ್ಷ ದರ ಹೃದಯ ಮತ್ತು ಶ್ವಾಸಕೋಸದ ಕಸಿ ಶಸ್ತ್ರ ಚಿಕಿತ್ಸೆ   ( Heart & Lungs Transplant ) - ರೂ. 15.00 ಲಕ್ಷ +  50% Of the lung Transplant Charges ದರವನ್ನು ‌ನಿಗದಿಪಡಿಸಿದ...

ಗ್ರಾಮೀಣ ಕೃಪಾಂಕದಡಿ ವಿಶೇಷ ನಿಯಮದನ್ವಯ ನೇಮಕಗೊಂಡ ಶಿಕ್ಷಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ದಿನಾಂಕ : 06-07-2022ರಂದು ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ಮನವಿಯಂತೆ ಗ್ರಾಮೀಣ ಕೃಪಾಂಕದಡಿ ವಿಶೇಷ ನಿಯಮದನ್ವಯ ನೇಮಕಗೊಂಡ ಶಿಕ್ಷಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ದಿನಾಂಕ : 06-07-2022ರಂದು ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ಜರುಗಿತು .  ಈ ಸಭೆಯಲ್ಲಿ ಈ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು .  1 ) ಗೌರವಾನ್ವಿತ ಸುಪ್ರೀಂ ಕೋರ್ಟ್ ಹಾಗೂ ಕೆ.ಎ.ಟಿ ನ್ಯಾಯಾಲಯದ ನಿರ್ದೇಶನದಂತೆ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ತಯಾರಿಸಿ ಅರ್ಹ ಕೃಪಾಂಕ ಶಿಕ್ಷಕರುಗಳಿಗೆ ನ್ಯಾಯ ದೊಕಿಸಿಕೊಡಲು ಹಾಗೂ ಲಭ್ಯವಾಗುವ ಸೇವಾ ಸೌಲಭ್ಯಗಳನ್ನು ಪೂರ್ವಾನ್ವಯವಾಗುವಂತೆ ಮಂಜೂರು ಮಾಡುವ ಬಗ್ಗೆ ಪರಿಶೀಲಿಸಿ ಕೃಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು .  2 ) ತತ್ಪರಿಣಾಮ , ಪರಿಷ್ಕೃತ ಪಟ್ಟಿ ಪ್ರಕಾರ ಸ್ಥಾನ ಪಡೆಯದೆ ಗ್ರಾಮೀಣ ಕೃಪಾಂಕದಡಿ ವಿಶೇಷ ನಿಯಮಗಳನ್ವಯ ನೇಮಕಾತಿ ಹೊಂದುವಂತಹ ಶಿಕ್ಷಕರಿಗೆ ದಿನಾಂಕ : 13-03-2013ರಂದು ನಡೆದ ಸಚಿವ ಸಂಪುಟದ ನಿರ್ಣಯದಂತ 2 ವಾರ್ಷಿಕ ವೇತನ ಬಡ್ತಿಗಳನ್ನು ಪೂರ್ವಾನ್ವಯವಾಗುವಂತೆ ಮಂಜೂರು ಮಾಡುವ ಬಗ್ಗೆ ಅಗತ್ಯ ಮಾಹಿತಿ ಪಡೆದು ಕ್ರಮವಹಿಸಲು ಸೂಚಿಸಿದರು .  ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿರವರು , ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಆತ್ಮೀಯ ನೌಕರ ಬಾಂಧವರೇ...... 2022 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ  ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. Click Here --  https://bit.ly/ksgeaprathibapuraskara2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :15-07-2022. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು • ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  • ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತಿಲ್ಲ. • ವಿದ್ಯಾರ್ಥಿಯು 2022ರ SSLC/PUC ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು.  ONLINE ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು • ವಿದ್ಯಾರ್ಥಿಯ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ದೃಢೀಕೃತ ಅಂಕಪಟ್ಟಿ,  • ಇಲಾಖೆಯ ಸೇವಾ ದೃಢೀಕರಣ ಪತ್ರ ಹಾಗೂ ...

ನನ್ನ ವೇತನದ ಮಾಹಿತಿ … ನನ್ನ ಮೊಬೈಲ್‌ನಲ್ಲಿ ...

ನನ್ನ ವೇತನದ ಮಾಹಿತಿ … ನನ್ನ ಮೊಬೈಲ್‌ನಲ್ಲಿ ... ಸಿ.ಎಸ್ . ಷಡಾಕ್ಷರಿ , ರಾಜ್ಯಾಧ್ಯಕ್ಷರು , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಆದ ನನಗೆ ಮಾನ್ಯ ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಿದ ವೇತನವು ಬ್ಯಾಂಕ್ ಖಾತೆಗೆ ಜಮೆಯಾಗಿ ಮೊಬೈಲ್‌ಗೆ SMS ALERT ರವಾನಿಸುವ ಸೇವೆ ಪಡೆದ ಸಂತೋಷದ ಸಂದರ್ಭ ....  ಸರ್ಕಾರಕ್ಕೆ ಕೃತಜ್ಞತೆಗಳು - ಸಿ.ಎಸ್ . ಷಡಾಕ್ಷರಿ ರಾಜ್ಯಾಧ್ಯಕ್ಷರು __________________________________ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಆದ್ಯ ಗಮನಕ್ಕೆ ಬೆಂಗಳೂರಿನಲ್ಲಿ ದಿನಾಂಕ 30, 31 ಮೇ ಹಾಗೂ 01 ಜೂನ್ 2022ರಂದು ನಡೆದ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಐತಿಹಾಸಿಕ ಕ್ಷಣಗಳು ತಮ್ಮ ಮುಂದೆ ಈ ಕೆಳಕಂಡ  ವೆಬ್‌ಸೈಟ್‌ನಲ್ಲಿ ಲಭ್ಯವಿದೆ https://drive.google.com/drive/folders/1ZCihVhDo0RUSfxoBbM0zwbzamJxxZ7RL ಸಂಗೀತ ರಸ ಸಂಜೆ ಹಾಗೂ ಮನರಂಜನಾ ಕಾರ್ಯಕ್ರಮದ ವಿಡಿಯೋಗಳು KSGEA NEWS ಯುಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಆದ್ಯ ಗಮನಕ್ಕೆ-Photos

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಆದ್ಯ ಗಮನಕ್ಕೆ ಬೆಂಗಳೂರಿನಲ್ಲಿ ದಿನಾಂಕ 30, 31 ಮೇ ಹಾಗೂ 01 ಜೂನ್ 2022ರಂದು ನಡೆದ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಐತಿಹಾಸಿಕ ಕ್ಷಣಗಳು ತಮ್ಮ ಮುಂದೆ ಈ ಕೆಳಕಂಡ  ವೆಬ್‌ಸೈಟ್‌ನಲ್ಲಿ ಲಭ್ಯವಿದೆ https://drive.google.com/drive/folders/1ZCihVhDo0RUSfxoBbM0zwbzamJxxZ7RL ಸಂಗೀತ ರಸ ಸಂಜೆ ಹಾಗೂ ಮನರಂಜನಾ ಕಾರ್ಯಕ್ರಮದ ವಿಡಿಯೋಗಳು KSGEA NEWS ಯುಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು

ಸರ್ಕಾರಿ ನೌಕರರಿಗೆ ಶೀಘ್ರ ಆರೋಗ್ಯ ಸಂಜೀವಿನಿ ಈ ವರ್ಷ 7 ನೇ ವೇತನ ಆಯೋಗ ರಚನೆ : ಬೊಮ್ಮಾಯಿ ಘೋಷಣೆ | ಸರ್ಕಾರಿ ನೌಕರರ ಕ್ರೀಡಾ , ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಸರ್ಕಾರಿ ನೌಕರರಿಗೆ ಶೀಘ್ರ ಆರೋಗ್ಯ ಸಂಜೀವಿನಿ ಈ ವರ್ಷ 7 ನೇ ವೇತನ ಆಯೋಗ ರಚನೆ : ಬೊಮ್ಮಾಯಿ ಘೋಷಣೆ | ಸರ್ಕಾರಿ ನೌಕರರ ಕ್ರೀಡಾ , ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು – 2022ರ ಉದ್ಘಾಟನಾ ಸಮಾರಂಭ ಲೈವ್ ನಲ್ಲಿ ವಿಕ್ಷೀಸಲು ಇಲ್ಲಿ ಕ್ಲಿಕ್ ಮಾಡಿ.

ರಾಜ್ಯ ಮಟ್ಟದ ಸರ್ಕಾರಿ ನೌಕರರ  ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು – 2022ರ ಉದ್ಘಾಟನಾ  ಸಮಾರಂಭ ಲೈವ್ ನಲ್ಲಿ ವಿಕ್ಷೀಸಲು ಇಲ್ಲಿ ಕ್ಲಿಕ್ ಮಾಡಿ. ⬇️

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers