ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಇತ್ಯರ್ಥ ಪಡಿಸುವ ಬಗ್ಗೆ .
ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಇತ್ಯರ್ಥ ಪಡಿಸುವ ಬಗ್ಗೆ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸಂಪೂರ್ಣ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರುನಗರ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಮಂಡ್ಯ, ಮೈಸೂರು, ಕೊಡಗು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾಗೊಳಿಸಲಾಗಿದೆ.
ಸದರಿ ತಂತ್ರಾಂಶವನ್ನು ಉಳಿದ 22 ಜಿಲ್ಲೆಗಳಲ್ಲಿ ಅನುಷ್ಕಾನಗೊಳಿಸಲು
ತೀರ್ಮಾನಿಸಲಾಗಿದೆ, ಆದ್ದರಿಂದ ಇನ್ನು ಮುಂದೆ ರಾಜ್ಯದ 31 ಜಿಲ್ಲೆಗಳಲ್ಲಿ ಜೀವ
ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ
ಪ್ರಕರಣಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ
ಇತ್ಯರ್ಥಪಡಿಸಲು ಸೂಚಿಸಿದೆ.
ಇನ್ನುಮುಂದೆ ಸಾಲ ಮಂಜೂರಾತಿ ಹಾಗೂ ಅವಧಿಪೂರೈಕೆ ಬೇಕಿರಣಗಳನ್ನು ಆಫ್‌ಲೈನ್ ಮೂಲಕ ಇತ್ಯರ್ಥಪಡಿಸುವಂತಿಲ್ಲ ಹಾಗೂ ಭೌತಿಕವಾಗಿ ಕಡತದಲ್ಲಿ ನಿರ್ವಹಿಸುತ್ತಿದ್ದ ಪ್ರಕ್ರಿಯೆಗಳನ್ನು ನಿಲ್ಲಿಸತಕ್ಕದ್ದು. ಆನ್‌ಲೈನ್ ನಲ್ಲಿ ಅನುಮೋದಿಸುವ ಮುನ್ನ ಲೆಕ್ಕಾಚಾರದ ಎಲ್ಲಾ ವಿವರಗಳನ್ನು
ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ಹಣ ಪಾವತಿಗೆ ತಂತ್ರಾಂಶದಲ್ಲಿ
ಅನುಮೋದಿಸುವುದು. ಹೆಚ್ಚುವರಿಯಾಗಿ ಹಣ ಪಾವತಿಸಿದಲ್ಲಿ ಸಂಬಂಧಪಟ್ಟ
ಅಧಿಕಾರಿಯು ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಉಪ ನಿರ್ದೇಶಕರ ಮತ್ತು ನಿರ್ದೇಶಕರ
ಆರ್ಥಿಕ ಅಧಿಕಾರ ವ್ಯಾಪ್ತಿಯನ್ನಯ ಪ್ರಕರಣಗಳನ್ನು ಆನ್‌ಲೈನ್‌ನಲ್ಲಿ ಅನುಮೋದನೆಗೆ
ಸಲ್ಲಿಸುವುದು. ಭೌತಿಕ ಕಡತಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.
Comments
Post a Comment