Skip to main content

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ರಾಜ್ಯ ಸರ್ಕಾರಿ ನೌಕರರ ಪತ್ರಿಕೆ- ಗೋವಿಂದರಾಜ್ ಎಸ್ ಸಂಪಾದಕರು ರಾಜ್ಯ ಸರ್ಕಾರಿ ನೌಕರರ ಪತ್ರಿಕೆ

ಕಳೆದೆರಡು ದಶಕಗಳಿಂದ ರಾಜ್ಯ ಸರ್ಕಾರಿ ನೌಕರರ ಪತ್ರಿಕೆ , ರಾಜ್ಯ ಸಮಗ್ರ ಸರ್ಕಾರಿ ನೌಕರರ ಮುಖವಾಣಿಯಾಗಿ ಪ್ರಕಟಗೊಳ್ಳುತ್ತಿದೆ . ಈ ಪತ್ರಿಕೆಯು ನಿಯಮಾನುಸಾರ ನೋಂದಾಯಿತ ಹಾಗೂ ಅಧಿಕೃತವಾಗಿ ಮನ್ನಣೆ ಪಡೆದ ಮಾಸಪತ್ರಿಕೆ ಆಗಿದೆ . ಸರ್ಕಾರದ ಯೋಜನೆಗಳ ಬಗ್ಗೆ ಜನತಾ ಜನಾರ್ದನನಿಗೆ ಮಾಹಿತಿ ನೀಡುವುದರ ಜೊತೆಜೊತೆಗೆ , ರಾಜ್ಯದ ಮೂಲೆಮೂಲೆಯಲ್ಲಿರುವ ನೌಕರರಿಗೂ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾಗಿರುತ್ತದೆ . ಸರ್ಕಾರದ ಸುತ್ತೋಲೆಗಳು , ಆದೇಶಗಳು , ಅಧಿಸೂಚನೆಗಳ ಜೊತೆಗೆ ನೌಕರರಿಗೆ ಅನುಕೂಲ ಆಗುವಂತೆ ವಿಷಯ ತಜ್ಞರಿಂದ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ . ಅಲ್ಲದೇ ನೌಕರರ ವಲಯದ ಕಾರ್ಯಕ್ರಮಗಳು , ಬೇಡಿಕೆಗಳು , ಹೋರಾಟಗಳ ಬಗ್ಗೆ ನಿರಂತರವಾಗಿ ಸುದ್ದಿ ಪ್ರಕಟ ಮಾಡುವ ಮೂಲಕ ಅವರ ಧ್ವನಿಯಾಗಿಯೂ ಕೆಲಸ ಮಾಡುತ್ತಿದೆ . ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಪಶುಪಾಲನೆ ಮತ್ತು ಪಶುಸಂಗೋಪನಾ , ತಾಂತ್ರಿಕ ಶಿಕ್ಷಣ , ಕಾಲೇಜು ಶಿಕ್ಷಣ , ಉದ್ಯೋಗ ಮತ್ತು ತರಬೇತಿ , ಸಾರ್ವಜನಿಕ ಶಿಕ್ಷಣ , ಸಾರ್ವಜನಿಕ ಗ್ರಂಥಾಲಯ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಿಗೂ ಈ ಪತ್ರಿಕೆಯ ಚಂದಾದಾರರಾಗಲು ಸೂಚನೆ ನೀಡಿದ್ದು , ಅದರನ್ವಯ ಕಳೆದ ಹತ್ತು ವರ್ಷಗಳಿಂದ ಚಂದಾದಾರರಾಗಿದ್ದು , ಪತ್ರಿಕೆಯ ಸಾಕ್ಷಿ ಪ್ರಜ್ಞೆಗೆ ಹೆಗ್ಗುರುತಾಗಿದೆ 

ಚಂದಾದಾರರಾಗಲು

ಪೂರ್ಣ ಹೆಸರು, ಹುದ್ದೆ, ಇಲಾಖೆ ಅಂಚೆ ವಿಳಾಸವನ್ನು ಪಿನ್ ಕೋಡ್ ಮೊಬೈಲ್ ಸಂಖ್ಯೆ ನಮಗೆ ಕಳುಹಿಸಿ ಕೊಡಿ. Payment Details ಎಷ್ಟು ಸಂಚಿಕೆಗಳ ಚಂದಾದಾರರಾಗಲು ಬಯಸಿರುವಿರೋ ಆ ಮೊತ್ತವನ್ನು Phonepe / Google Pay ಮೂಲಕ 9902135813 ಗೆ ಪಾವತಿಸಿ, ಹಣ ಪಾವತಿಯ Screen Shot ಕಳುಹಿಸಿ. ಚಂದಾ ವಿವರ ( ಅಂಚೆ ವೆಚ್ಚ ಸೇರಿ ) Subscription Details ( Including Postal Charges ) ( ಎಷ್ಟು ವರ್ಷಕ್ಕೆ ಎಂಬುದನ್ನು ಗುರುತಿಸಿ ) . ತೈವಾರ್ಷಿಕ ಚಂದಾ : ರೂ . 1,000 /- ( ಒಟ್ಟು 36 ಬಿಡಿ ಸಂಚಿಕೆಗಳು ) 3Years Subscription ( 36 issues ) 5 ವರ್ಷಕ್ಕೆ ಚಂದಾ : ರೂ . 1,500 /- ( ಒಟ್ಟು 60 ಬಿಡಿ ಸಂಚಿಕೆಗಳು )5 Years Subscription ( 60 issues ) . ಅಜೀವ ಸದಸ್ಯತ್ವ ಚಂದಾ : ರೂ . 4,858 /- (30 ವರ್ಷಗಳಿಗೆ ) Lifetime Subscription ( 30 years )

ಗೋವಿಂದರಾಜ್ ಎಸ್
ಸಂಪಾದಕರು ರಾಜ್ಯ ಸರ್ಕಾರಿ ನೌಕರರ ಪತ್ರಿಕೆ ಇಲಾಖಾ ವಿಚಾರಣೆ : ನೇಮಕಾತಿ ಪ್ರಾಧಿಕಾರ ಶಿರೀಷ ಜೋಶಿರವರಿಂದ ಅಂಕಣ. ನಿವೃತ್ತಿ ವೇತನಕ್ಕಾಗಿ ಅರ್ಜಿಗಳು ಮತ್ತು ಮಂಜೂರಾತಿ ಬಗ್ಗೆ ಲ. ರಾಘವೇಂದ್ರರವರಿಂದ ಸರ್ಕಾರಿ ನೌಕರರಿಗೆ ಚುಟುಕು ಮಾಹಿತಿ - ಟಿ‌ ಕೆ ರಂಗರಾಜುರವರಿಂದ ಅಂಕಣ ಸರಕಾರಿ ನೌಕರರ ವೇತನ ಆಯೋಗದ ಅಧ್ಯಕ್ಷರುಗಳ ಪರಿಚಯ ಮಾಲಿಕೆ - ಪ್ರಕಾಶ್ ನಾಯಕ್‌ರವರಿಂದ ಅಂಕಣ ವೇತನ ಮತ್ತು ಭತ್ಯೆಗಳ ಸಾಮಾನ್ಯ ನಿಯಮಗಳು - ಕಂದಾಯ ಇಲಾಖೆ ವಿಷಯ ತಜ್ಞ ಯ.ರು. ಪಾಟೀಲ್ ರವರಿಂದ ಅಂಕಣ ಇತ್ಯಾದಿಗಳು.

Comments

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers