ಕರ್ನಾಟಕ ರಾಜ್ಯ ಪ್ರಾಥಮಿಕ/ಪ್ರೌಢ/ಪದವಿ ಪೂರ್ವ ಶಿಕ್ಷಣ ಇಲಾಖೆ ಬೋಧಕ ವೃಂದದ ಮಾಹಿತಿ ಸಂಗ್ರಹಣೆ. ಮಾನ್ಯ ಪ್ರಾಥಮಿಕ / ಪ್ರೌಢ ಶಾಲಾ / ಪದವಿ ಪೂರ್ವ ಶಿಕ್ಷಣ ಇಲಾಖೆ ಬೋಧಕ ಬಂಧುಗಳೇ.... ಶಿಕ್ಷಣ ಇಲಾಖೆಯ ಬೋಧಕ ವೃಂದದ ಜ್ವಲಂತ ಸಮಸ್ಯೆಗಳಾದ ಸಿ&ಆರ್ ನಿಯಮ ತಿದ್ದುಪಡಿ ಪದವೀಧರ ಶಿಕ್ಷಕರ ಸಮಸ್ಯೆ ಗ್ರಾಮಿಣ ಕೃಪಾಂಕ ಶಿಕ್ಷಕರ ಸಮಸ್ಯೆ ಬಡ್ತಿ ಪಡೆದು ಕಡಿಮೆ ವೇತನ ಪಡೆಯುತ್ತಿರುವ 10,15,20,25 ವರ್ಷಗಳ ಸಮಸ್ಯೆ ಶಿಕ್ಷಣ ಇಲಾಖೆಯ ಇನ್ನಿತರೆ ಸಮಸ್ಯೆಗಳು ಮೇಲ್ಕಂಡ ಹಲವಾರು ವರ್ಷಗಳ ಸಮಸ್ಯೆಗೆ ಪರಿಹಾರ ಒದಗಿಸಲು ಮಾನ್ಯ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ದಿನಾಂಕ: 08-11-2021 ರಂದು ನಡೆಯಲಿರುವ ಸಭೆಯಲ್ಲಿ ಕರಾರುವಕ್ಕಾಗಿ ಮೇಲಿನ ವಿಷಯಗಳ ಬಗ್ಗೆ ಪ್ರತಿಪಾದಿಸಲು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. (ಅಂತರ ಜಿಲ್ಲಾ ವರ್ಗಾವಣೆ ಬಯಸಿರುವ ಶಿಕ್ಷಕರ ಮಾಹಿತಿಯನ್ನು ಈಗಾಗಲೇ ಸಂಘದಿ0ದ ಸಂಗ್ರಹಿಸಲಾಗಿದೆ.) ಆದ್ದರಿAದ, ಶಿಕ್ಷಣ ಇಲಾಖೆಯ ಬೋಧಕ ವೃಂದದ ಬಂಧುಗಳು ಈ ಕೆಳಕಂಡ ಲಿಂಕ್‌ಅನ್ನು ಬಳಸಿ Online ಮೂಲಕ ದಿ:05-11-2021 ರೊಳಗಾಗಿ ಅಗತ್ಯ ಮಾಹಿತಿಗಳನ್ನು ಸಂಬ0ಧಿಸಿದವರು ಕಡ್ಡಾಯವಾಗಿ ಸಲ್ಲಿಸಲು ಕೋರಿದೆ. https://bit.ly/teachersksgea ಆನ್‌ಲೈನ್ ಮಾಹಿತಿ ಸಲ್ಲಿಸಲು ಪ್ರಾರಂಭ ದಿನಾಂಕ : 30-10-2021 ರಿಂದ ದ...
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025 ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು. ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...