Skip to main content

Posts

Showing posts from June, 2021

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ / ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯ ಮಂಜೂರು ಮಾಡಿದ‌ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ / ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯ ಮಂಜೂರು ಮಾಡಿದ‌ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು. ರಾಜ್ಯದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಕೆಲವು ಸರ್ಕಾರಿ ನೌಕರರು ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರ ಸಲಹೆಯ ಮೇರೆಗೆ ಕಿಮೋ / ರೇಡಿಯೋ ಥೆರಪಿಯಂತಹ ಚಿಕಿತ್ಸೆಗೆ ಒಳಪಡಬೇಕಿದ್ದು , ಆ ನಿಮಿತ್ತವಾಗಿ ಕಡ್ಡಾಯವಾಗಿ ವಿಶ್ರಾಂತಿಯನ್ನು ಪಡೆಯಬೇಕಿರುವ ಅವಶ್ಯಕತೆಯಿರುವುದರ ಮೇರೆಗೆ , ಈ ನಿಮಿತ್ತವಾಗಿ ಪಡೆಯುವ ಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯತೆಯಿಂದಾಗಿ ಕಛೇರಿಗೆ ಹಾಜರಾಗಲು ಕಷ್ಟ ಸಾಧ್ಯವಾದ್ದರಿಂದ , ಈ ನಿಮಿತ್ತದ ಅವಧಿಯನ್ನು ಸಕ್ಷಮ ವೈದ್ಯಕೀಯ ಪ್ರಾಧಿಕಾರವು ನೀಡುವ ಪ್ರಮಾಣಪತ್ರವನ್ನು ಹಾಜರು ಪಡಿಸುವ ಷರತ್ತಿಗೊಳಪಟ್ಟ ವಿಶೇಷ ಸಾಂದರ್ಭಿಕ ರಜೆಯನ್ನಾಗಿ ಪರಿಗಣಿಸುವಂತೆ , ಉಲ್ಲೇಖದಲ್ಲಿ ಓದಲಾಗಿರುವ ಪತ್ರದಲ್ಲಿ ಅಧ್ಯಕ್ಷರು , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಕಬ್ಬನ್ ಪಾರ್ಕ್ , ಬೆಂಗಳೂರು ಇವರು ಕೋರಿರುವುದಾಗಿದೆ . ವಿಷಯವನ್ನು ಸರ್ಕಾರವು ಪರಿಶೀಲಿಸಿದ್ದು , ಅದರಂತೆ ಈ ಕೆಳಕಂಡ ಆದೇಶವನ್ನು ಹೊರಡಿಸಿದೆ . ಸರ್ಕಾರದ ಆದೇಶ ಸಂಖ್ಯೆ : ಆಇ 8 ( ಇ ) ಸೇನಿಸೇ 2020 ಬೆಂಗಳೂರು , ದಿನಾಂಕ ...

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಕುರಿತು ಸರ್ಕಾರದಿಂದ ಆದೇಶ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಕುರಿತು ಸರ್ಕಾರದಿಂದ ಆದೇಶ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು. ಸರ್ಕಾರಿ ಆದೇಶ ಸಂಖ್ಯೆ : ಆಇ 49 ) ಸೇನಿಸೇ 2021 ಬೆಂಗಳೂರು , ದಿನಾಂಕ : 21.06.2021 ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಈ ಕೆಳಕಂಡ ಷರತ್ತುಗಳ ಮೇರೆಗೆ ಇಡೀ ಸೇವಾವಧಿಯಲ್ಲಿ ಗರಿಷ್ಟ ಆರು ತಿಂಗಳವರೆಗೆ ಅಂದರೆ 180 ದಿನಗಳ “ ಶಿಶುಪಾಲನಾ ರಜೆ " ಯನ್ನು , ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವು ಮಂಜೂರು ಮಾಡತಕ್ಕದ್ದು . i ) ಮಹಿಳಾ ಸರ್ಕಾರಿ ನೌಕರಳು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ , ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಮಾತ್ರ ಈ ರಜೆಯ ಸೌಲಭ್ಯಕ್ಕೆ ಅರ್ಹರಾಗತಕ್ಕದ್ದು . ii ) ಈ ರಜೆಯ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟ ಪೂರ್ವದಲ್ಲಿ ಪಡೆಯಲರ್ಹವಿರುವ ಸಂಪೂರ್ಣ ವೇತನಕ್ಕೆ ಸಮನಾದ ರಜೆ ಸಂಬಳಕ್ಕೆ ಅರ್ಹರಾಗತಕ್ಕದ್ದು . iii ) ಪ್ರತಿ ಬಾರಿಯ ಈ ರಜೆ ಮಂಜೂರಾತಿಯು ಕನಿಷ್ಟ 15 ದಿನಗಳಿಗಿಂತ ಕಡಿಮೆ ಇರಬಾರದು . iv ) ಮಹಿಳಾ ಸರ್ಕಾರಿ ನೌಕರಳು ಈ ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ , ನಿಯಮಾನುಸಾರ ಪಡೆಯಲರ್ಹವಿರುವ ಅಸಾಧಾರಣ ರಜೆಯೂ ಒಳಗೊಂಡಂತೆ ಇತರೆ ರಜೆಯೊಂದಿಗೆ ಸಂಯೋಜಿಸಿ ಪಡೆಯಬಹುದು . v ) ಈ ರಜೆಯನ್ನು ಯಾವುದೇ ರಜೆ ಲೆಕ್ಕದ...

ನೌಕರರ ಹಾಜರಾತಿ ಬಗ್ಗೆ ಸಿಆಸುಇ 87 ಡಿಇವಿ 2021 , ದಿನಾಂಕ 19.06.2021 . ಸುತ್ತೋಲೆ -5 ಸರ್ಕಾರದಿಂದ ಪ್ರಕಟ.

ನೌಕರರ ಹಾಜರಾತಿ ಬಗ್ಗೆ ಸಿಆಸುಇ 87 ಡಿಇವಿ 2021 , ದಿನಾಂಕ 19.06.2021 . ಸುತ್ತೋಲೆ -5 ಸರ್ಕಾರದಿಂದ ಪ್ರಕಟ. ಕರ್ನಾಟಕ ಸರ್ಕಾರ ಸಂ . ಸಿಆಸುಇ 87 ಡಿಇವಿ 2021 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನ ಸೌಧ ಬೆಂಗಳೂರು , ದಿನಾಂಕ 19.06.2021 . ಸುತೋಲೆ -5 1. ಸುತ್ತೋಲೆ ಸಂಖ್ಯೆ ಸಿಆಸುಇ 87 ಡಿಇವಿ 2021 ದಿನಾಂಕ 27.04.2021 , 28.04.2021 , 10.05.2021 , 24.05.2021 ಮತ್ತು 04.06.2021 ನ್ನು ಮುಂದುವರಿಸುತ್ತಾ , ರಾಜ್ಯದಲ್ಲಿ ಕೊರೋನಾ ವೈರಸ್ ( ಕೋವಿಡ್ -19 ) ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಚಿವಾಲಯದಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಾದ ( 1 ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( 2 ) ವೈದ್ಯಕೀಯ ಶಿಕ್ಷಣ ಇಲಾಖೆ ( 3 ) ಒಳಾಡಳಿತ ಇಲಾಖೆ ( 4 ) ಕಂದಾಯ ಇಲಾಖೆ , ( 5 ) ಕಾರ್ಮಿಕ ಇಲಾಖೆ ( 6 ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ( 7 ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಮಕ್ಕಳ ರಕ್ಷಣಾ ಸೇವೆಗಳನ್ನು ಒದಗಿಸುತ್ತಿರುವ ಮಕ್ಕಳ ರಕ್ಷಣಾ ವಿರ್ದೇಶನಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿ | ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗತಕ್ಕದ್ದು , 2. ಮೇಲ್ಕಾಣಿಸಿದ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ - ಎ ವೃಂದದ ಎಲ್ಲಾ ಅಧಿಕಾರಿಗಳು ಕಡ್ರಾಯವಾಗ...

ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ( 20 ವರ್ಷದ ಸೇವಾವಧಿಯ ವಿಶೇಷ ವೇತನ ಬಡ್ತಿ).

   ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ. ಪ್ರಶ್ನೆ   ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 25. 9.1992 ರಲ್ಲಿ ಸೇರಿದೆ . 5. 6. 2001 ರಿಂದ ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಪದೋನ್ನತಿ ಹೊಂದಿ 10 ವರ್ಷಗಳ ಕಾಲಮಿತಿ , 15 ವರ್ಷದ ಸ್ವಯಂಚಾಲಿತ ಬಡ್ತಿಗಳನ್ನು ಪಡೆದಿದ್ದೇನೆ ನಾನೀಗ 20 ವರ್ಷದ ಸೇವಾವಧಿಯ ವಿಶೇಷ ವೇತನ ಬಡ್ತಿಗೆ ಅರ್ಹನಾಗುತ್ತೇನೆಯೇ ? 9.5.2002 ರ ಸರ್ಕಾರಿ ಆದೇಶ ಸಂಖ್ಯೆ : ಎಡಿ 13 ಎಸ್‌ಆರ್‌ಪಿ 2002 ರ ಕಂಡಿಕ 6 ರಂತೆ ಈಗಾಗಲೇ ಕನಿಷ್ಠ ಪದೋನ್ನತಿ ಪಡೆದಿರುವ ಸರ್ಕಾರಿ ನೌಕರರಿಗೆ ಒಂದು ಹೆಚ್ಚುವರಿ ವೇತನ ಲಭ್ಯವಾಗುವುದಿಲ್ಲ . ನೀವು ಈಗಾಗಲೇ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಶಿಕ್ಷಕರಾಗಿ ಪದೋನ್ನತಿ ಹೊಂದಿರುವುದರಿಂದ ಈ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ .    ಹೆಚ್ಚಿನ ವಿವರಗಳಿಗೆ ಇದೇ  . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು 'ಪುಸ್ತಕ ನೋಡಬಹುದು . KCSR Book Kannada offer price @₹540/- ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು    ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ. ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ. https://mydukaan.io/ksgeanews ಪ್ರತಿವಾರ ಹೊಸ ಪ್ರಶ್ನೋತ್...

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭ ಮಾಡುವ ಕುರಿತಂತೆ ಉದ್ಭವವಾಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ನಾಳೆ ಸಚಿವರೊಂದಿಗೆ ವಿಶೇಷ ಸಭೆ‌ - ಶ್ರೀ‌‌ ಸಿ.ಎಸ್. ಷಡಾಕ್ಷರಿ.

ರಾಜ್ಯದ ಸಮಸ್ತ ಶಿಕ್ಷಕರ ಆದ್ಯ ಗಮನಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭ ಮಾಡುವ ಕುರಿತಂತೆ ಉದ್ಭವವಾಗಿರುವ ಸಮಸ್ಯೆಗಳ ಪರಿಹಾರಕ್ಕೆ ನಾಳೆ ಸಚಿವರೊಂದಿಗೆ ವಿಶೇಷ ಸಭೆ‌ - ಶ್ರೀ‌‌ ಸಿ.ಎಸ್. ಷಡಾಕ್ಷರಿ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭ ಮಾಡುವ ಕುರಿತಂತೆ ಉದ್ಭವವಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸನ್ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಎಸ್.ಸುರೇಶ್‌ಕುಮಾರ್‌ರವರು ನಾಳೆ ಸಮಯವನ್ನು ನೀಡಿರುತ್ತಾರೆ .  ಶಿಕ್ಷಕರ ಸಮಸ್ಯೆಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗುವುದು . ದಯಮಾಡಿ ಶಿಕ್ಷಕ ಬಂಧುಗಳು ಆತಂಕಕ್ಕೆ ಒಳಗಾಗದಂತೆ ಸಂಘವು ಮನವಿ ಮಾಡುತ್ತದೆ ಹಾಗೂ ಶಿಕ್ಷಕರ ಸಮಸ್ಯೆಗಳ ಜೊತೆ ರಾಜ್ಯ ಸರ್ಕಾರಿ ನೌಕರರ ಸಂಘವು ಸದಾ ಇರುತ್ತದೆ .

ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರನ್ನೊರತುಪಡಿಸಿ ಉಳಿದಂತೆ ಸಂಚಾರಕ್ಕೆ ಅನಾನುಕೂಲವಿರುವ ಮಹಿಳಾ ಶಿಕ್ಷಕಿಯರು 21-06-2021ರವರಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಮಾರ್ಪಾಡು ಆದೇಶ ಹೊರಡಿಸಲು ಆಯುಕ್ತರಿಗೆ ಮಾನ್ಯ ಸಚಿವರಿಂದ ಸೂಚನೆ.

ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರನ್ನೊರತುಪಡಿಸಿ ಉಳಿದಂತೆ ಸಂಚಾರಕ್ಕೆ ಅನಾನುಕೂಲವಿರುವ ಮಹಿಳಾ ಶಿಕ್ಷಕಿಯರು 21-06-2021ರವರಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಮಾರ್ಪಾಡು ಆದೇಶ ಹೊರಡಿಸಲು ಆಯುಕ್ತರಿಗೆ ಮಾನ್ಯ ಸಚಿವರಿಂದ  ಸೂಚನೆ. ಸಂಚಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಸಡಿಲಗೊಳ್ಳದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿಲ್ಲ . ಜೂ . 21 ರಿಂದ ಲಾಕ್ಡೌನ್ ಸಡಿಲಗೊಂಡು ಬಸ್ ಆರಂಭವಾಗುವ ಸಾಧ್ಯತೆಗಳಿರುವುದರಿಂದ ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರನ್ನೊರತುಪಡಿಸಿ ಉಳಿದಂತೆ ಸಂಚಾರಕ್ಕೆ ಅನಾನುಕೂಲವಿರುವ ಮಹಿಳಾ ಶಿಕ್ಷಕಿಯರು 21-06-2021ರವರಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸುವುದರೊಂದಿಗೆ ಶಾಲೆಗಳಿಗೆ ಶಿಕ್ಷಕರ ಹಾಜರಾತಿಗೆ ಸಂಬಂಧಿಸಿದಂತೆ ದಿನಾಂಕ 14-06-2021ರಂದು ಹೊರಡಿಸಿರುವ ಆದೇಶಕ್ಕೆ ತಿದ್ದುಪಡಿ ಮಾಡಬೇಕೆಂದು  ಮಾನ್ಯ  ಆಯುಕ್ತರಿಗೆ ಮಾನ್ಯ ಸಚಿವರು ತಮ್ಮ ಟಿಪ್ಪಣಿಯಲ್ಲಿ ಸೂಚಿಸಿರುತ್ತಾರೆ.

ಕೋವಿಡ್ -19 ಕಾರ್ಯದಲ್ಲಿ ನಿಯೋಜನೆಗೊಂಡು ರಜಾರಹಿತವಾಗಿ ಕಾರ್ಯ ನಿರ್ವಹಿಸುರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕ / ಶಿಕ್ಷಕಿಯರಿಗೆ ಗಳಿಕೆ ರಜೆ ಮಂಜೂರು ಮಾಡುವಂತೆ ಶ್ರೀ ಸಿ.ಎಸ್. ಷಡಾಕ್ಷರಿ‌ ಮನವಿ.

ಕೋವಿಡ್ -19 ಕಾರ್ಯದಲ್ಲಿ ನಿಯೋಜನೆಗೊಂಡು ರಜಾರಹಿತವಾಗಿ ಕಾರ್ಯ ನಿರ್ವಹಿಸುರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕ / ಶಿಕ್ಷಕಿಯರಿಗೆ ಗಳಿಕೆ ರಜೆ ಮಂಜೂರು ಮಾಡುವ ಬಗ್ಗೆ ಮಾನ್ಯ ಆಯುಕ್ತರಿಗೆ ಮನವಿ. ಕೋವಿಡ್ -19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕಿಯರನ್ನು ನಿಯೋಜಿಸಲಾಗಿದ್ದು , ಈ ವೃಂದದ ಶಿಕ್ಷಕರು ಮನೆ ಮನೆಗೆ ತರಳಿ ಕೋವಿಡ್ ಸೋಂಕಿತರ ಮಾಹಿತಿಗಳನ್ನು ಕಲೆಹಾಕುವ ಕಾರ್ಯವನ್ನು ರಜಾದಿನಗಳಂದು ಸಹ ಅತ್ಯಂದ ಯಶಸ್ವಿಯಾಗಿ ನಿರ್ವಹಿಸಿದ್ದು , ಕೆ.ಸಿ.ಎಸ್.ಆರ್ ನಿಯಮಗಳನ್ವಯ ಗಳಿಕೆರಟೆ ನೀಡುವಂತೆ ಮನವಿ ಮಾಡಿಕೊಂಡಿರುತ್ತಾರೆ .  ಮೇಲಿನ ಅಂಶಗಳ ಹಿನ್ನೆಲೆಯಲ್ಲಿ , ಕೋವಿಡ್ -19 ಕಾರ್ಯದಲ್ಲಿ ನಿಯೋಜನೆಗೊಂಡು ರಜಾರಹಿತವಾಗಿ ಕಾರ್ಯ ನಿರ್ವಹಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕ / ಶಿಕ್ಷಕಿಯರಿಗೆ ಕೆ.ಸಿ.ಎಸ್.ಆರ್ . ನಿಯಮ -112 ರನ್ವಯ ಗಳಿಕೆರಜೆ ಮಂಜೂರು ಮಾಡುವ ಸಂಬಂಧ ಕ್ರಮವಹಿಸಲು ತಮ್ಮಲ್ಲಿ ಕೋರಿ ಮನವಿ ಸಲ್ಲಿಸಲಾಗಿದೆ.

ಬಸ್ ಸಂಚಾರ ಆರಂಭದವರೆಗೆ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ : ನಾಳೆ ಸಿಎಂ ಜೊತೆ ಚರ್ಚೆ, ಶಿಕ್ಷಕರ ನೆರವಿಗೆ ನಿಂತ ಶ್ರೀ ಸಿ.ಎಸ್. ಷಡಾಕ್ಷರಿ.

ಬಸ್ ಸಂಚಾರ ಆರಂಭದವರೆಗೆ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ : ನಾಳೆ ಸಿಎಂ ಜೊತೆ ಚರ್ಚೆ, ಶಿಕ್ಷಕರ ನೆರವಿಗೆ ನಿಂತ ಶ್ರೀ ಸಿ.ಎಸ್. ಷಡಾಕ್ಷರಿ. ಬೆಂಗಳೂರು :  ರಾಜ್ಯದಲ್ಲಿ ಶಿಕ್ಷಕರನ್ನು ಜೂನ್ 15ರಿಂದ ಶಾಲೆಗೆ ಬರುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿರುವುದು ಸರಿಯಲ್ಲ. ಬಸ್ ಸಂಚಾರವಿಲ್ಲದೇ ಶಿಕ್ಷಕರು ಶಾಲೆಗೆ ತೆರಳಲು ಸಾಧ್ಯವೇ ಇಲ್ಲ. ಹೀಗಾಗಿ ಬಸ್ ಆರಂಭವಾಗುವವರೆಗೆ ವರ್ಕ್ ಫ್ರಂ ಹೋಮ್ ಗೆ ಆದೇಶ ಹೊರಡಿಸಬೇಕು. ಈ ಕುರಿತು ನಾಳೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಶಿಕ್ಷಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ತಿಳಿಸಿದ್ದಾರೆ. ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿ ಮಾಡಿದ್ದರೂ ಕೂಡ ಬಸ್ ಸೌಕರ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಶಿಕ್ಷಕರು ಶಾಲೆಗೆ ತೆರಳಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಿದೆ. ಇನ್ನು ಹಲವು ಶಿಕ್ಷಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇಂತಹ ಶಿಕ್ಷಕರು ಬಸ್ ಸೌಕರ್ಯವಿಲ್ಲದೇ ಶಾಲೆಗೆ ಹಾಜರಾಗಲು ಸಾಧ್ಯವಿಲ್ಲ. ಸಮಸ್ಯೆಯ ಅರಿವಿದ್ದರೂ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುವುದು ಸರಿಯಲ್ಲ. ಶಿಕ್ಷಕರ ಸಮಸ್ಯೆಯ ಕುರಿತು ಸಚಿವ ಸುರೇಶ್ ಕುಮಾರ್ ಅವರ ಜೊತೆಗೆ ಚರ್ಚಿಸಿದ್ದು, ಆಯುಕ್ತರ ಜೊತೆಗೆ ಚರ್ಚಿಸಿ ಸೂಕ್ತ ಕ್ರ...

ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ಬಗ್ಗೆ ಮಾನ್ಯ ಸಚಿವರಿಗೆ ಮನವಿ - ಶ್ರೀ ಸಿ.ಎಸ್.‌ಷಡಾಕ್ಷರಿ.

ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ಬಗ್ಗೆ ಮಾನ್ಯ ಸಚಿವರಿಗೆ ಮನವಿ - ಶ್ರೀ ಸಿ.ಎಸ್.‌ಷಡಾಕ್ಷರಿ. 2021-22ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ದಿನಾಂಕ : 15-06-2021 ರಿಂದ ಪ್ರಾರಂಭಿಸಲು ಯೋಜಿಸಲಾಗಿದ್ದು , ಕೋವಿಡ್ 19 ರ ಎರಡನೆ ಅಲೆಯು ವ್ಯಾಪಕವಾಗಿರುವ ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ ಭೌತಿಕವಾಗಿ ಶಾಲೆಯನ್ನು ಪ್ರಾರಂಭಿಸುವುದರಿಂದ ಈ ಕೆಳಕಂಡ ಸಮಸ್ಯೆಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎದುರಿಸಬೇಕಾಗಿರುತ್ತದೆ .  1. ರಾಜ್ಯ ಸರ್ಕಾರವು 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಮುಂದುವರೆಸಿದ್ದು , ಶಿಕ್ಷಕರು ಮತ್ತು ಮಕ್ಕಳು ಶಾಲೆಗೆ ಹಾಜರಾಗಲು ಸಂಚಾರದ ವ್ಯವಸ್ಥೆ ಇಲ್ಲದೆ ತುಂಬಾ ಎದುರಿಸಬೇಕಾಗುತ್ತದೆ .  2. ಶಾಲಾ ಕೊಠಡಿಗಳಲ್ಲಿ ಶಿಕ್ಷಕರು ಮತ್ತು ಮಕ್ಕಳು ಒಟ್ಟಾಗಿ ಸೇರುವುದರಿಂದ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ .  3. ತಜ್ಞರ ಸಮಿತಿ ತಿಳಿಸಿರುವಂತೆ ಕೋವಿಡ್ 19 ರ 3 ನೇ ಅಲೆ ಬರುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಭೌತಿಕವಾಗಿ ಶಾಲೆಗಳನ್ನು ಪ್ರಾರಂಭಿಸುವುದರಿಂದ ಶಿಕ್ಷಕರು ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ .  4. ಶಿಕ್ಷಕರು ಹಾಗೂ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆಯನ್ನು ಹಾಕಿ...

KGID ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ನೌಕರರು ನೆರವಾಗಿ ಅಂತರ್ಜಾಲ ಮೂಲಕ ಹೊಸದಾಗಿ ಪಾಲಿಸಿ ಮಾಡುವ ಬಗ್ಗೆ

 KGID ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ನೌಕರರು ನೆರವಾಗಿ ಅಂತರ್ಜಾಲ ಮೂಲಕ ಹೊಸದಾಗಿ ಪಾಲಿಸಿ ಮಾಡುವ ಬಗ್ಗೆ https://youtu.be/UxN2t_-XsJw

7 ನೇ ಅಂತರಾಷ್ಟ್ರೀಯ ಅಂಗವಾಗಿ ಆಯುಷ್ ಇಲಾಖೆಯ ವತಿಯಿಂದ ಆನ್‌ಲೈನ್ ಮುಖಾಂತರ ಎಲ್ಲಾ ಸರ್ಕಾರಿ ಅಧಿಕಾರಿಗಳು / ನೌಕರರಿಗಾಗಿ‌ ಮುದ್ರಿತ ವಿಡಿಯೋಗಳು.

7 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಕುರಿತು .  7 ನೇ ಅಂತರಾಷ್ಟ್ರೀಯ ಅಂಗವಾಗಿ ಆಯುಷ್ ಇಲಾಖೆಯ ವತಿಯಿಂದ Common Yoga Protocol ಪುಕಾರ ಯೋಗ ಕಾರ್ಯಕ್ರಮವನ್ನು ಆನ್‌ಲೈನ್ ಮುಖಾಂತರ ಏರ್ಪಡಿಸಲಾಗಿರುತ್ತದೆ . ಇದರ ಸದುಪಯೋಗವನ್ನು ಪಡೆದುಕೊಳ್ಳಲು ಎಲ್ಲಾ ಸರ್ಕಾರಿ ಅಧಿಕಾರಿಗಳು / ನೌಕರರ ಗಮನಕ್ಕೆ ತರಲು ಈ ಮೂಲಕ ಕೋರಿದ . 1. ಮುದ್ರಿತ ವಿಡಿಯೋ ಕಾರ್ಯಕ್ರಮವನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಿ ಯೋಗಾಭ್ಯಾಸ ಮಾಡಬಹುದು. There are recorded youtube videos links which can be used to practice common yoga protocol  at your convenient time.  Yoga for Pre-Covid-19 https://youtu.be/nf5szPPp-yM https://youtu.be/RX9C329WmBU Zoom meeting app links Codeproofs Private Limited is inviting you to a scheduled Zoom meeting. Topic: All days Yoga class  Time: 17:00 to 17:50 Mumbai, Indian Standard Time Join Zoom Meeting https://zoom.us/j/99974722581?pwd=RFIrS0c5bS91bytsZnd3NVZVd1dUUT09 Meeting ID: 999 7472 2581 Passcode: 526423 One tap mobile +13462487799,,99974722581#,,,,*526423# US (Houston) +16465588656,,99974722581#,,,,*526423#...

ಕೇಂದ್ರ ಸರ್ಕಾರದ ಮಾದರಿಯಲ್ಲಿ ಕೋವಿಡ್ -19 ಸೋಂಕಿಗೆ ಸಿಲುಕಿ ಹೋಂ ಐಸೋಲೇಷನ್ / ಕ್ವಾರಂಟೈನ್ / ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಗಳನ್ನು ಮಂಜೂರು ಮಾಡುವ ಬಗ್ಗೆ ಮಾನ್ಯ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ - ಶ್ರೀ ಸಿ.ಎಸ್.‌ಷಡಾಕ್ಷರಿ.

ಕೇಂದ್ರ ಸರ್ಕಾರದ ಮಾದರಿಯಲ್ಲಿ ಕೋವಿಡ್ -19 ಸೋಂಕಿಗೆ ಸಿಲುಕಿ ಹೋಂ ಐಸೋಲೇಷನ್ / ಕ್ವಾರಂಟೈನ್ / ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಗಳನ್ನು ಮಂಜೂರು ಮಾಡುವ ಬಗ್ಗೆ  ಮಾನ್ಯ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ - ಶ್ರೀ ಸಿ.ಎಸ್.‌ಷಡಾಕ್ಷರಿ. ಕೇಂದ್ರ ಸರ್ಕಾರವು ತನ್ನ ನೌಕರರಿಂದ ಸ್ವೀಕರಿಸಲ್ಪಟ್ಟ ಮನವಿಗಳನ್ನು ಪರಿಗಣಿಸಿ ಉಲ್ಲೇಖಿತ ಆದೇಶದನ್ವಯ ಕೋವಿಡ್ -19 ಸೋಂಕಿಗೆ ಸಿಲುಕಿ ಹೋಂ ಐಸೋಲೇಷನ್ / ಕ್ವಾರಂಟೈನ್ / ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಗಳನ್ನು ಮಂಜೂರು ಮಾಡಿರುತ್ತದೆ . ( ಪ್ರತಿ ಲಗತ್ತಿಸಿದೆ ) ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿ ಮತ್ತು ನೌಕರರು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು , ಪ್ರಸ್ತುತ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಸೋಂಕಿಗೆ ಒಳಗಾಗುತ್ತಿದ್ದು , ಇದೇ ಪರಿಸ್ಥಿತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೂ ಸಹ ಉದ್ಭವಿಸಿರುವುದನ್ನು ಗಮನಿಸಲಾಗಿದೆ . ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಹ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವುದು ಸಾಮಾಜಿಕ ತತ್ವದ ಅಡಿಯಲ್ಲಿ ಅವಶ್ಯವಾಗಿರುತ್ತದೆ . ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ...

ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ

ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ ದಿನದ ಪ್ರಶ್ನೆ ನಾನು 2005 ರಲ್ಲಿ ಕೆಪಿಎಸ್‌ಸಿ ಮೂಲಕ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಯಾಗಿದ್ದೆ . ಈ ಮಧ್ಯೆ ಕೌಟುಂಬಿಕ ಜಗಳದಿಂದ ನನ್ನ ಮೇಲೆ ಎಫ್‌ಐಆರ್ ಆಗಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು . 2007 ರಲ್ಲಿ ತೀರ್ಪು ಬಂದಿದ್ದು ಅದರಲ್ಲಿ ಖುಲಾಸೆಗೊಂಡಿದ್ದೇನೆ . ಆಯ್ಕೆ ಪಟ್ಟಿಯಲ್ಲಿ 20 ಅಭ್ಯರ್ಥಿಗಳಲ್ಲಿ 10 ನೆಯವನಾದ ನನ್ನನ್ನು ಕೈಬಿಟ್ಟು 2006 ರ ಫೆಬ್ರವರಿಯಲ್ಲಿ ನೇಮಕ ಪ್ರಾಧಿಕಾರಿಯವರು ನೇಮಕಾದೇಶವನ್ನು ನೀಡಿದರು . 2007 ರಲ್ಲಿ ನೇಮಕಾತಿ ಆದೇಶ ನೀಡಿದ್ದಾರೆ . ನೂತನ ಪಿಂಚಣಿ ಯೋಜನೆಗೆ ನನ್ನನ್ನುಸೇರಿಸಿದ್ದಾರೆ . ನನ್ನ ಆಯ್ಕೆ ಪಟ್ಟಿಯಲ್ಲಿ ಕಿರಿಯರು ಹಳೆ ಪಿಂಚಣಿ ನಿಯಮದಡಿಯಲ್ಲಿರುವುದರಿಂದ ನಾನು ಅದಕ್ಕೆ ಅರ್ಹನಲ್ಲವೇ ? | ವಿಜಯಕುಮಾರ ವಿಜಯಪುರ  ದಿನಾಂಕ 17.2.2021 ರ ಸರ್ಕಾರಿ ಆದೇಶ ಸಂಖ್ಯೆ ಆಇ 39 ಪಿಇಎನ್ 2020 ರ ಮೇರೆಗೆ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕಿರಿಯರಾಗಿರುವವರು ನೇಮಕವಾಗಿ , ಅದೇ ನೇಮಕಾತಿಯಲ್ಲಿ ಹಿರಿಯನಾದ ಅಭ್ಯರ್ಥಿಯು ಈ ದಿನಾಂಕದ ನಂತರ ನೇಮಕವಾದರೆ . ಅವನನ್ನು ಹಳೆ ಪಿಂಚಣಿ ಯೋಜನೆಗೆ ಒಳಪಡಿಸಲು ಸೂಚಿಸಿದೆ . ಆದ್ದರಿಂದ ನೀವು ಈ ಆದೇಶದಂತೆ ಮನವಿ ಸಲ್ಲಿಸಬೇಕು . KCSR Book Kannada offer price @₹540/- ಕೃಪೆ : ವಿಜಯವಾಣಿ, ಕನ್ನಡ ದಿನಪತ್...

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers