Skip to main content

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರಿಂದ ಮಂಡ್ಯ ಜಿಲ್ಲೆಯಲ್ಲಿ ನಡೆದ ಪತ್ರಿಕಾ ಗೋಷ್ಠಿ.

ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರಿಂದ ಮಂಡ್ಯ ಜಿಲ್ಲೆಯಲ್ಲಿ ನಡೆದ ಪತ್ರಿಕಾ ಗೋಷ್ಠಿ.


 ದಿನಾಂಕ: 05-11-2020ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಮಂಡ್ಯ ಜಿಲ್ಲೆಯಲ್ಲಿ ನಡೆದ ಪತ್ರಿಕಗೋಷ್ಠಿಯಲ್ಲಿ ಸರ್ಕಾರಿ ನೌಕರರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಗದೀಶ ಗೌಡಪ್ಪ ಪಾಟೀಲ್, ಗೌರವಾಧ್ಯಕ್ಷರಾದ ಶ್ರೀ ಶಿವರುದ್ರಯ್ಯ ವಿ.ವಿ., ಖಜಾಂಚಿಗಳಾದ ಶ್ರೀ ಆರ್. ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾದ ಶ್ರೀ ಎಂ.ವಿ. ರುದ್ರಪ್ಪ ಮತ್ತು ಮಂಡ್ಯ ಜಿಲ್ಲಾ ಶಾಖೆ ಅಧ್ಯಕ್ಷರಾದ ಶ್ರೀ ಶಂಭುಗೌಡರವರು ಮತ್ತು ಜಿಲ್ಲೆಯ ಪದಾಧಿಕಾರಿಗಳು ಈ ಸುದ್ದಿಗೊಷ್ಠಿಯಲ್ಲಿ ಹಾಜರಿದ್ದರು.



ಸಂಘದ ಮುಂದಿರುವ ಪ್ರಮುಖ ಬೇಡಿಕೆಗಳು

  • ರಾಜ್ಯ ಸರ್ಕಾರವು ದಿ: 01.04.2006 ರಿಂದ ಅನ್ವಯಿಸುವಂತೆ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಪದ್ದತಿಯನ್ನು ಕಡ್ಡಾಯಗೊಳಿಸಿದ್ದು, ಇದರಿಂದಾಗಿ ಸರ್ಕಾರಿ ನೌಕರರು ನಿಶ್ಚಿತ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಕಾರ್ಯಾಂಗದ ವ್ಯವಸ್ಥೆಯಲ್ಲಿ ಸುಮಾರು 2,28,000.00 ಜನ ಎನ್‍ಪಿಎಸ್ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಎನ್.ಪಿ.ಎಸ್ ಪದ್ಧತಿ ಜಾರಿಯಿಂದಾಗಿಇವರ ಬದುಕು ಸಂಕಷ್ಟದಲ್ಲಿರುತ್ತದೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಶ್ರೀ ಸಾಮಾನ್ಯನಿಗೆ ತಲುಪಿಸುವಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ರಾಜ್ಯಸರ್ಕಾರದ ಒಂದೇ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಪಿಂಚಣಿಯಲ್ಲಿ ತಾರತಮ್ಯ ಮಾಡುವುದು ಅವೈಜ್ಞಾನಿಕಕ್ರಮವಾಗಿದ್ದು, ಈ ಯೋಜನೆಯನ್ನು ರದ್ದುಪಡಿಸಿ ಈ ಹಿಂದಿನಂತೆಯೇ ಹಳೆ ಪಿಂಚಣಿ ಪದ್ದಿತಿಯನ್ನೇ ಜಾರಿಗೆ ತರುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸುತ್ತದೆ.

  • ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲಿ 7ನೇ ವೇತನ ಆಯೋಗದ ವರದಿಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಸರಿಸಮಾನ ವೇತನವನ್ನು ನೀಡುವುದು.
  • ರಾಜ್ಯದ ಸರ್ಕಾರಿ ನೌಕರರು ಒಳ-ಹೊರ ರೋಗಿಯಾಗಿ ಸಂಪೂರ್ಣ ನಗದುರಹಿತ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಅಡಿಯಲ್ಲಿ ಎಲ್ಲಾ ವಿಧದ ಔಷಧಿಗಳು, ಮೆಡಿಕಲ್ ಇಮೇಜಿಂಗ್ ಸ್ಕ್ಯಾನಿಂಗ್, ಲ್ಯಾಬೊರೇಟರಿ ಪರೀಕ್ಷೆಗಳು, ಉಚಿತವಾಗಿ ದೊರೆಯಲಿದೆ. ಈ ಯೋಜನೆಯಲ್ಲಿ ರೋಗಿಗಳಿಗೆ ವಾಹನ ಸೌಲಭ್ಯ ಹಾಗೂ ಅವಕಾಶ ಕಲ್ಪಿಸಲಾಗಿದೆ.
  • ನೌಕರರಎಲ್ಲಾ ಸೇವಾ ಸವಲತ್ತುಗಳನ್ನು ಆನ್‍ಲೈನ್ ಮೂಲಕ ಒದಗಿಸಲು ಸಾಫ್ಟ್‍ವೇರ್ ಸಿದ್ಧಪಡಿಸಲಾಗುತ್ತಿದ್ದು, ಇದರಿಂದಾಗಿ ಯಾವುದೇ ನೌಕರರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದರ ಜೊತೆಗೆ ಮುಂಬಡ್ತಿ, ಕಾರ್ಯನಿರ್ವಹಣಾ ವರದಿ, ಕಾಯಂಸೇವಾ ಪೂರ್ಣಾವದಿ ಘೋಷಣೆ, ಪಾಸ್‍ಪೋರ್ಟ್, ಪ್ರಥಮ ವೇತನ ಡ್ರಾ ಮಾಡಲು ಅನುಮತಿ, ವೈದ್ಯಕೀಯ ವೆಚ್ಚ ಮರುಪಾವತಿ, ಎಲ್.ಟಿ.ಸಿ-ಹೆಚ್.ಟಿ.ಸಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಸಕಾಲದಲ್ಲಿ ಪಡೆಯಬಹುದಾಗಿದೆ.
  • ಶಿಕ್ಷಕ ದಿನಾಚರಣೆ ಮಾದರಿಯಲ್ಲಿ ಪ್ರತಿವರ್ಷ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಆಚರಣೆಗೆ ಈಗಾಗಲೇ ಸಂಘವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರದಿಂದ ಆದೇಶ ಹೊರಡಿಸಲು ಪ್ರಯತ್ನಿಸಲಾಗುತ್ತಿದೆ.
  • ಶಿಕ್ಷಕರಿಗೆ ಕೇಂದ್ರ ಸರ್ಕಾರ ಮಾದರಿಯ ಸರಿಸಮಾನ ವೇತನ, ವೃಂದ ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ಮಾಡುವ ಮೂಲಕ ವರ್ಷಕ್ಕೆ 2 ಬಾರಿ ಮುಂಬಡಿ,್ತ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಹಾಗೂ ಶಿಕ್ಷಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
  • ಪದೋನ್ನತಿ ನೀಡುವ ಸಂದರ್ಭದಲ್ಲಿ ನೇರ ನೇಮಕಾತಿ ಹಾಗೂ ಮುಂಬಡ್ತಿ ಹೊಂದಿದ ನೌಕರರ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸಲು ಪೋಸ್ಟ್-ಬೇಸ್ಡ್ ಜ್ಯೇಷ್ಠತಾ ಮಾನದಂಡವನ್ನು ಅನುಸರಿಸಲು ಕ್ರಮ ಕೈಗೊಳ್ಳಲಾಗುವುದು.

ಈಗಾಗಲೇ ಸಂಘದ ಪ್ರಯತ್ನದಿಂದ ಜಾರಿಗೊಂಡಿರುವ ಕಾರ್ಯಗಳು


1. ಸುಮಾರು 10 ವರ್ಷಗಳ ಹಿಂದೆ ನಿಗದಿಪಡಿಸಿದ್ದ ಶವಸಂಸ್ಕಾರ ವೆಚ್ಚದ ಮೊತ್ತವನ್ನು ರೂ. 5000/- ಗಳಿಂದ ರೂ. 15000/-ಕ್ಕೆ ಹೆಚ್ಚಳ.
2. ಅನಾಮಧೇಯ ಪತ್ರಗಳಿಂದ ಸರ್ಕಾರಿ ನೌಕರರು ಅನುಭವಿಸುತ್ತಿದ್ದ ಮಾನಸಿಕ ಕಿರುಕುಳವನ್ನು ತಪ್ಪಿಸಲು ಇಂತಹ ಪತ್ರಗಳಿಗೆ ಕಡಿವಾಣ ಹಾಕಲು ಸರ್ಕಾರಿ ಆದೇಶ.
3. ನಾಲ್ಕನೇ ಶನಿವಾರದ ರಜೆ ಅನ್ವಯಿಸದ ನೌಕರರಿಗೆ ಈ ಹಿಂದಿನಂತೆ 15 ದಿನಗಳ ಸಾಂದರ್ಭಿಕ ರಜೆ ಮುಂದುವರೆಸಲು ಸರ್ಕಾರದ ಆದೇಶ.
4. ‘ಶಿಕ್ಷಕ ಸ್ನೇಹಿ’ ವರ್ಗಾವಣೆ ಕಾಯ್ದೆಯನ್ನು ರೂಪಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಶಿಕ್ಷಣ ಸಚಿವರೊಂದಿಗೆ ನಿರ್ಣಾಯಕ ಸಭೆ ನಡೆಸಿರುವುದು.
5. ಕೆ.ಜಿ.ಐ.ಡಿ. ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವಂತೆ ಸರ್ಕಾರದ ಮೇಲೆ ನಿರಂತರ ಒತ್ತಾಯ ತಂದ ಪರಿಣಾಮ, ಇಲಾಖೆಯ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದೆ. 
6. ಎರಡು ವರ್ಷಗಳ ಅವಧಿಗೆ ಕೆ.ಜಿ.ಐ.ಡಿ. ಪಾಲಿಸಿಗಳ ಮೇಲೆ ಶೇಕಡಾ 85 ರಷ್ಟು ಬೋನಸ್ ಮಂಜೂರಾತಿ ಮಾಡಿರುವುದು.
7. ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ರಿಯಾಯಿತಿ ದರದಲ್ಲಿ ಗೃಹಬಳಕೆ ವಸ್ತುಗಳನ್ನು ಪೂರೈಸಲು ಕ್ಯಾಂಟೀನ್‍ಗಳ ಪ್ರಾರಂಭ.
8. ಸಂಘದ ಬೈಲಾ ನಿಯಮಗಳ ಆಮೂಲಾಗ್ರ ತಿದ್ದುಪಡಿಗಾಗಿ ಉಪ ಸಮಿತಿ ರಚನೆ-ಸರ್ವಸದಸ್ಯರ ವಿಶೇಷ ಮಹಾಸಭೆಯಲ್ಲಿ ಅನುಮೋದನೆ-ಅತಿ ಶೀಘ್ರದಲ್ಲೇ ಪರಿಷ್ಕøತ ಬೈಲಾ ನಿಯಮಗಳು ಜಾರಿಯಾಗಲಿದೆ.
9. ವಿವಿಧ ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುಂಬಡ್ತಿ ಪ್ರಕ್ರಿಯೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ ಇದ್ದ ಗೊಂದಲಗಳನ್ನು ಆಯಾ ಇಲಾಖಾ ಸಚಿವರು ಹಾಗೂ ಅಧಿಕಾರಿಗಳೊಂದಿಗೆ  ಚರ್ಚಿಸಿ, ಸಾವಿರಾರು ಸರ್ಕಾರಿ ನೌಕರರಿಗೆ ಪದೋನ್ನತಿ  ಸೌಲಭ್ಯವನ್ನು ಕಲ್ಪಿಸಲಾಗಿದೆ.
10. ಜಿಲ್ಲಾ ಮಟ್ಟದಲ್ಲಿ ಉದ್ಬವಿಸಬಹುದಾದ ಅನೇಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ‘ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ’ ರಚನೆಯಾಗಿದ್ದು, ಇದರಿಂದ ಜಿಲ್ಲಾ ಮಟ್ಟದ ಸಮಸ್ಯೆಗಳು ಸ್ಥಳೀಯವಾಗಿಯೇ ಬಗೆಹರಿಯಲಿವೆ.
11. ದೂರದ ಸ್ಥಳದಿಂದ ಬೆಂಗಳೂರಿಗೆ ಆಗಮಿಸುವ ಸರ್ಕಾರಿ ನೌಕರರು ತಂಗಲು ಅನುಕೂಲವಾಗುವಂತೆ ಕೊಠಡಿ ಹಾಗೂ ಕೇಂದ್ರ ಸಂಘದ ಕಛೇರಿಯನ್ನು ಸುಸಜ್ಜಿತಗೊಳಿಸಲು ಸರ್ಕಾರವು ರೂ. 8.6 ಕೋಟಿಗಳ ಅನುದಾನವನ್ನು ಮಂಜೂರು ಮಾಡಿದ್ದು, ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿರುತ್ತವೆ.
12. ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಸರ್ಕಾರದಿಂದ ನೀಡಲಾಗುತ್ತಿದ್ದ ಅನುದಾನ ಮೊತ್ತವನ್ನು ರೂ. 50.00 ಲಕ್ಷಗಳಿಂದ ರೂ. 1.50 ಕೋಟಿಗಳಿಗೆ ಹೆಚ್ಚಳ.
13. ಪ್ರಪ್ರಥಮ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
14. ಸರ್ಕಾರಿ ಕರ್ತವ್ಯನಿರತ ತಹಶೀಲ್ದಾರ್ ಚಂದ್ರಮೌಳೇಶ್ವರರವರ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಸರ್ಕಾರದಿಂದಲೂ ರೂ. 25.00 ಲಕ್ಷಗಳ ಪರಿಹಾರ ಘೋಷಣೆ.
15. ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಮತ್ತು ಸೀಲ್‍ಡೌನ್ ಪ್ರದೇಶಗಳಲ್ಲಿ ಸಿಲುಕುವ ಹಾಗೂ ಹೋಂ ಕೋರಂಟೈನ್‍ಗೆ ಒಳಪಡುವ ಸರ್ಕಾರಿ ನೌಕರರಿಗೆ ಆದೇಶ ಸಂಖ್ಯೆ:ಎಫ್‍ಡಿ 4(ಇ) ಎಸ್‍ಆರ್‍ಎಸ್ 2020, ದಿನಾಂಕ 22-7-2020ರಂತೆ  ‘ವಿಶೇಷ ಸಾಂದರ್ಭಿಕರಜೆ’ ಮಂಜೂರು.
16. ಕೋವಿಡ್-19 ಕರ್ತವ್ಯನಿರತ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ನಿಗದಿಪಡಿಸಿರುವ ವಿಮಾ ಪರಿಹಾರ ಮೊತ್ತವನ್ನು ರಾಜ್ಯದ ಯಾವುದೇ ಇಲಾಖೆಗಳ ಯಾವುದೇ ವೃಂದದ ಅಧಿಕಾರಿ/ನೌಕರರು ಸೋಂಕಿಗೆ ಸಿಲುಕಿ ಮೃತರಾದ ಸಂದರ್ಭದಲ್ಲಿ ವಿಮಾ ಪರಿಹಾರ ಮೊತ್ತವನ್ನು ಮಂಜೂರು ಮಾಡುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಆದೇಶ ಸಂಖ್ಯೆ:ಆಇ 190 ವೆಚ್ಚ-2/2020, ದಿ:7-8-2020ರನ್ವಯ ರೂ. 30.00 ಲಕ್ಷಗಳ ವಿಮಾ ಪರಿಹಾರ ಮೊತ್ತ ಮಂಜೂರು.
17. ಕಿಡ್ನಿ ವೈಪಲ್ಯಕ್ಕೆ ತುತ್ತಾಗಿ ಡಯಾಲಿಸಿಸ್‍ಗೆ ಒಳಪಡುವ ರಾಜ್ಯ ಸರ್ಕಾರಿ ನೌಕರರು; ಡಯಾಲಿಸಿಸ್ ಪಡೆಯುವ ದಿನದಂದು, ಡಯಾಲಿಸಿಸ್ ಪಡೆದಿರುವ ಬಗ್ಗೆ ಅಧಿಕೃತ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ  ವಿಶೇಷ ಸಾಂದರ್ಭಿಕ ರಜೆಯನ್ನು ಪಡೆಯಲು ಸಂಖ್ಯೆ: ಎಫ್‍ಡಿ 5(ಇ) ಎಸ್‍ಆರ್‍ಎಸ್ 2020, ದಿ:12-8-2020 ರಂತೆ ಆದೇಶ ಹೊರಡಿಸಿರುವುದು.
18. ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಕಿಮೋಥೆರಫಿ ಹಾಗೂ ರೇಡಿಯೇಷನ್‍ಗೆ ಒಳಪಡುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ಆದೇಶ ಹೊರಬೀಳಲಿದೆ.
19. ರಾಜ್ಯಾದ್ಯಂತ ಸಂಘದ ಪದಾಧಿಕಾರಿಗಳು ಹಾಗೂ ನೌಕರರೊಂದಿಗೆ ಚರ್ಚೆ-ಸಂವಾದ ಮಾಡುವ ಮೂಲಕ ನೌಕರರ ಜ್ವಲಂತ ಸಮಸ್ಯೆಗಳ ಬಗ್ಗೆ ನೌಕರರ ಭಾವನೆಗಳಿಗೆ ಸ್ಪಂದನೆ.

ಹೆಚ್ಚಿನ  ಮಾಹಿತಿಗಾಗಿ ಸಂಪರ್ಕಿಸಿ
Facebook         Telegram:t.me/ksgeabangalore,      Blogspot.     Website.    WhatsApp      Youtube 
@syedKSGEA



Comments

Post a Comment

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers