ಸರ್ಕಾರಿ ನೌಕರರು ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯ ಮಿತಿಯನ್ನು ನಿರ್ಬಂಧಿಸುವ ಸರ್ಕಾರಿ ಆದೇಶ ಬಗ್ಗೆ.
ಸರ್ಕಾರಿ ನೌಕರರು ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯ ಮಿತಿಯನ್ನು ನಿರ್ಬಂಧಿಸುವ ಸರ್ಕಾರಿ ಆದೇಶ ಬಗ್ಗೆ.
ಸರ್ಕಾರದ ಆದೇಶ ಸಂ. ಆಇ 16 ಎಸ್ ಆರ್ ಎ 89 ದಿನಾಂಕ:-09-03-1989ರ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 15 ದಿವಸಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಆದೇಶಿಸಲಾಗಿತ್ತು, ನಂತರ, ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 02 ಹೆಚ್ ಹೆಚ್ ಎಲ್ 2019, ದಿನಾಂಕ: 13-6-2019 ರ ಆದೇಶದಲ್ಲಿ 15 ದಿವಸಗಳ ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಿ ಆದೇಶಿಸಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ಅನುಬಂಧ-ಬಿ ಯ ನಿಯಮ (I) ರನ್ವಯ 15 ದಿವಸಗಳ ಸಾಂದರ್ಭಿಕ ರಜೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಒಂದು ಬಾರಿಗೆ ಪಡೆಯಬುದಾದ ಗರಿಷ್ಠ ಸಾಂದರ್ಭಿಕ ರಜೆಯ ಮಿತಿಯನ್ನು 07 ದಿನಗಳಿಗೆ ಸೀಮಿತಗೊಳಿಸಿ, ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿದಾಗ ಈ ಅವಧಿಯನ್ನು 10 ದಿವಸಗಳಿಗೆ ನಿರ್ಭಂದಿಸಿ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 02 ಹೆಚ್ ಹೆಚ್ ಎಲ್ 2019, ದಿನಾಂಕ: 13-6-2019 ರ ಆದೇಶದಲ್ಲಿ 15 ದಿವಸಗಳ ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಲಾದ ಆದೇಶದಲ್ಲಿ ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಿರುವ ಹಿನ್ನೆಲೆಯಲ್ಲಿ ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯನ್ನು 05 ದಿನಗಳೆಂದು ನಿರ್ಬಂಧಿಸಲು ಹಾಗೂ ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿದಾಗ ಈ ಅವಧಿಯನ್ನು 08 ದಿವಸಗಳಿಗೆ ನಿರ್ಬಂದಿಸಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದ್ದು, ಆದೇಶ ಸಂಖ್ಯೆ: ಆಇ 03 ಸನಿತಿ 2020 (ಇ) ಬೆಂಗಳೂರು, ದಿನಾಂಕ: 15-10-2020ಅನ್ನು ಆದೇಶಿಸಿದೆ. ಹಾಗೂ ಸಾಂದರ್ಭಿಕ ರಜೆಯ ಅರ್ಹತೆ ಮತ್ತು ಮಂಜೂರಾತಿ ಬಗ್ಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ಅನುಬಂಧ-ಬಿ ರಲ್ಲಿನ ಇತರೆ ಷರತ್ತುಗಳು ಮುಂದುವರೆಯುತ್ತವೆ. ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Facebook Telegram:t.me/ksgeabangalore, Blogspot. Website. WhatsApp Youtube
@syedKSGEA




Comments
Post a Comment