ಕಳೆದೆರಡು ದಶಕಗಳಿಂದ ರಾಜ್ಯ ಸರ್ಕಾರಿ ನೌಕರರ ಪತ್ರಿಕೆ , ರಾಜ್ಯ ಸಮಗ್ರ ಸರ್ಕಾರಿ ನೌಕರರ ಮುಖವಾಣಿಯಾಗಿ ಪ್ರಕಟಗೊಳ್ಳುತ್ತಿದೆ . ಈ ಪತ್ರಿಕೆಯು ನಿಯಮಾನುಸಾರ ನೋಂದಾಯಿತ ಹಾಗೂ ಅಧಿಕೃತವಾಗಿ ಮನ್ನಣೆ ಪಡೆದ ಮಾಸಪತ್ರಿಕೆ ಆಗಿದೆ . ಸರ್ಕಾರದ ಯೋಜನೆಗಳ ಬಗ್ಗೆ ಜನತಾ ಜನಾರ್ದನನಿಗೆ ಮಾಹಿತಿ ನೀಡುವುದರ ಜೊತೆಜೊತೆಗೆ , ರಾಜ್ಯದ ಮೂಲೆಮೂಲೆಯಲ್ಲಿರುವ ನೌಕರರಿಗೂ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾಗಿರುತ್ತದೆ . ಸರ್ಕಾರದ ಸುತ್ತೋಲೆಗಳು , ಆದೇಶಗಳು , ಅಧಿಸೂಚನೆಗಳ ಜೊತೆಗೆ ನೌಕರರಿಗೆ ಅನುಕೂಲ ಆಗುವಂತೆ ವಿಷಯ ತಜ್ಞರಿಂದ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ . ಅಲ್ಲದೇ ನೌಕರರ ವಲಯದ ಕಾರ್ಯಕ್ರಮಗಳು , ಬೇಡಿಕೆಗಳು , ಹೋರಾಟಗಳ ಬಗ್ಗೆ ನಿರಂತರವಾಗಿ ಸುದ್ದಿ ಪ್ರಕಟ ಮಾಡುವ ಮೂಲಕ ಅವರ ಧ್ವನಿಯಾಗಿಯೂ ಕೆಲಸ ಮಾಡುತ್ತಿದೆ . ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಪಶುಪಾಲನೆ ಮತ್ತು ಪಶುಸಂಗೋಪನಾ , ತಾಂತ್ರಿಕ ಶಿಕ್ಷಣ , ಕಾಲೇಜು ಶಿಕ್ಷಣ , ಉದ್ಯೋಗ ಮತ್ತು ತರಬೇತಿ , ಸಾರ್ವಜನಿಕ ಶಿಕ್ಷಣ , ಸಾರ್ವಜನಿಕ ಗ್ರಂಥಾಲಯ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಿಗೂ ಈ ಪತ್ರಿಕೆಯ ಚಂದಾದಾರರಾಗಲು ಸೂಚನೆ ನೀಡಿದ್ದು , ಅದರನ್ವಯ ಕಳೆದ ಹತ್ತು ವರ್ಷಗಳಿಂದ ಚಂದಾದಾರರಾಗಿದ್ದು , ಪತ್ರಿಕೆಯ ಸಾಕ್ಷಿ ಪ್ರಜ್ಞೆಗೆ ಹೆಗ್ಗುರುತಾಗಿದೆ ಚಂದಾದಾರ ರಾಗಲು ಪೂರ್ಣ ಹೆಸರು, ಹುದ್ದೆ, ಇಲಾಖೆ ಅಂಚೆ ವಿಳಾಸವನ್ನ...
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025 ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು. ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...