Skip to main content

Posts

Showing posts from December, 2021

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

2022ನೇ ಸಾಲಿನ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಮಾಡಿಕೊಳ್ಳಲು ಆದೇಶ - ಸರ್ಕಾರಕ್ಕೆ ಧನ್ಯವಾದ ಗಳು ಶ್ರೀ ಸಿ.ಎಸ್. ಷಡಾಕ್ಷರಿ. ರಾಜ್ಯಾಧ್ಯಕ್ಷರು, ಕ.ರಾ.ಸ.ನೌಕರರ ಸಂಘ, ಬೆಂಗಳೂರು.

2022ನೇ ಸಾಲಿನ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಮಾಡಿಕೊಳ್ಳಲು  ಆದೇಶ  ಸಂಘದ ಮನವಿಯಂತೆ ರಾಜ್ಯ ಸರ್ಕಾರಿ ನೌಕರರ 2022ನೇ ಸಾಲಿನ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಮಾಡಿಕೊಳ್ಳುವ  ಆದೇಶ ಹೊರಡಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರಿಗೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದನೆಗಳು.

ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಮಂಜೂರಾತಿಗೆ ಸರ್ಕಾರವನ್ನು ಒತ್ತಾಯಿಸಿ ಪ್ರಥಮ ಹಂತದ ಕಾರ್ಯಕ್ರಮ

  ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಮಂಜೂರಾತಿಗೆ ಸರ್ಕಾರವನ್ನು ಒತ್ತಾಯಿಸಿ ಪ್ರಥಮ ಹಂತದ ಕಾರ್ಯಕ್ರಮ           ದಿನಾಂಕ: 10-10-2021ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಮಹಾಸಭೆಯು ಕೇಂದ್ರ ಸರ್ಕಾರಿ ನೌಕರರು ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳಲ್ಲಿ ಸಮಾನತೆಯನ್ನು ಮೂಡಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಲು ಹಂತ ಹಂತದ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನ ಕೈಗೊಂಡಿದ್ದು, ರಾಜ್ಯ ಪರಿಷತ್ ಮಹಾಸಭೆ ತೀರ್ಮಾನದಂತೆ, ಸಂಘದ ಪ್ರಮುಖ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು 2021ನೇ ಡಿಸೆಂಬರ್ ಅಂತ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ/ತಾಲ್ಲೂಕು/ಯೋಜನಾ ಶಾಖೆಗಳು ಹಾಗೂ ಕೇಂದ್ರ ಸಂಘದ ವತಿಯಿಂದ ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಬೇಡಿಕೆಗಳ ಬಗ್ಗೆ ಸರ್ಕಾರವನ್ನು ಒತ್ತಾಯಿಸಲು ತೀಮಾನಿಸಿ ಈ ನಿಟ್ಟಿನಲ್ಲಿ ಸಂಘವು ಕಾರ್ಯೋನ್ಮುಖವಾಗಿರುತ್ತದೆ. ಬೇಡಿಕೆಗಳು           • ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆಗಳನ್ನು ಮಂಜೂರು ಮಾಡುವುದು.     ...

ಹಬ್ಬದ ಮುಂಗಡ(FA)ರೂ.10,000ಗಳಿಂದ 25,000 ಗಳಿಗೆ ಹೆಚ್ಚಳ - ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರಿಗೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದನೆಗಳು-ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು

ಸಂಘದ ಮನವಿಗೆ ಸ್ಪಂದಿಸಿ , “ ರಾಜ್ಯ ಸರ್ಕಾರಿ ನೌಕರರ ಇತಿಹಾಸದಲ್ಲೇ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಮಾಣದ ಹಬ್ಬದ ಮುಂಗಡ ಮೊತ್ತವನ್ನು ಹೆಚ್ಚಳ ಮಾಡಿರುವುದು ಇದೇ ಮೊದಲು ಹಾಗಾಗೀ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ ಬೊಮ್ಮಾಯಿರವರಿಗೆ , ಸಚಿವ ಸಂಪುಟದ ಸಚಿವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಸಂಘವು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತದೆ ” ಸರ್ಕಾರಿ ನೌಕರರು ಹಬ್ಬಗಳನ್ನು ಆಚರಿಸಲು ಹಾಲಿ ಇರುವ ಹಬ್ಬದ ಮುಂಗಡ(FA) ರೂ. 10,000 ಗಳಿಂದ 25,000ಗಳಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರಿಗೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದನೆಗಳು -  ಸಿ.ಎಸ್. ಷಡಾಕ್ಷರಿ,  ರಾಜ್ಯಾಧ್ಯಕ್ಷರು 

ಸಿಆರ್ ಪಿ ಮತ್ತು ಬಿ ಆರ್ ಪಿ ಅವರಿಗೆ ತಾಲೂಕಿನ ಒಳಗೆ ಸ್ಥಳ ನಿಯುಕ್ತಿ ಮಾಡುವ ಬಗ್ಗೆ

ಸರಕಾರಿ ನೌಕರರ ಸಂಘದ ಮನವಿಯ ಫಲಶ್ರುತಿ 🪴🪴🪴🪴🪴🪴🪴 ನಿನ್ನೆಯ ದಿನ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು 🌹🌹🌹🌹🌹🌹🌹  ಸಿಆರ್ ಪಿ  ಮತ್ತು ಬಿ ಆರ್ ಪಿ  ಅವರಿಗೆ ತಾಲೂಕಿನ ಒಳಗೆ ಸ್ಥಳ ನಿಯುಕ್ತಿ ಮಾಡುವಂತೆಮನವಿಯನ್ನು ಮಾನ್ಯ ಶಿಕ್ಷಣ  ಸಚಿವರಿಗೆ ಮನವಿ ಮಾಡಿದ ಪ್ರಯುಕ್ತ  ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಅವರಿಗೆ ಶಿಕ್ಷಣ ಸಚಿವರು ಟಿಪ್ಪಣಿ‌ ಮೂಲಕ ನಿರ್ದೇಶನ ಮಾಡಿದ್ದಾರೆ

ಹಬ್ಬದ ಮುಂಗಡದ ಬಗ್ಗೆ ಮಾಹಿತಿ-ಸರ್ಕಾರಿ ನೌಕರರ ಆದ್ಯ ಗಮನಕ್ಕೆ

 ಹಬ್ಬದ ಮುಂಗಡದ ಬಗ್ಗೆ ಮಾಹಿತಿ-ಸರ್ಕಾರಿ ನೌಕರರ ಆದ್ಯ ಗಮನಕ್ಕೆ ಸರ್ಕಾರಿ ನೌಕರರು ಹಬ್ಬಗಳನ್ನು ಆಚರಿಸಲು ಹಾಲಿ ಇರುವ ಹಬ್ಬದ ಮುಂಗಡ ರೂ. 10,000/- ಗಳಿಂದ 25,000/- ಗಳಿಗೆ ಹೆಚ್ಚಳ ಮಾಡುವಂತೆ ಸಂಘದಿAದ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದು ಸಕರಾತ್ಮಕವಾಗಿ ಸ್ಪಂದಿಸಿರುತ್ತಾರೆ.

ರಾಜ್ಯ ಸರ್ಕಾರಿ ನೌಕರರ ಮೇಲಿನ ಹಲ್ಲೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮಾನ್ಯ ಗೃಹ ಸಚಿವರಿಗೆ ಮನವಿ

ರಾಜ್ಯ ಸರ್ಕಾರಿ ನೌಕರರ ಮೇಲಿನ ಹಲ್ಲೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮಾನ್ಯ ಗೃಹ ಸಚಿವರಿಗೆ ಮನವಿ  ಅಕ್ರಮ ಮರಳು ಸಾಗಾಣಿಕೆಗೆ ತಡೆಯೊಡ್ಡಿದ ಎತ್ತಿನಬೂದಿಹಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವೆಂಕಟಸ್ವಾಮಿ ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯ ಗೃಹ ಸಚಿವರಾದ ಶ್ರೀಯುತ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು. ತಕ್ಷಣಕ್ಕೆ ಸ್ಪಂದಿಸಿದ ಮಾನ್ಯ ಗೃಹ ಸಚಿವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಕರೆಮಾಡಿ ಹಲ್ಲೆಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅಗತ್ಯ ಕಾನೂನು ಕ್ರಮವನ್ನು ಜರುಗಿಸುವಂತೆ ಸೂಚಿಸಿದರು

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers