ಸರ್ಕಾರಿ ನೌಕರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ “ ಆರೋಗ್ಯ ಯೋಜನೆ"ಜಾರಿ.
ಇಂದು ನಡೆದ ಸಚಿವ ಸಂಪುಟದ ಅನುಮೋದನೆ
ರಾಜ್ಯ ಸರ್ಕಾರಿ ನೌಕರರ ಹಲವು ವರ್ಷಗಳ ಬೇಡಿಕೆಯಾದ ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬ ಸದಸ್ಯರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ “ ಆರೋಗ್ಯ ಯೋಜನೆ ” ಜಾರಿಗೊಳಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಿ.ಎಸ್ . ಯಡಿಯೂರಪ್ಪರವರಿಗೆ ಅಭಿನಂದನೆಗಳು.
ರಾಜ್ಯ ಸರ್ಕಾರದ 6 ಲಕ್ಷ ನೌಕರರು ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಸುಮಾರು 25 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ .
ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಮುಖ ಬೇಡಿಕೆ ಬಗ್ಗೆ ಐತಿಹಾಸಿಕ ತೀರ್ಮಾನಕೈಗೊಂಡ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ , ಸಚಿವ ಸಂಪುಟದಎಲ್ಲಾ ಸಚಿವರಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬವರ್ಗದವರ ಪರವಾಗಿ ಸಂಘವು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತದೆ
-.ಎಸ್ . ಷಡಾಕ್ಷರಿ , ರಾಜ್ಯಾಧ್ಯಕ್ಷರು.
Comments
Post a Comment